ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಹೋಳಿ ಬಣ್ಣದಲ್ಲಿ ಮಿಂದೆದ್ದ ಭಾರತ

|
Google Oneindia Kannada News

ನವದೆಹಲಿ, ಮಾ. 6: ದೇಶದಲ್ಲೆಡೆ ಶುಕ್ರವಾರ ಹೋಳಿ ಹಬ್ಬದ ಸಂಭ್ರಮ. ಬಣ್ಣಗಳಲ್ಲಿ ಮಿಂದೆದ್ದ ಯುವಕರು ಹಬ್ಬಕ್ಕೆ ಹೊಸ ಮೆರುಗು ತಂದಿದ್ದರು. ಮುಂಬೈ, ಕೋಲ್ಕತ್ತಾ, ನವದೆಹಲಿ, ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಹಬ್ಬದ ಸಡಗರ ಮನೆ ಮಾಡಿತ್ತು.

ಕೇಂದ್ರ ಸಚಿವ ರಾಜ್ ನಾಥ್ ಸಿಂಗ್, ಮನೋಹರ್ ಪರಿಕ್ಕರ್ ಸೇರಿದಂತೆ ಅನೇಕ ಗಣ್ಯರು ಹಬ್ಬ ಆಚರಿಸಿದರು. ಗಡಿ ಕಾಯುವ ಯೋಧರು ಪರಸ್ಪರ ಬಣ್ಣ ಎರಚಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಇವುಗಳನ್ನೆಲ್ಲ ಒಟ್ಟುಗೂಡಿಸಿ ಇಲ್ಲಿ ನೀಡಿದ್ದೇವೆ.[ದೇಶಕ್ಕೆ ರಂಗು ಚೆಲ್ಲಿದ ಬಣ್ಣದ ಹಬ್ಬದ ಸಂಭ್ರಮ]

ಬೆಂಗಳೂರಿನ ಕಚೇರಿಗಳಲ್ಲಿಯೂ ಹೋಳಿಯ ಕಲರ್ ತುಂಬಿತ್ತು. ಶಾಲಾ ಮಕ್ಕಳು ತಾವೇನು ಕಡಿಮೆ ಎಂಬಂತೆ ಬಣ್ಣ ಬಣ್ಣ ಎಂದು ಹಾಡಿದರು. ಹೋಳಿ ಓಕುಳಿಯ ಚಿತ್ರಗಳು ನಿಮಗಾಗಿ...(ಪಿಟಿಐ ಚಿತ್ರಗಳು)

ಬಣ್ಣ ಒಲವಿನ ಬಣ್ಣ

ಬಣ್ಣ ಒಲವಿನ ಬಣ್ಣ

ಜೈಪುರದಲ್ಲಿ ಹೋಳಿ ಆಚರಣೆ ವೇಳೆ ಬಣ್ಣದಲ್ಲಿ ಮಿಂದೆದ್ದ ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ ಯುವಕರ ಜತೆ ವಿದೇಶಿಯರ ಬಣ್ಣದಾಟ ಹೀಗಿತ್ತು.

ಅಹಮದಾಬಾದ್

ಅಹಮದಾಬಾದ್

ಅಹಮದಾಬಾದ್ ನಲ್ಲಿ ಹೋಳಿ ಸಡಗರದಲ್ಲಿ ಯುವತಿಯರು.

ವಿದೇಶಿಯರ ಹಬ್ಬ

ವಿದೇಶಿಯರ ಹಬ್ಬ

ಜೈಪುರದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ವಿದೇಶಿಯರು.

ಯೋಧರ ಹಬ್ಬ

ಯೋಧರ ಹಬ್ಬ

ಶ್ರೀನಗರದಲ್ಲಿ ಹಬ್ಬ ಆಚರಿಸಿದ ಯೋಧರು.

ಗಡಿ ಕಾಯುವುದು ಇದ್ದೇ ಇದೆ

ಗಡಿ ಕಾಯುವುದು ಇದ್ದೇ ಇದೆ

ದೇಶದ ಗಡಿ ಕಾಯುತ್ತ ರಕ್ಷಣೆಗೆ ಬದ್ಧರಾಗಿರುವ ಸೈನಿಕರು ಶುಕ್ರವಾರ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

ಉಜ್ಜಯಿನಿ

ಉಜ್ಜಯಿನಿ

ಉಜ್ಜಯಿನಿಯ ದೇವಾಲಯದಲ್ಲಿ ಭಕ್ತರಿಂದ ವಿಶೇಷ ರೀತಿಯಲ್ಲಿ ಹಬ್ಬ ಆಚರಣೆ.

ರಾಜ್ ನಾಥ್ ಸಿಂಗ್

ರಾಜ್ ನಾಥ್ ಸಿಂಗ್

ಬಣ್ಣದೋಕುಳಿ ಆಡಿ ಡೋಲು ಬಾರಿಸಿದ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್

ಮಧ್ಯ ಪ್ರದೇಶ ಮುಖ್ಯಮಂತ್ರಿ

ಮಧ್ಯ ಪ್ರದೇಶ ಮುಖ್ಯಮಂತ್ರಿ

ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೆಂಡತಿ ಸಾಧನಾ ಸಿಂಗ್ ಜತೆ ಹೋಳಿ ಆಚರಿಸಿದರು.

ವಿದೇಶಿಯರ ಸಂಭ್ರಮ

ವಿದೇಶಿಯರ ಸಂಭ್ರಮ

ಭಾರತೀಯರೊಂದಿಗೆ ಮುಂಬೈನಲ್ಲಿ ಹಬ್ಬ ಆಚರಿಸಿದ ವಿದೇಶಿ ಯುವತಿಯರು.

English summary
Holi celebrations were held in many parts of the country on Friday. Students and youth enjoyed with colors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X