ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮದ ರಾಜಹಂಸ 'ಎತ್ತಿನ ಬಂಡಿ', ಹೋಗಿ ಓಡಾಡಿ ಬನ್ನಿ

By Vanitha
|
Google Oneindia Kannada News

ಬೆಂಗಳೂರು,ಫೆಬ್ರವರಿ,22: ಹಳ್ಳಿಯ ಜಾನಪದ ಸೊಗಡು ಸವಿಯುವಾಗ ಸಿಗುವ ಸಂತೋಷ ನಾವು ನಗರದಲ್ಲಿದ್ದು, ಜಾಲಿ ರೈಡಿನಿಂದಲೋ ಮಲ್ಟಿಪ್ಲೆಕ್ಸ್ ನಲ್ಲಿ ಕುಳಿತು ತಿಂಗಳಿಗೆ ನಾಲ್ಕೈದು ಸಿನಿಮಾ ನೋಡುವುದರಿಂದ ಸಿಗುವುದಿಲ್ಲ ಎಂಬುದು ಗ್ರಾಮದ ಪರಿಸರ ಅರಿವಿರುವ ಪ್ರತಿಯೊಬ್ಬರಿಗೂ ತಿಳಿದ ವಿಷಯ.

ಹಳ್ಳಿ ಎಂದಾಕ್ಷಣ ಅಲ್ಲಿರುವ ಹಚ್ಚ ಹಸಿರಿನ ಹೊಲ ಗದ್ದೆ, ದನ ಕರು, ಹಳ್ಳಿಗಳ ವಿಶೇಷ ಖಾದ್ಯಗಳು ಅಬ್ಬಬ್ಬಾ ಒಂದೇ ಎರಡೇ ಗ್ರಾಮದ ಸೊಗಡುಗಳು. ಇವುಗಳ ಜೊತೆ ಹಳ್ಳಿ ಮನೆಯ ರಾಜಹಂಸ ಎತ್ತಿನ ಬಂಡಿ. ಅದರಲ್ಲಿ ಊರು ತುಂಬಾ ಒಂದು ಸುತ್ತು ಹಾಕಿ ಬಂದರಂತೂ ಕೇಳುವುದೇ ಬೇಡ. ಅಷ್ಟೊಂದು ಸಂತಸ ನಮ್ಮ ಮನದಲ್ಲಿ ತುಂಬಿ ತುಳುಕುತ್ತಿರುತ್ತದೆ.

ಎತ್ತಿನ ಬಂಡಿಯಲ್ಲಿ ಹೋಗಿ ಬಂದು ಇಳಿಯುವುದೇ ತಡ ಅದರಿಂದ ಪಡೆದ ಅನುಭವವನ್ನು ಎಲ್ಲರಿಗೂ ಹೇಳಿಕೊಂಡು ಬಂದು ಅವರಲ್ಲಿಯೂ ಎತ್ತಿನ ಬಂಡಿ ಪಯಣದ ಬಗ್ಗೆ ಕುತೂಹಲ ಹುಟ್ಟಿಸುತ್ತೇವೆ. ಅವರು ಅದರಲ್ಲಿ ಹೋಗಿ ಆ ಅನುಭವ ಪಡೆಯುವವರೆಗೂ ನಮ್ಮ ಅನುಭವದ ಕ್ಷಣಗಳು ಹಂಚಿಕೆಯಾಗುತ್ತಲೇ ಇರುತ್ತದೆ.[ನಮ್ಮ ನೆಲವನ್ನು ಮರೆಯದಿದ್ದರೆ ಒಳಿತು ನಮ್ಮನ್ನು ಬಿಟ್ಟು ಹೋಗಲ್ಲ]

ಇಡೀ ಕುಟುಂಬದ ದವಸ ಧಾನ್ಯದ ಭಾರದಿಂದ ಹಿಡಿದು ಪ್ರತಿಯೊಂದನ್ನು ಹೊರುವ ಎತ್ತುಗಳು ಮನೆಯ ಸಮೃದ್ಧಿಯ ಪ್ರತೀಕವೇ ಆಗಿರುತ್ತದೆ. ಬನ್ನಿ ಚಿಕ್ಕಮಗಳೂರಿನಲ್ಲಿ ಇದ್ದ ಕಂಡು ಬಂದ ಎತ್ತಿನ ಬಂಡಿ ಹಬ್ಬವನ್ನು ಸವಿಯೋಣ. ಇತರ ಸುದ್ದಿಗಳನ್ನು ಓದೋಣ. [ಚಿತ್ರಗಳು: ಪಿಟಿಐ]

ಹೊಯ್.. ಹೊಯ್..ಹೊಯ್

ಹೊಯ್.. ಹೊಯ್..ಹೊಯ್

ಚಿಕ್ಕಮಗಳೂರಿನ ಗೌಡನಹಳ್ಳಿಯಲ್ಲಿ ಭಾನುವಾರ ಎತ್ತಿನಗಾಡಿ ಸ್ಪರ್ಧೆ ಆಯೋಜಿಸಿದ್ದು, ಅದರಲ್ಲಿ ಪ್ರತಿಯೊಬ್ಬ ಹಳ್ಳಿಗರು ನಾ ಮುಂದು ತಾ ಮುಂದು ಎಂದು ಭಾಗವಹಿಸಿ ಸಂಭ್ರಮಿಸಿದ್ದು, ವಿಶೇಷವಾಗಿತ್ತು.

ಹಿರಿಯರಿಗೆ ಭಾಗಿದ ನರೇಂದ್ರ ಮೋದಿ

ಹಿರಿಯರಿಗೆ ಭಾಗಿದ ನರೇಂದ್ರ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಶತಮಾನೋತ್ಸವ ಸಮಾರಂಭದಲ್ಲಿ ಹಿರಿಯ ಅಜ್ಜಿಗೆ ಭಾಗಿ ನಮಸ್ಕರಿಸಿ ಹಿರಿಯರ ಮೇಲಿರುವ ಗೌರವ ವ್ಯಕ್ತಪಡಿಸಿದರು. ಮೂರು ವರ್ಷಗಳ ಶತಮಾನೋತ್ಸವ ಸಂಭ್ರಮವನ್ನು ಶ್ರೀ ಗೌದಿಯಾ ಮಠ ಮತ್ತು ಮಿಷನ್ ಕೊಲ್ಕತ್ತಾದಲ್ಲಿ ಭಾನುವಾರ ಆಯೋಜಿಸಿತ್ತು.

ತಮಿಳುನಾಡಿನಲ್ಲಿ ಕುಂಭಕೋಣಮ್ ಮಹಾಮಹಂ

ತಮಿಳುನಾಡಿನಲ್ಲಿ ಕುಂಭಕೋಣಮ್ ಮಹಾಮಹಂ

ತಮಿಳುನಾಡಿನಲ್ಲಿ ನಡೆದ ಕುಂಭಕೋಣಮ್ ಮಹಾಮಹಂ ಸಾವಿರಾರು ಭಕ್ತರ ವೇದಿಕೆ ಕಲ್ಪಿಸಿಕೊಟ್ಟಿತು. ಅದರಲ್ಲಿ ಇಳಿವಯಸ್ಸಿನಲ್ಲಿಯೂ ಕುಂಭಕೋಣಮ್ ಮಹಾಮಹಂನಲ್ಲಿ ಪಾಲ್ಗೊಂಡು ನದಿಯಲ್ಲಿ ಮಿಂದೆದ್ದು ಪುನೀತರಾದರು.

ಭಾರತ ಅಭಿವೃದ್ದಿ ಆಗಲು ಏನು ಮಾಡಬೇಕು?

ಭಾರತ ಅಭಿವೃದ್ದಿ ಆಗಲು ಏನು ಮಾಡಬೇಕು?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಯಾಮ ಪ್ರಸಾದ್ ಮುಖರ್ಜಿ ರಾಷ್ಟ್ರೀಯ ರರ್ಬನ್ ಮಿಷನ್ ನ್ನು ಭಾನುವಾರ ಚತ್ತೀಸಗಡದ ರಾಜನಂದನ್ ಗಾವ್ ನಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಕುರಿತು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಚತ್ತಿಸ್ ಗಡದ ಮುಖ್ಯಮಂತ್ರಿ ರಾಮನ್ ಸಿಂಗ್ ಇನ್ನಿತರರು ಭಾಗವಹಿಸಿದ್ದರು.[ಬಡವರಿಗಾಗಿ ಮಿಡಿದ ಮೋದಿ, 5 ಕೋಟಿ ಮನೆ ನಿರ್ಮಾಣ ಘೋಷಣೆ]

English summary
Villagers take part in bullock cart race at gowdanahalli near Chikmagalur in Karnataka. Prime Minister Narendra Modi addressing during Three years long Centenary Celebration of Sri Gaudiya Math and Mission in Kolkata. An old woman taking holy bath at the Kumbakonam Mahamaham pond on the occasion of the Mahamaham festival 2016 in Kumbakonam, Tamil Nadu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X