• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರೇಂದ್ರ ಮೋದಿ ಮೀಟಿಂಗ್, ಜಾಕಿಚಾನ್ ಶೂಟಿಂಗ್

|

ನವದೆಹಲಿ, ಏಪ್ರಿಲ್, 5: ಸೇನೆ ಸೇರಿದ ಖುಷಿಯಲ್ಲಿ ಶ್ವಾನಗಳ ನೆಗೆತ, ಸೌಂದರ್ಯಕ್ಕೆ ಹೊಸ ಅರ್ಥ ಹೇಳುವ ಶ್ರೀನಗರದ ದಾಲ್ ಸರೋವರ, ಬಿಳಿ ಹುಲಿಯ ತೀಕ್ಷ್ಣ ನೋಟ.. ನಟಿಯರೊಂದಿಗೆ ಹೆಜ್ಜೆ ಹಾಕಿದ ಜಾಕಿಚಾನ್..

ಅಬ್ಬಬ್ಬಾ,... ಈ ಫೊಟೋಗಳಿಗೆ ಉದ್ದುದ್ದ ಶೀರ್ಷಿಕೆ ಬರೆಯಬಹುದು. ಆದರೆ ಅವು ಚಿತ್ರದಂತೆ ಇದ್ದರೆ ಚೆನ್ನ, ಚಿತ್ರವನ್ನು ನೋಡಿ ಅದರ ಸೌಂದರ್ಯ ಆಸ್ವಾದಿಸಬೇಕೆ ವಿನಃ ಹೆಚ್ಚುವರಿ ಶೀರ್ಪಿಕೆ ಬರೆದು ಅಂದ ಹಾಳು ಮಾಡಬಾರದು.[ಮೋದಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸೌದಿ ಸುಂದರಿಯರು]

ಇಡೀ ದಿನ ದೇಶದಲ್ಲಿ ಏನೇನಾಯಿತು? ಪ್ರತಿಭಟನೆಗಳು, ಪ್ರಾರ್ಥನೆ, ಭೇಟಿ, ಬಾಲಿವುಡ್ ಗ್ಲಾಮರ್ ಎಲ್ಲವನ್ನು ಇಲ್ಲಿ ಕಟ್ಟಿಕೊಡುತ್ತಿದ್ದೇವೆ.. ಚಿತ್ರಗಳ ಮುಖೇನ(ಪಿಟಿಐ ಚಿತ್ರಗಳು)

ಅಂತಾರಾಷ್ಟ್ರೀಯ ಶಾಂತಿ

ಅಂತಾರಾಷ್ಟ್ರೀಯ ಶಾಂತಿ

ಅಂತಾರಾಷ್ಟ್ರೀಯ ಶಾಂತಿಗಾಗಿ ಹುಟ್ಟಿಕೊಂಡಿರುವ ಕಾರ್ನೆಗೀ ಎಂಡೋಮೆಂಟ್ ನ ಅಧ್ಯಕ್ಷ ವಿಲಿಯಂ ಜೆ ಬರ್ನ್ಸ್ ಮತ್ತು ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಮಾಡಿತು.

 ಪ್ರಾರ್ಥನೆ

ಪ್ರಾರ್ಥನೆ

ಯೆಮನ್ ನಲ್ಲಿ ಉಗ್ರರಿಂದ ಬಂಧಿತರಾಗಿರುವ ಪಾದ್ರಿ 'ಟಾಮ್ ಉಝುನಲ್ಲಿ' ಅವರು ಸುರಕ್ಷಿತವಾಗಿ ಬಿಡುಗಡೆಯಾಗಲಿ ಎಂದು ಬೆಂಗಳೂರಿನಲ್ಲಿ ನರ್ಸ್ ಗಳ ಪ್ರಾರ್ಥನೆ

ಪ್ರತಿಭಟನೆ

ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ರಾಂಚಿಯಲ್ಲಿ ಪ್ರತಿಭಟನೆ ನಡೆಸಿದರು.

 ಶ್ವಾನದ ಆಟವಲ್ಲ

ಶ್ವಾನದ ಆಟವಲ್ಲ

ನವದೆಹಲಿಯಲ್ಲಿ ನಡೆದ ಸೈನಿಕ ದಳದ ಬಲ ಪ್ರದರ್ಶನದಲ್ಲಿ ಲ್ಯಾಬ್ರೋಡಾರ್ ಶ್ವಾನದ ಪ್ರದರ್ಶನ.

 ನಾವು ಸಿದ್ಧ

ನಾವು ಸಿದ್ಧ

ತರಬೇತಿಯನ್ನು ಪಡೆದು ಭಾರತದ ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡ 30 ಶ್ವಾನಗಳು.

 ವೈಟ್ ಟೈಗರ್

ವೈಟ್ ಟೈಗರ್

ಮಧ್ಯಪ್ರದೇಶದ ಸಂತಾ ಜಿಲ್ಲೆಯಲ್ಲಿ ಆರಂಭವಾದ ಬಿಳಿಹುಲಿ ರಕ್ಷಿತಾರಣ್ಯ" ವಿಂಧ್ಯ" ದಲ್ಲಿ ಕ್ಯಾಮರಾಕ್ಕೆ ಪೋಸು ನೀಡಿದ ಹುಲಿರಾಯ.

 ಭಾರತದಲ್ಲಿ ಜಾಕಿಚಾನ್

ಭಾರತದಲ್ಲಿ ಜಾಕಿಚಾನ್

ಬಹು ನಿರೀಕ್ಷಿತ ಕುಂಗ್ ಫು ಯೋಗಾ ಸಿನಿಮಾದ ಶೂಟಿಂಗ್ ಜೋಧ್ ಪುರದಲ್ಲಿ ನಡೆಯುತ್ತಿದ್ದು ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಜಾಕಿಚಾನ್.

ಇದ್ಯಾವ ಆಸನ?

ಇದ್ಯಾವ ಆಸನ?

ಜೋಧ್ ಪುರದ ಮಂದಾರ ಗಾರ್ಡನ್ ನಲ್ಲಿ ಜಾಕಿ ಚಾನ್ ಜತೆ ಹೆಜ್ಜೆ ಹಾಕಿದ ಬಾಲಿವುಡ್ ನಟ ಸೋನು ಸೂದ್,

 ಸೌಂದರ್ಯಕ್ಕೆ ಎಣೆ ಎಲ್ಲಿ?

ಸೌಂದರ್ಯಕ್ಕೆ ಎಣೆ ಎಲ್ಲಿ?

ಶ್ರೀನಗರದ ದಾಲ್ ಸರೋವರದ ಸೌಂದರ್ಯದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಈ ಚಿತ್ರ ನೋಡಿ ಸಾಕು.

ರೈಲು ಓಡಿಸೋಕೆ ನಾನು ರೆಡಿ

ರೈಲು ಓಡಿಸೋಕೆ ನಾನು ರೆಡಿ

ಮುಂಬೈನ ಸಬರ್ ಬನ್ ನ ಹವಾನಿಯಂತ್ರಿತ ಲೋಕಲ್ ಟ್ರೇನ್ ಚಾಲನೆಗೆ ಸಿದ್ಧವಾಗಿರುವ ಮಹಿಳೆ ಮುಮ್ತಾಜ್ ಖಾಜಿ

ಯುವರಾಜ ಸೆಲ್ಫಿ

ಯುವರಾಜ ಸೆಲ್ಫಿ

ಮೊಬೈಲ್ ಕಂಪನಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕ್ರಿಕಟಿಗ ಯುವರಾಜ್ ಸಿಂಗ್ ಕಂಪನಿಯ ಪ್ರಮುಖರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News In Pics: Prime Minister Narendra Modi meeting President, Carnegie Endowment for Int'l Peace, William J Burns along delegation in New Delhi on Tuesday. Hollywood actor Jackie Chan with actress Disha Patni and actor Sonu Sood shooting for film "Kung Fu Yoga" in Jodhpur's Mandore Gardens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more