ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರ ದೇಶದಲ್ಲಿ ಏನೇನಾಯ್ತು? ಒಂದು ನೋಟ

|
Google Oneindia Kannada News

ನವದೆಹಲಿ, ಆ. 07: ಸಂಸತ್ ಸದಸ್ಯರ ಅಮಾನತು ಕ್ರಮವನ್ನು ವಿರೋಧಿಸಿ ನಡೆಯುತ್ತಿರುವ ಕಾಂಗ್ರೆಸ್ ಅಧಿನಾಯಕರ ಪ್ರತಿಭಟನೆ ಶುಕ್ರವಾರವೂ ಮುಂದುವರಿಯಿತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಮುಖಂಡರು ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು.

ನವದೆಹಲಿಯಲ್ಲಿ ನಡೆದ ಖಾಸಗಿ ಕಂಪನಿಯ ಮೊಬೈಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹಾ. ವ್ಯಾಪಂ ಹಗರಣದಲ್ಲಿ ಸಿಲುಕಿರುವ ಬಿಜೆಪಿ ಅಧಿಕಾರ ನಡೆಸಲು ಅಯೋಗ್ಯವಾಗಿದೆ. ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಆರೋಪಿಸಿ ಎಡರಂಗದ ಕಾರ್ಯಕರ್ತರು ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದರು. ಶುಕ್ರವಾರ ದೇಶಾಸದ್ಯಂತ ನಡೆದ ವಿವಿಧ ಘಟನಾವಳಿಗಳ ಚಿತ್ರಣ ಇಲ್ಲಿದೆ..... (ಪಿಟಿಐ ಚಿತ್ರಗಳು)

5 ನೇ ದಿನಕ್ಕೆ ಕಾಂಗ್ರೆಸ್ ಪ್ರತಿಭಟನೆ

5 ನೇ ದಿನಕ್ಕೆ ಕಾಂಗ್ರೆಸ್ ಪ್ರತಿಭಟನೆ

ಕಾಂಗ್ರೆಸ್ ನ 25 ಸಂಸತ್ ಸದಸ್ಯರ ಅಮಾನತು ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಅಧಿನಾಯಕರು ನಡೆಸುತ್ತಿರುವ ಪ್ರತಿಭಟನೆಗೆ ಆಗಮಿಸದ ರಾಹುಲ್ ಗಾಂಧಿ.

ಕಾಂಗ್ರೆಸ್ ಅಧಿನಾಯಕರು ಭಾಗಿ

ಕಾಂಗ್ರೆಸ್ ಅಧಿನಾಯಕರು ಭಾಗಿ

ಸ್ಪೀಕರ್ ಸುಮಿತ್ರಾ ಮಹಾಜನ್ ಕಾಂಗ್ರೆಸ್ ನ ಸದ್ಯರನ್ನು 5 ದಿನ ಕಾಲ ಸಂಸತ್ ಕಲಾಪದಿಂದ ಅಮಾನತು ಮಾಡಿದ್ದರು. ಸೋಮವಾರದಿಂದ ಕಾಂಗ್ರೆಸ್ ನ ಯಾವೊಬ್ಬ ಸದಸ್ಯರು ಕಲಾಪದಲ್ಲಿ ಪಾಲ್ಗೊಳ್ಳದೇ ಪ್ರತಿಭಟನೆ ನಡೆಸಿದರು.

ಎಡರಂಗದ ಪ್ರತಿಭಟನೆ

ಎಡರಂಗದ ಪ್ರತಿಭಟನೆ

ವ್ಯಾಪಂ ಹಗರಣದಲ್ಲಿ ಸಿಲುಕಿರುವ ಬಿಜೆಪಿ ಅಧಿಕಾರ ನಡೆಸಲು ಅಯೋಗ್ಯವಾಗಿದೆ. ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಆರೋಪಿಸಿ ಎಡರಂಗದ ಕಾರ್ಯಕರ್ತರು ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದರು.

ವಸುಂಧರಾ ದರ್ಶನ

ವಸುಂಧರಾ ದರ್ಶನ

ಲಲಿತ್ ಮೋದಿ ವೀಸಾ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ವಡೋದರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

ಸುಂದರ ಸೋನಾಕ್ಷಿ

ಸುಂದರ ಸೋನಾಕ್ಷಿ

ನವದೆಹಲಿಯಲ್ಲಿ ನಡೆದ ಖಾಸಗಿ ಕಂಪನಿಯ ಮೊಬೈಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹಾ

ಸೈನಿಕರ ಶಿಸ್ತು

ಸೈನಿಕರ ಶಿಸ್ತು

ಇಂಗ್ಲೆಂಡ್ ಗೆ ತೆರಳಿದ್ದ ಭಾರತದ ವಾಯುಸೇನೆಯ 30 ಅಧಿಕಾರಿಗಳು ಒಂದೆಡೆ ನಿಂತು ಶಿಸ್ತು ಪ್ರದರ್ಶನ ಮಾಡಿದ ರೀತಿ.

ನಾನೇ ಮೊದಲು

ನಾನೇ ಮೊದಲು

ಚಿನ್ನದ ಹುಡುಗಿ ಅಚ್ಚು ಎಂ ಎಂ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆಯುತ್ತಿರುವ ಹರ್ಡಲ್ಸ್ ನಲ್ಲಿ ಎಲ್ಲರಿಗಿಂತ ಮುಂದೆ ನಾನೇ ಎಂಬಂತೆ ಓಡುತ್ತಿರುವುದು ಕಂಡಿದ್ದು ಹೀಗೆ.

ರೈಲು ದುರಂತ

ರೈಲು ದುರಂತ

ಮಧ್ಯ ಪ್ರದೇಶದಲ್ಲಿ ನಡೆದ ರೈಲು ದುರಂತದ ಕಹಿ ನೆನಪು ಮರೆಯಾಗಿಲ್ಲ. ಅನೇಕ ಜೀವಗಳು ಬಲಿಯಾಗಿದ್ದು ಸರ್ಕಾರ ಪರಿಹಾರ ಒದಗಿಸಿದೆ. ಜಖಂ ಗೊಂಡಿದ್ದ ರೈಲು ಬೋಗಿಗಳನ್ನು ತೆರವು ಮಾಡಲಾಯಿತು.

ಸೋನಂ ಚಮಕ್

ಸೋನಂ ಚಮಕ್

ಮುಂಬೈ ನಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಆಭರಣ ಪ್ರದರ್ಶನದ ಅಂತಿಮ ದಿನ ಬಾಲಿವುಡ್ ಬೆಡಗಿ ಸೋನಂ ಕಪೂರ್ ಹೆಜ್ಜೆ ಹಾಕಿದರು.

ಈರುಳ್ಳಿ ಕೆಜಿಗೆ ಎಷ್ಟು?

ಈರುಳ್ಳಿ ಕೆಜಿಗೆ ಎಷ್ಟು?

ಈರುಳ್ಳಿ ದರ ದೇಶಾದ್ಯಂತ ಏರಿಕೆಯಾಗುತ್ತಲೇ ಇದ್ದು ಉತ್ತಮ ಈರುಳ್ಳಿ ಕೆಜಿಗೆ 60 ರು. ಸಮೀಪ ಇದೆ. ಅಲಹಬಾದ ಮಾರುಕಟ್ಟೆಗೆ ಆಗಮಿಸಿದ ಈರುಳ್ಳಿ ವ್ಯಾಪಾರಕ್ಕೆ ತೆರಳುತ್ತಿದ್ದದ್ದು ಕಂಡು ಬಂದಿದ್ದು ಹೀಗೆ.

ಸ್ವಾತಂತ್ರ್ಯೋತ್ಸವ ಬಂತು

ಸ್ವಾತಂತ್ರ್ಯೋತ್ಸವ ಬಂತು

ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಇಡೀ ದೇಶವೇ ಸಿದ್ಧವಾಗುತ್ತಿದ್ದು ದಕ್ಷಿಣ ದಿನ್ ಜಾಪುರ ದಲ್ಲಿ ಮಕ್ಕಳು ತ್ರಿವರ್ಣ ಧ್ವಜ ಹಿಡಿದು ಕುಣಿದಿದ್ದು ಹೀಗೆ.

English summary
News in Pics: Congress President Sonia Gandhi, Vice President Rahul Gandhi, senior leader Ghulam Nabi Azad and other MPs during a protest against suspension of 25 party members, during the Monsoon session. Left parties leaders protest against Vyapam Scam and suspension of 25 Congress members, during the Monsoon session at Parliament in New Delhi on Friday. The whole day news in pics, August 8, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X