ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ.7: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಮೇ.7: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

17.15: ಚೆನ್ನೈ ಸಮೀಪದ ಸಿಂಗಪೆರುಮಾಳ್ ಕೋಯಿಲ್ ನಲ್ಲಿರುವ ಮಹೀಂದ್ರಾ ವರ್ಲ್ಡ್ ಸಿಟಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಭೇಟಿ ನೀಡಿದ್ದಾರೆ. ಬಿಎಂಡಬ್ಲ್ಯೂ ಕಾರು ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಸಿಬ್ಬಂದಿಯಂತೆ ಯೂನಿಫಾರ್ಮ್ ಧರಿಸಿ ಫ್ಯಾಕ್ಟರಿಯಲ್ಲಿ ಓಡಾಡಿದರು.

17.00: ಡಾಲರ್ ಎದುರು ರುಪಾಯಿ ದರ ಕುಸಿತ. 64ರುಗೆ ಇಳಿಕೆ. 20 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಈ ಹಂತಕ್ಕೆ ಬಂದ ಮೌಲ್ಯ.

Sachin Tendulkar

16.45: ಪ್ರಧಾನಿ ನರೇಂದ್ರ ಮೋದಿ ಆರು ಜಾಫ್ನಾದಲ್ಲಿರುವ ತಮಿಳರಿಗೆ 27,000 ಮನೆ ಹಸ್ತಾಂತರಿಸಿದ್ದಾರೆ.
15.30: ಗಾಯಕ ಅಭಿಜಿತ್ ವಿರುದ್ಧ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬುಧವಾರ ಮಾಡಿದ ಟ್ವೀಟ್ ಗೆ ಅಭಿಜಿತ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

14.45: ಆರ್ ಜೆ ಡಿಯಿಂದ ಪಪ್ಪುಯಾದವ್ ಅವರನ್ನು ಉಚ್ಚಾಟಿಸಲಾಗಿದೆ.
14.20: ಸೆನ್ಸೆಕ್ಸ್ ಮತ್ತೆ 250 ಅಂಶಗಳು ಕುಸಿತ. ನಿಫ್ಟಿ 8 ಅಂಕಗಳು 8,000 ಅಂಶಗಳಿಗೆ ಇಳಿದಿದೆ.
14.30: ಬಾಲಾಪರಾಧಿ ತಿದ್ದುಪಡಿ ಕಾಯ್ದೆಗೆ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ.

14.00: ಹಿಟ್ ಅಂಡ್ ರನ್ ಕೇಸಿನಲ್ಲಿ ಫಿಟ್ ಆಗಿರುವ ಸಲ್ಮಾನ್ ಖಾನ್ ಅವರನ್ನು ನೋಡಲು ಬಾಂದ್ರಾ ನಿವಾಸಕ್ಕೆ ನಟ ಅಮೀರ್ ಖಾನ್, ರಾಜ್ ಠಾಕ್ರೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

13.15: ರಾಹುಲ್ ಗಾಂಧಿ ಅವರು ಮೇ 12ರಂದು ಪಾದಯಾತ್ರೆ ಮುಂದುವರೆಸಿ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ 5 ಗ್ರಾಮಗಳಲ್ಲಿ ಸಂಚರಿಸಲಿದ್ದಾರೆ.

Aamir Khan

12.45: ಪಶ್ಚಿಮ ಬಂಗಾಲದ ದುರ್ಗಾಪುರದ ಕಲ್ಲಿದ್ದಲು ಗಣಿಯಲ್ಲಿ 45ಕ್ಕೂ ಅಧಿಕ ಮಂದಿ ಸಿಲುಕಿದ್ದಾರೆ. ಗಣಿ ಮೇಲ್ಛಾವಣಿ ಕುಸಿತ ಉಂಟಾಗಿದೆ.

12.40: 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ಸಲ್ಮಾನ್ ಖಾನ್ ಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಪಿಟೀಷನ್ ಹಾಕಲಾಗಿದೆ.

12.30: ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡುತ್ತಾ, ಅಮೇಥಿಯಲ್ಲಿ ಫುಡ್ ಪಾರ್ಕ್ ನಿಂದ ರೈತರಿಗೆ ಲಾಭವಾಗುತ್ತಿತ್ತು. ಅದರೆ, ಮೋದಿ ಇದನ್ನು ಕಿತ್ತುಕೊಂಡರು. ಅಮೇಥಿಗೆ ಫುಡ್ ಪಾರ್ಕ್ ನೀಡಿ ಎಂದು ಕೇಳಿದರು.

12.15: ಕೇರಳ: ತರಬೇತುದಾರನ ಕಿರುಕುಳಕ್ಕೆ ಬೇಸತ್ತು ಮಹಿಳಾ ಅಥ್ಲೀಟ್ ಗಳು ವಿಷ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಓರ್ವ ಅಥ್ಲೀಟ್ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. [ಹೆಚ್ಚಿನ ಸುದ್ದಿ ಇಲ್ಲಿ ಓದಿ]

12.00: ಪಂಜಾಬಿನ ಮೋಗಾ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಡಿಜಿಪಿ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

11.45: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ತಾತ್ಕಾಲಿಕ ರಿಲೀಫ್. ಆರೆಸ್ಸೆಸ್ ವಿರುದ್ಧ ಗಾಂಧೀಜಿ ಹತ್ಯೆ ಆರೋಪ ಹೊರೆಸಿದ್ದ ರಾಹುಲ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಸುಪ್ರೀಂಕೋರ್ಟ್ ಈ ಕೇಸಿನ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿದೆ.

11.40: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅರುಣ್ ಜೇಟ್ಲಿ ಅವರು ಇ-ಭಾರತ್/ಇಂಡಿಯಾ ಹಾಗೂ ಇ-ಬುಕ್ ಪ್ರಕಟಿಸಿದ್ದಾರೆ.

News Flash: Supreme Court stays defamation proceedings against Rahul Gandhi

11.30: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಜಿಎಸ್ ಟಿ, ರಿಯಲ್ ಎಸ್ಟೇಟ್ ಮಸೂದೆ ನಂತರ ಕಪ್ಪುಹಣ ವಾಪಸ್ ಕುರಿತಂತೆ ಮಸೂದೆ ಮಂಡನೆ ಮಾಡಲಿದೆ.

11.15:
ಎಎಪಿ ಮುಖಂಡ ಕುಮಾರ್ ವಿಶ್ವಾಸ್ ಮೇಲಿನ ಆರೋಪ ಪ್ರಕರಣ ಈಗ ದೆಹಲಿ ಗವರ್ನರ್ ಲೆ. ನಜೀಬ್ ಜಂಗ್ ಅಂಗಳಕ್ಕೆ ಇಳಿದಿದೆ. ಕೇಂದ್ರ ಸರ್ಕಾರದ ನೆರವು ಅಗತ್ಯವಿದೆ ಎಂದು ಮಹಿಳಾ ಆಯೋಗದ ಬರ್ಖಾ ಶುಕ್ಲಾ ಹೇಳಿದ್ದಾರೆ.

11.00: ಭ್ರಷ್ಟಾಚಾರ ಬಯಲಿಗೆಳೆಯುವವರ ಸಂರಕ್ಷಣಾ ಕಾಯ್ದೆಗೆ ಎನ್ ಡಿಎ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದೆ. ಇದರಿಂದ ಆರ್ ಟಿಐ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ಸಿಕ್ಕಂತಾಗುತ್ತದೆ. (ಒನ್ ಇಂಡಿಯಾ ಸುದ್ದಿ)

English summary
Amid controversy over Salman Khan's interim bail, at least 10 people were killed and many more were injured during an explosion at a cracker factory in West Bengal. Follow all news updates in brief here on Thursday, May 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X