• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ವರ್ಷಾಚರಣೆ: ಯಾವ ಯಾವ ನಗರಗಳಲ್ಲಿ ನಿಷೇಧಾಜ್ಞೆ?

|

ನವದೆಹಲಿ, ಡಿಸೆಂಬರ್ 31: ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಈ ಕರಾಳ ವರ್ಷ ಮುಗಿದರೆ ಸಾಕು ಎಂದು ಕಾಯುತ್ತಿರುವ ಜನರಿಗೆ ಬ್ರಿಟನ್‌ನಿಂದ ಬಂದ ರೂಪಾಂತರ ವೈರಸ್ ಮತ್ತೆ ಸಂಕಷ್ಟ ತಂದಿದೆ. ಭಾರತದಲ್ಲಿಯೂ ಹೊಸ ಪ್ರಭೇದದ ವೈರಸ್‌ನ ಪ್ರಕರಣಗಳು ವರದಿಯಾಗಿದ್ದು, ಮುಂದಿನ ದಿನಗಳಲ್ಲಿ ಅದರ ಸಂಖ್ಯೆ ಹೆಚ್ಚುವ ಸಂಭವವಿದೆ. ರೂಪಾಂತರ ವೈರಸ್‌ನ ಗುಣ ಮತ್ತು ಅದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ. ಸದ್ಯದ ವರದಿಗಳ ಪ್ರಕಾರ ಇದು ವೇಗವಾಗಿ ಹರಡಿದರೂ ಅಪಾಯಕಾರಿಯಲ್ಲ. ಈ ನಡುವೆ ಜಗತ್ತು ಹೊಸ ವರ್ಷವನ್ನು ಎದುರುಗೊಳ್ಳುತ್ತಿದೆ.

   ಕರ್ನಾಟಕ: ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಸಿಎಂ ಬಿಎಸ್‌ ಯಡಿಯೂರಪ್ಪ | Oneindia Kannada

   ಹೊಸ ವರ್ಷದ ಸಂಭ್ರಮ, ಗೋವಾದಲ್ಲಿ ನೈಟ್ ಕರ್ಫ್ಯೂ ಇಲ್ಲ: ಸಿಎಂ ಪ್ರಮೋದ್ ಸಾವಂತ್

   ರೂಪಾಂತರ ವೈರಸ್ ಹರಡುವಿಕೆಯನ್ನು ತಡೆಯಲು ಹೊಸ ವರ್ಷದ ಸಂಭ್ರಮಾಚರಣೆಗಳ ಮೇಲೆ ಅನೇಕ ರಾಜ್ಯಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಜನರು ವಿನಾಕಾರಣ ಮನೆಯಿಂದ ಹೊರಬರುವುದು, ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಜನರು ಗುಂಪುಗೂಡಿದರೆ ಅವರನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ವಿವಿಧ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

   ಹೊಸ ವರ್ಷಾಚರಣೆ: ಕರಾವಳಿಯಲ್ಲಿ ಸಂಜೆಯಿಂದ ನಿಷೇಧಾಜ್ಞೆ

   ಹೊಸ ವರ್ಷದ ಹಿಂದಿನ ದಿನ ಜನರ ಚಲನವಲನಗಳನ್ನು ನಿಯಂತ್ರಿಸಲು ವಿವಿಧ ರಾಜ್ಯಗಳು, ಪ್ರಮುಖ ನಗರಗಳಲ್ಲಿ ರಾತ್ರಿ ನಿಷೇಧಾಜ್ಞೆ ಮತ್ತು ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಕರ್ನಾಟಕದಲ್ಲಿ ರಾಜ್ಯದಾದ್ಯಂತ ಜಾರಿಗೆ ತರಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂವಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯನ್ನು ಅದನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು. ಈಗ ಹೊಸ ವರ್ಷದಲ್ಲಿ ಜನರು ಗುಂಪುಗೂಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸೆಕ್ಷನ್ 144 ಜಾರಿಗೊಳಿಸಿರುವ ಕೆಲವು ನಗರಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ.

   ದೆಹಲಿ

   ದೆಹಲಿ

   ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ದೆಹಲಿಯಲ್ಲಿ ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಪ್ಯೂ ವಿಧಿಸಲಾಗಿದೆ. ಜನವರಿ 1ರಂದು ರಾತ್ರಿ 11 ರಿಂದ ಜನವರಿ 2ರ ಬೆಳಿಗ್ಗೆ 6ರವರೆಗೆ ರಾತ್ರಿ ನಿಷೇಧಾಜ್ಞೆ ಇರಲಿದೆ. ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.

   ಮುಂಬೈ

   ಮುಂಬೈ

   ಮುಂಬೈ ಮಹಾನಗರದಲ್ಲಿ ಡಿಸೆಂಬರ್ 31ರ ರಾತ್ರಿ 11 ರಿಂದ ಜನವರಿ 1ರ ಬೆಳಿಗ್ಗೆ 1ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದರ ಮೇಲೆ ನಿಷೇಧ ಹೇರುವ ಸೆಕ್ಷನ್ 144 ವಿಧಿಸಲಾಗಿದೆ. ರೆಸ್ಟೋರೆಂಟ್, ಪಬ್‌ಗಳು, ಬಾರ್, ಬೀಚ್, ಮನೆಮಾಳಿಗೆ ಮತ್ತು ದೋಣಿಗಳಲ್ಲಿ ಪಾರ್ಟಿಗಳನ್ನು ನಡೆಸಲು ಅವಕಾಶವಿಲ್ಲ.

   ಬೆಂಗಳೂರು

   ಬೆಂಗಳೂರು

   ಬೆಂಗಳೂರಿನಲ್ಲಿ ಡಿಸೆಂಬರ್ 31ರ ಮಧ್ಯಾಹ್ನ 12ರಿಂದಲೇ ನಿಷೇಧಾಜ್ಞೆ ಜಾರಿಗೆ ಬಂದಿದ್ದು, ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೆ ಚಾಲ್ತಿಯಲ್ಲಿ ಇರಲಿದೆ. ಇದು ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯೊಳಗೆ ಅನ್ವಯವಾಗಲಿದೆ. ಯಾವುದೇ ರೀತಿಯ ಹೊಸ ವರ್ಷದ ಆಚರಣೆಗಳಿಗೆ ಅವಕಾಶವಿಲ್ಲ. ತೆರೆದ ಜಾಗಗಳು, ಮೈದಾನ, ಉದ್ಯಾನವನ, ಸಾರ್ವಜನಿಕ ರಸ್ತೆ ಸೇರಿದಂತೆ ಬೃಹತ್ ಗುಂಪುಗೂಡುವಿಕೆ ಮಾಡುವಂತಿಲ್ಲ. ಆದರೆ ನಿವಾಸ ಸಂಕೀರ್ಣಗಳು, ಖಾಸಗಿ ಕ್ಲಬ್‌ಗಳಲ್ಲಿ ಆಚರಣೆಗೆ ಅವಕಾಶವಿದೆ. ಹೋಟೆಲ್, ಮಾಲ್‌ಗಳು, ರೆಸ್ಟೋರೆಂಟ್, ಕ್ಲಬ್, ಪಬ್, ಕ್ಲಬ್ ಹೌಸ್‌ಗಳು ಅಥವಾ ಅದೇ ರೀತಿಯ ಜಾಗಗಳಲ್ಲಿ ಡಿಜೆ ಇವೆಂಟ್, ಪ್ರದರ್ಶನ, ನೃತ್ಯ ಕಾರ್ಯಕ್ರಮ, ಸಂಗೀತ ರಾತ್ರಿ ಮತ್ತು ಮ್ಯುಸಿಕಲ್ ಬ್ಯಾಂಡ್‌ಗಳಂತಹ ಹೊಸ ವರ್ಷ ಆಚರಣೆಯ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.

   ಮಂಗಳೂರು

   ಮಂಗಳೂರು

   ಹೊಸ ವರ್ಷದ ಸಂಭ್ರಮಾಚರಣೆಗಳಿಗೂ ಮುನ್ನ ರಾಜ್ಯದ ಕರಾವಳಿ ತೀರ ಮಂಗಳೂರು ನಗರದಲ್ಲಿ ಕೂಡ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಡಿಸೆಂಬರ್ 31ರ ಸಂಜೆ 6 ರಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯ ಆದೇಶ್ಳು ಜಾರಿಯಲ್ಲಿರಲಿವೆ.

   ಚೆನ್ನೈ

   ಚೆನ್ನೈ

   ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿನ ಬೀಚ್‌ಗಳಲ್ಲಿ ಮತ್ತು ರಸ್ತೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ನಿಷೇಧಿಸಲಾಗಿದೆ. ಎಲ್ಲ ಬೀಚ್‌ಗಳನ್ನು ಮುಚ್ಚಲಾಗಿದ್ದು, ಡಿಸೆಂಬರ್ 31ರ ರಾತ್ರಿ 10ಗಂಟೆಯಿಂದ ಹೋಟೆಲ್‌ಗಳು ಬಂದ್ ಆಗಿರಲಿವೆ.

   ಕೋಲ್ಕತಾ

   ಕೋಲ್ಕತಾ

   ಕೋಲ್ಕತಾ ನಗರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗಾಗಿ ಜನರು ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಕಾರಣದಿಂದ ಹೊಸ ವರ್ಷದ ಆಚರಣೆಗೆ ಅವಕಾಶ ನೀಡದಂತೆ ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚನೆ ನೀಡಿತ್ತು.

   English summary
   Sevral cities have imposed night curfew and section 144 ahead of new Year Eve celebration. Here is the list of cities.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X