ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಲೆಟ್ ಏರಿದ ಮಹೇಂದ್ರ, ಅರಳಿದ ಹೂಗಳ ಸೌಂದರ್ಯ

|
Google Oneindia Kannada News

ನವದೆಹಲಿ, ಏ. 6: ದೇಶಾದ್ಯಂತ ಸೋಮವಾರ ನಡೆದ ಘಟನಾವಳಿಗಳು ಸಂಭ್ರಮ-ಸಂಕಷ್ಟ ಎರಡರ ಪ್ರತೀಕವಾಗಿದದ್ದವು. ರಾಂಚಿಯ ರಸ್ತೆಯಲ್ಲಿ ಸೋಮವಾರ ಬುಲೆಟ್ ಏರಿ ಬಂದಿದ್ದು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಕಾಣಿಸಿಕೊಂಡಿದ್ದು ಧರೆಗುರಿಳಿದ ಮರ. ಲಕ್ನೋದ ಬೀದಿಗಳಲ್ಲಿ ಆರ್ ಎಸ್ ಎಸ್ ಪಥ ಸಂಚಲನ. ಪರೀಕ್ಷೆಯಲ್ಲಿ ತೇರ್ಗಡೆಯಾದ ಪೊಲೀಸರು ಸಂಭ್ರಮ..

ಶ್ರೀನಗರ ವಿಶ್ವವಿಖ್ಯಾತ ಉದ್ಯಾನವನಕ್ಕೆ ಹೆಂಡತಿಯೊಂದಿಗೆ ಭೇಟಿ ನೀಡಿದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಕ್ತಿ ಮೊಹಮ್ಮದ್ ಸಯ್ಯೀದ್, ಅಕಾಲಿಕ ಮಳೆ ಪರಿಣಾಮ ಹಾಳಾದ ಬೆಳೆಯ ನಡುವೆ ಆಗಸ ನೋಡುತ್ತ ಕುಳಿತಿರುವ ಬಿಹಾರದ ರೈತ. ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ಬೆಂಗಳೂರು ರಾಯಲ್ ವಾಲೆಂಜರ್ಸ್ ತಂಡದ ಆಟಗಾರ ವಿರಾಟ್ ಕೊಹ್ಲಿ... ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ....(ಪಿಟಿಐ ಚಿತ್ರಗಳು)

ನಾಯಕನ ಬುಲೆಟ್ ಸವಾರಿ

ನಾಯಕನ ಬುಲೆಟ್ ಸವಾರಿ

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಮಹೇಂದ್ರ ಸಿಂಗ್ ಧೋನಿ ರಾಂಚಿಯ ರಸ್ತೆಯಲ್ಲಿ ಬೈಕ್ ಓಡಿಸಿದ ಬಗೆ. ವಿಶ್ವಕಪ್ ಅಭಿಯಾನದಿಂದ ಹಿಂದಿರುಗಿ ಮಗುವನ್ನು ಮುದ್ದಾಡಿದ ಧೋನಿ ಇದೀಗ ಜಾಲಿ ಮೂಡ್ ನಲ್ಲಿದ್ದಾರೆ.

ಸರ್ಕಸ್ ನಮಗೂ ಬರುತ್ತೇ..

ಸರ್ಕಸ್ ನಮಗೂ ಬರುತ್ತೇ..

ಉತ್ತರ ಪ್ರದೇಶದ ಲಕ್ನೋ ದಲ್ಲಿ ಏರ್ಪಡಿಸಿದ್ದ ಸೈಕಲ್ ರೇಸ್ ಉದ್ಘಾಟನೆಗೂ ಮುನ್ನ ಸ್ಟಂಟ್ ತೋರಿಸಿದ ರೇಸ್ ಪ್ರೇಮಿ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಾರ್ಯಕ್ರಮ ಉದ್ಘಾಟನೆಗೂ ಆಗಮಿಸುವ ಮುನ್ನ ಕಂಡು ಬಂದ ದೃಶ್ಯ.

ಪ್ರಾರ್ಥನೆ ಸಲ್ಲಿಸುವುದು ಹೀಗೆ

ಪ್ರಾರ್ಥನೆ ಸಲ್ಲಿಸುವುದು ಹೀಗೆ

ಪವಿತ್ರ ಈಸ್ಟರ್ ಹಬ್ಬದ ಅಂಗವಾಗಿ ಪ್ರಾರ್ಥನೆ ಸಲ್ಲಿಸಿದ ಯುವತಿಯರು. ಏಪ್ರಿಲ್ 5 ರಂದು ಪ್ರಪಂಚದಾದ್ಯಂತ ಈಸ್ಟರ್ ಹಬ್ಬ ಆಚರಣೆ ಮಾಡಲಾಯಿತು. ಪಾಕಿಸ್ತಾನದ ಕರಾಚಿಯಲ್ಲೂ ಕ್ರಿಶ್ಚಿಯನ್ನರು ಹಬ್ಬ ಆಚರಣೆ ಮಾಡಿದರು.

ಆದರ್ಶ ಪಾಲನೆ

ಆದರ್ಶ ಪಾಲನೆ

ಬಾಬೂ ಜಗಜೀವನ್ ರಾಮ್ ಜನ್ಮದಿನ ಹಿನ್ನೆಲೆಯಲ್ಲಿ ನಡೆದ ಅಂತರ್ಜಾತಿ ವಿವಾಹ. ಹೈದ್ರಾಬಾದ್ ನಲ್ಲಿ 50ಕ್ಕೂ ಹೆಚ್ಚು ಜೋಡಿಗಳು ವೈವಾವಿಕ ಜೀವನಕ್ಕೆ ಕಾಲಿಟ್ಟರು.

ಇದು ಹೋಳಿ ಆಚರಣೆಯಲ್ಲ

ಇದು ಹೋಳಿ ಆಚರಣೆಯಲ್ಲ

ಇದು ಯಾವ ಹೋಳಿ ಆಚರಣೆಯಲ್ಲಿ ಎರಚಿದ ಬಣ್ಣವಲ್ಲ. ಫಾರ್ಮುಲಾ ಖ್ಯಾತಿಯ 1 ವೆಠ್ಠಲ್ ಡೇವಿಡ್ ಕೋಲ್ಟ್ ಹಾರ್ಡ್ ಹೈದ್ರಾಬಾದ್ ನಲ್ಲಿ ಪ್ರದರ್ಶನ ನೀಡಿದ ಪ್ರದರ್ಶನದ ವೇಳೆ ಕಂಡು ಬಂದ ರಂಗು.

ಪಟ್ಟ ಕಾಣುತ್ತಿದೆಯೇ ?

ಪಟ್ಟ ಕಾಣುತ್ತಿದೆಯೇ ?

ಏಪ್ರಿಲ್ 8 ರಿಂದ ಐಪಿಎಲ್ ಪಂದ್ಯಾವಳಿ ಆರಂಭವಾಗಲಿದ್ದು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಆಟಗಾರ ವಿರಾಟ್ ಕೊಹ್ಲಿ ಕಣ್ಣಲ್ಲಿ ಪ್ರಶಸ್ತಿ ಕನಸು ಇದೆಯೇ? ವಿಶ್ವಕಪ್ ಅಭಿಯಾನದ ಕಹಿ ನೆನಪನ್ನು ಐಪಿಎಲ್ ಗೆಲ್ಲುವ ಮೂಲಕ ಮರೆಯಲಿದ್ದಾರೆಯೇ?

ಆರ್‌ ಎಸ್ ಎಸ್ ಶಕ್ತಿ ಪ್ರದರ್ಶನ

ಆರ್‌ ಎಸ್ ಎಸ್ ಶಕ್ತಿ ಪ್ರದರ್ಶನ

ಉತ್ತರ ಪ್ರದೇಶದ ಲಕ್ನೋ ದಲ್ಲಿ ಪಥಸಂಚಲನ ನಡೆಸಿದ ಆರ್ ಎಸ್ ಎಸ್ ಕಾರ್ಯಕರ್ತರು. ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜೀ ಆರ್ಎಸ್ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸುದ್ದಿಯಾಗಿತ್ತು.

ಸಾಧಿಸಿ ಬಿಟ್ಟೆವು

ಸಾಧಿಸಿ ಬಿಟ್ಟೆವು

ಮೋರಾಬಾದ್ ನ ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನಲ್ಲಿ ಪದವಿ ಪಡೆದ ಪೊಲೀಸ್ ಕಂಪ್ಯೂಟರ್ ಆಪರೇಟರ್ ಗಳು ಸಂಭ್ರಮಿಸಿದ ಪರಿ.

ಹೂವೇ ಹೂವೇ

ಹೂವೇ ಹೂವೇ

ಏಷ್ಯಾದಲ್ಲೇ ಅತಿದೊಡ್ಡ ಹೂವಿನ ಉದ್ಯಾನ ಎಂದು ಹೆಸರು ಪಡೆದಿರುವ ಕಾಶ್ಮೀರದ ತುಲೀಪ್ ಗಾರ್ಡನ್ ನಲ್ಲಿ ಕಂಡುಬಂದ ದೃಶ್ಯ ಹೊಸ ಲೋಕಕ್ಕೆ ಕರೆದೊಯ್ದಂತ್ತಿತ್ತು.

ದಾರಿ ಕಾಣದಾಗಿದೆ

ದಾರಿ ಕಾಣದಾಗಿದೆ

ಅಕಾಲಿಕ ಮಳೆಯಿಂದ ಬೆಳೆದಿದ್ದ ಬೆಳೆಯನ್ನು ಕಳೆದಿಕೊಂಡ ಬಿಹಾರದ ರೈತನ ಇಂದಿನ ಸ್ಥಿತಿ. ಸರ್ಕಾರಗಳು ಕೇವಲ ಸಾಂತ್ವನ ಹೇಳುವುದರಲ್ಲಿ ನಿರತವಾಗಿದೆಯೇ ವಿನಃ ಪರಿಹಾರ ಕಲ್ಪಿಸಿಕೊಡುವ ಪ್ರಯತ್ನ ಮಾಡದಿರುವುದು ದುರ್ದೈವ.

English summary
News in Pics: Indian Cricket team skipper Mahendra Singh Dhoni riding a bullet on the streets of Ranchi on Monday. RSS volunteers during Path Sanchalan in Lucknow.. and some more news with Photos of April 6, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X