ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯಲ್ಲಿ 'ನವಜಾತ ಕರುವಿನ ರಕ್ತ' ಬಳಕೆ!?

|
Google Oneindia Kannada News

ನವದೆಹಲಿ, ಜೂನ್ 16: ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯಲ್ಲಿ ಗೋವಿನ ರಕ್ತವನ್ನು ಬಳಸಲಾಗುತ್ತಿದೆ ಎಂಬ ಬಗ್ಗೆ ಹರಿದಾಡುತ್ತಿದ್ದ ವಿವಾದಿತ ಪೋಸ್ಟ್ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿ ಆಧಾರಿತ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

"ಕೊವಾಕ್ಸಿನ್ ಲಸಿಕೆ ಉತ್ಪಾದನೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪೋಸ್ಟ್‌ಗಳು ಹರಿದಾಡುತ್ತಿವೆ. ಕೊವಾಕ್ಸಿನ್ ಲಸಿಕೆಯಲ್ಲಿ ನವಜಾತ ಕರುಗಳ ರಕ್ತಸಾರವನ್ನು ಹೊಂದಿರುತ್ತದೆ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ." ಈ ಪೋಸ್ಟ್‌ಗಳಲ್ಲಿ ಸತ್ಯಗಳನ್ನು ತಿರುಚಲಾಗಿದೆ ಮತ್ತು ತಪ್ಪಾಗಿ ತೋರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೊವಿಶೀಲ್ಡ್ ಮತ್ತು ಸ್ಪುಟ್ನಿಕ್-ವಿ ಲಸಿಕೆಗಿಂತ ಕೊವ್ಯಾಕ್ಸಿನ್ ದುಬಾರಿ ಯಾಕೆ? ಕೊವಿಶೀಲ್ಡ್ ಮತ್ತು ಸ್ಪುಟ್ನಿಕ್-ವಿ ಲಸಿಕೆಗಿಂತ ಕೊವ್ಯಾಕ್ಸಿನ್ ದುಬಾರಿ ಯಾಕೆ?

ಆರ್‌ಟಿಐ ಪ್ರಶ್ನೆಗೆ ನೀಡಿರುವ ಪ್ರತಿಕ್ರಿಯೆ ಪ್ರಕಾರ, "ಕೊವಾಕ್ಸಿನ್ ಲಸಿಕೆಯು ನವಜಾತ ಕರುಗಳ ಹೆಪ್ಪುಗಟ್ಟಿದ ರಕ್ತದ ಅಂಶವನ್ನು ಒಳಗೊಂಡಿದೆ ಎಂದು ಮೋದಿ ಸರ್ಕಾರ ಒಪ್ಪಿಕೊಂಡಿದೆ. 20 ದಿನಗಳಿಗಿಂತ ಕಡಿಮೆ ವಯಸ್ಸಿನ ಹಸು-ಕರುಗಳನ್ನು ವಧಿಸಿ ನಂತರ ಪಡೆದ ಹೆಪ್ಪುಗಟ್ಟಿದ ರಕ್ತದ ಒಂದು ಭಾಗವನ್ನು ಒಳಗೊಂಡಿದೆ. ಇದು ಭೀಕರವಾಗಿದೆದ್ದು, ಈ ಮಾಹಿತಿಯನ್ನು ಮೊದಲೇ ಸಾರ್ವಜನಿಕವಾಗಿ ಪ್ರಕಟಿಸಬೇಕಿತ್ತು," ಎಂದು ಕಾಂಗ್ರೆಸ್ ವಕ್ತಾರ ಗೌರವ್ ಪಾಧಿ ಟ್ವೀಟ್ ಮಾಡಿದ್ದಾರೆ.

ಕರುವಿನ ಹೆಪ್ಪುಗಟ್ಟಿದ ರಕ್ತ ಬಳಕೆ ಬಗ್ಗೆ ಕೇಂದ್ರದ ಸ್ಪಷ್ಟನೆ?

ಕರುವಿನ ಹೆಪ್ಪುಗಟ್ಟಿದ ರಕ್ತ ಬಳಕೆ ಬಗ್ಗೆ ಕೇಂದ್ರದ ಸ್ಪಷ್ಟನೆ?

"ನವಜಾತ ಕರುಗಳಲ್ಲಿನ ಹೆಪ್ಪುಗಟ್ಟಿದ ರಕ್ತವನ್ನು ವೆರೋ ಕೋಶಗಳ ತಯಾರಿಕೆ ಮತ್ತು ಬೆಳವಣಿಗೆ ಸಂದರ್ಭದಲ್ಲಿ ಬಳಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಗೋವು ಮತ್ತು ಇತರೆ ಪ್ರಾಣಿಗಳಲ್ಲಿ ಇರುವ ಹೆಪ್ಪುಗಟ್ಟಿದ ರಕ್ತವನ್ನು ವೆರೋ ಕೋಶಗಳ ಬೆಳವಣಿಗೆಗೆ ಪೂರಕವಾಗಿ ಬಳಲಾಗುತ್ತದೆ. ಲಸಿಕೆ ಉತ್ಪಾದಿಸುವ ಸಂದರ್ಭದಲ್ಲಿ ವೆೆರೋ ಕೋಶಗಳು ಹೆಚ್ಚು ಅಗತ್ಯವಾಗಿರುತ್ತದೆ. ದಶಕಗಳ ಹಿಂದಿನಿಂದಲೂ ಪೋಲಿಯೋ, ರೇಬಿಸ್, ಶೀತಜ್ವರ ಹಾಗೂ ಮೈಕೈ ನೋವಿಗೆ ಸಂಬಂಧಿಸಿದ ಲಸಿಕೆಗಳ ಉತ್ಪಾದನೆಯಲ್ಲಿ ಇದನ್ನು ಬಳಸಲಾಗುತ್ತಿತ್ತು," ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದೆ.

ಕೊವಿಡ್-19 ಲಸಿಕೆ ಉತ್ಪಾದನೆ ಪ್ರಕ್ರಿಯೆ ಹೇಗಿರಲಿದೆ?

ಕೊವಿಡ್-19 ಲಸಿಕೆ ಉತ್ಪಾದನೆ ಪ್ರಕ್ರಿಯೆ ಹೇಗಿರಲಿದೆ?

"ಸಾಮಾನ್ಯವಾಗಿ ವೆರೋ ಕೋಶಗಳು ಬೆಳವಣಿಗೆಯಾದ ನಂತರ ನವಜಾತ ಕರುಗಳ ಹೆಪ್ಪುಗಟ್ಟಿದ ರಕ್ತವನ್ನು ಬೇರ್ಪಡಿಸಲು ಅಗತ್ಯವಿರುವ ರಾಸಾಯನಿಕವನ್ನು ಒಳಗೊಂಡ ನೀರಿನಿಂದ ಸ್ವಚ್ಛವಾಗಿ ತೊಳೆಯಲಾಗುತ್ತದೆ. ನಂತರ ವೆರೋ ಕೋಶಗಳ ಬೆಳವಣಿಗೆಯನ್ನು ನೋಡಿಕೊಂಡು ಕೊರೊನಾವೈರಸ್ ಜೊತೆಗೆ ಬೆರೆಸಲಾಗುತ್ತದೆ. ಈ ಹಂತದಲ್ಲಿ ಬೆಳವಣಿಗೆ ಹೊಂದಿರುವ ವೆರೋ ಕೋಶಗಳು ರೋಗಕಾರಕ ಸೂಕ್ಷ್ಮಜೀವಿಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಕಾರ್ಯ ಮಾಡುತ್ತವೆ. ತದನಂತರದಲ್ಲಿ ಬೆಳವಣಿಗೆ ಹೊಂದಿರುವ ವೆರೋ ಕೋಶಗಳು ಸಹ ನಾಶವಾಗಿ, ಶುದ್ಧವಾಗುತ್ತದೆ. ಹೀಗೆ ನಾಶಗೊಂಡ ರೋಗಾಣುಗಳನ್ನು ಕೊರೊನಾವೈರಸ್ ಲಸಿಕೆ ಉತ್ಪಾದನೆಗೆ ಬಳಸಲಾಗುತ್ತದೆ. ಈ ಕೊವಿಡ್-19 ಲಸಿಕೆಯ ಸಂಯೋಜನೆಯಲ್ಲಿ ನವಜಾತ ಕರುಗಳ ರಕ್ತವನ್ನು ಮಿಶ್ರಣ ಮಾಡಿರುವುದಿಲ್ಲ," ಎಂದು ಕೇಂದ್ರ ಸರ್ಕಾರ ನೀಡಿರುವ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಲಾಗಿದೆ.

ಕೊವ್ಯಾಕ್ಸಿನ್ ಲಸಿಕೆ ಬಗ್ಗೆ ಭಾರತ್ ಬಯೋಟೆಕ್ ಉತ್ತರ?

ಕೊವ್ಯಾಕ್ಸಿನ್ ಲಸಿಕೆ ಬಗ್ಗೆ ಭಾರತ್ ಬಯೋಟೆಕ್ ಉತ್ತರ?

ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಬಗ್ಗೆ ಭಾರತ್ ಬಯೋಟೆಕ್ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. "ನವಜಾತ ಕರುಗಳ ರಕ್ತವನ್ನು ರೋಗಕಾರಕ ಸೂಕ್ಷ್ಮಾಣು ಲಸಿಕೆ ಉತ್ಪಾದನೆಗೆ ಬಳಸಲಾಗುತ್ತದೆ. ಇದನ್ನು ಕೋಶಗಳ ಬೆಳವಣಿಗೆಗೆ ಬಳಸಲಾಗುತ್ತದೆಯೇ ವಿನಃ, SARS CoV2 ವೈರಸ್‌ನ ಬೆಳವಣಿಗೆಯಲ್ಲಿ ಅಥವಾ ಅಂತಿಮ ಸೂತ್ರೀಕರಣದಲ್ಲಿ ಬಳಸಲಾಗುವುದಿಲ್ಲ. ಕೊವ್ಯಾಕ್ಸಿನ್ ಲಸಿಕೆಯು ನಿಷ್ಕ್ರಿಯ ರೋಗಾಣುಗಳಿಂದ ಕ್ರೂಢೀಕರಿಸಿದ ಹಾಗೂ ಶುದ್ಧೀಕರಿಸಿದ ಲಸಿಕೆ ಆಗಿದೆ," ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.

ಲಸಿಕೆ ತಯಾರಿಕೆಯಲ್ಲಿ ಹಸುವಿನ ರಕ್ತ ಬಳಕೆಗೆ ದಶಕದ ಇತಿಹಾಸ

ಲಸಿಕೆ ತಯಾರಿಕೆಯಲ್ಲಿ ಹಸುವಿನ ರಕ್ತ ಬಳಕೆಗೆ ದಶಕದ ಇತಿಹಾಸ

"ಜಾಗತಿಕ ಮಟ್ಟದಲ್ಲಿ ವಿವಿಧ ರೀತಿಯ ಲಸಿಕೆ ಉತ್ಪಾದಿಸುವುದಕ್ಕಾಗಿ ಹಸುವಿನ ರಕ್ತವನ್ನು ಹಲವು ದಶಕಗಳಿಂದಲೂ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಕಳೆದ 9 ತಿಂಗಳಿನಿಂದ ನವಜಾತ ಕರುಗಳ ರಕ್ತವನ್ನು ಬಳಸುತ್ತಿರುವ ಬಗ್ಗೆ ಪಾರದರ್ಶಕವಾಗಿ ದಾಖಲು ಮಾಡಿಕೊಳ್ಳಲಾಗುತ್ತಿದೆ," ಎಂದು ಕಂಪನಿಯು ಸ್ಪಷ್ಟಪಡಿಸಿದೆ.

ಕೊರೊನಾವೈರಸ್ ಲಸಿಕೆಗಳು ಮತ್ತು ಅವುಗಳ ದರ

ಕೊರೊನಾವೈರಸ್ ಲಸಿಕೆಗಳು ಮತ್ತು ಅವುಗಳ ದರ

ಭಾರತೀಯರಿಗೆ ಕುಡಿಯುವ ನೀರಿನ ಬಾಟಲಿಗಿಂತ ಐದು ಪಟ್ಟು ಕಡಿಮೆ ಬೆಲೆಗೆ ಕೊರೊನಾವೈರಸ್ ಲಸಿಕೆಯನ್ನು ನೀಡುವುದಾಗಿ ಸಂಸ್ಥೆಯ ಹೇಳಿದ ಮಾತು ಇದೀಗ ಸುಳ್ಳಾಗಿದೆ. ಜಗತ್ತಿನಲ್ಲೇ ಅತಿ ದುಬಾರಿ ಕೊವಿಡ್-19 ಲಸಿಕೆಗಳ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಒಂದು ಡೋಸ್ ಕೊವಿಶೀಲ್ಡ್ ಲಸಿಕೆಗೆ 780 ರೂಪಾಯಿ, ರಷ್ಯಾದ ಒಂದು ಡೋಸ್ ಸ್ಪುಟ್ನಿಕ್-ವಿ ಲಸಿಕೆಗೆ 1,145 ರೂಪಾಯಿ ಬೆಲೆ ನಿಗದಿಗೊಳಿಸಲಾಗಿದೆ. ಆದರೆ ಒಂದು ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ ಸೇವಾ ಶುಲ್ಕ ಹಾಗೂ ಜಿಎಸ್ ಟಿ ಸೇರಿ 1,410 ರೂಪಾಯಿ ಆಗುತ್ತದೆ.

English summary
'Newborn Calf Serum is Used in Covaxin Vaccine: Here Read The Centre And Bharat Biotech Clarification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X