ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ: ಶೀಘ್ರದಲ್ಲೇ ರೈಲುಗಳಲ್ಲಿ ಸೀಟು ಮೀಸಲು

|
Google Oneindia Kannada News

ನವದೆಹಲಿ, ಡಿಸೆಂಬರ್ 19: ವರ್ಷಾಂತ್ಯದ ರಜಾ ದಿನಗಳಲ್ಲಿ, ಅರಾಮದಾಯಕ ದೂರದ ಪ್ರಯಾಣಕ್ಕಾಗಿ ಅಧಿಕ ಜನ ರೈಲುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರೈಲ್ವೆ ಇಲಾಖೆಯೂ ಸಹ ಪ್ರಯಾಣಿಕರ ಹಿತದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಈಗ ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ರೈಲ್ವೆ ಇಲಾಖೆ ನೀಡಿದೆ. ಮಹಿಳೆಯರ ರೈಲು ಪ್ರಯಾಣವನ್ನು ಸುರಕ್ಷತೆ ಹಾಗೂ ಅವರಿಗೆ ಅನುಕೂಲಕರವಾಗಿಸಲು ರೈಲುಗಳಲ್ಲಿ ಸೀಟುಗಳನ್ನು ಕಾಯ್ದಿರಿಸುವ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

ಮೆಟ್ರೋ ಮತ್ತು ಬಸ್‌ಗಳಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಸೀಟುಗಳು ಇರುವಂತೆ ದೂರದ ಪ್ರಯಾಣ ಮಾಡುವ ಮಹಿಳೆಯರಿಗೆ ರೈಲುಗಳಲ್ಲಿ ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ. ದೂರದ ಮಹಿಳಾ ಪ್ರಯಾಣೀಕರು ರೈಲುಗಳಲ್ಲಿ ಕಾಯ್ದಿರಿಸಿದ ಬರ್ತ್‌ಗಳನ್ನು ಹೊಂದಿರುತ್ತಾರೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ವಿವರಣೆ ನೀಡುತ್ತಾ ಅಶ್ವಿನಿ ವೈಷ್ಣವ್ ಅವರು ದೂರದ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣವನ್ನು ಒದಗಿಸಲು, ಭಾರತೀಯ ರೈಲ್ವೇಯು ಮಹಿಳೆಯರಿಗೆ ವಿಶೇಷ ಬರ್ತ್‌ಗಳನ್ನು ಮತ್ತು ಹಲವಾರು ಇತರ ಸೌಲಭ್ಯಗಳನ್ನು ನಿಗದಿಪಡಿಸಿದೆ ಎಂದು ಹೇಳಿದರು.

ದೂರದ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸ್ಲೀಪರ್ ಕ್ಲಾಸ್‌ನಲ್ಲಿ ಆರು ಬರ್ತ್‌ಗಳು ಮತ್ತು ಗರೀಬ್ ರಥ, ರಾಜಧಾನಿ, ಡುರೊಂಟೊ ಮತ್ತು ಸಂಪೂರ್ಣ ಎಸಿ ಎಕ್ಸ್‌ಪ್ರೆಸ್ ರೈಲುಗಳ 3 ಎಸಿ ತರಗತಿಗಳಲ್ಲಿ ಅಷ್ಟೇ ಸಂಖ್ಯೆಯ ಬರ್ತ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ರೈಲ್ವೆ ಸಚಿವರು ಹೇಳಿದರು. ಮಹಿಳಾ ಪ್ರಯಾಣಿಕರಿಗೆ ಅವರ ವಯಸ್ಸು ಮತ್ತು ಗರ್ಭಿಣಿ ಮಹಿಳೆಯರು ಒಳಗೊಂಡಂತೆ ಕೋಟಾ ಅನ್ವಯಿಸುತ್ತದೆ ಎಂದು ಅವರು ಹೇಳಿದರು.

New Year 2022: Good news for women commuters: seat reservations on trains soon

ವಿವರಗಳನ್ನು ನೀಡಿದ ರೈಲ್ವೆ ಸಚಿವರು, ಪ್ರತಿ ಸ್ಲೀಪರ್ ಕೋಚ್‌ಗಳಲ್ಲಿ ಆರರಿಂದ ಏಳು ಲೋವರ್ ಬರ್ತ್ ಕೋಚ್‌ಗಳು, 3 ಎಸಿ ಕೋಚ್‌ಗಳಲ್ಲಿ ನಾಲ್ಕರಿಂದ ಐದು ಲೋವರ್ ಬರ್ತ್‌ಗಳು, 2ಎಸಿ ಬೋಗಿಗಳಲ್ಲಿ ಮೂರರಿಂದ ನಾಲ್ಕು ಬರ್ತ್‌ಗಳನ್ನು ಹಿರಿಯ ನಾಗರಿಕರು, 45 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಗರ್ಭಿಣಿಯರು ಮಹಿಳೆಯರಿಗೆ ಮೀಸಲಿಡಲಾಗುವುದು.

ಇದಲ್ಲದೆ, ಈ ವರ್ಗದ ಸೀಟುಗಳ ಮೀಸಲಾತಿ ಕೋಟಾವನ್ನು ರೈಲುಗಳಲ್ಲಿನ ಕೋಚ್‌ಗಳ ಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಲಾಗುವುದು ಎಂದು ಅವರು ಘೋಷಿಸಿದರು. ಮಹಿಳೆಯರ ಸುರಕ್ಷತೆ ಕುರಿತು ಮಾತನಾಡಿದ ರೈಲ್ವೆ ಸಚಿವರು, ರೈಲುಗಳಲ್ಲಿ ಮಹಿಳೆಯರು ಮತ್ತು ಎಲ್ಲಾ ಪ್ರಯಾಣಿಕರ ಸುರಕ್ಷತೆಗೆ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಭಾರತ ಸಂವಿಧಾನದ ಏಳನೇ ಶೆಡ್ಯೂಲ್ ಅಡಿಯಲ್ಲಿ ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆ ರಾಜ್ಯದ ವಿಷಯಗಳಾಗಿದ್ದು, ರೈಲುಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉತ್ತಮ ಭದ್ರತೆ ಒದಗಿಸಲು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್), ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಮತ್ತು ಜಿಲ್ಲಾ ಪೊಲೀಸರಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.ರೈಲಿನಲ್ಲಿರುವ ಆ ವರ್ಗದ ಕೋಚ್‌ಗಳ ಸಂಖ್ಯೆಯ ಆಧಾರದ ಮೇಲೆ ಕಾಯ್ದಿರಿಸುವಿಕೆಯನ್ನು ನಿರ್ವಹಿಸಲಾಗುವುದು ಎನ್ನಲಾಗಿದೆ.

English summary
New Year 2022: It has been decided to implement reservation of seats on trains to ensure safe and comfortable travel for women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X