ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು: ಹೊಸವರ್ಷದ ಸಂಭ್ರಮದಲ್ಲಿ ಮಿಂದೆದ್ದ ಜನತೆ

By Vanitha
|
Google Oneindia Kannada News

ಬೆಂಗಳೂರು, ಜನವರಿ.01: ಕಹಿ ದಿನಗಳು ಕಳೆದವು, ಮಾಡಿದ ತಪ್ಪುಗಳು ಮರೆಯಾದವು, ಹೊಸ ಸಂಕಲ್ಪಗಳು ಸೃಷ್ಟಿಯಾದವು, ದ್ವೇಷಗಳು ತೊಳೆದು ಹೋದವು ಈ ಎಲ್ಲಾ ಬದಲಾವಣೆಯಾಗಿದ್ದು, ಹೊಸ ವರ್ಷದ 2016ನ್ನು ಬರ ಮಾಡಿಕೊಳ್ಳುವ ಮನಗಳಲ್ಲಿ

ವರ್ಷ ಉರುಳಿತು, ಹರುಷ ತುಂಬಿತು, ನಗು ಚೆಲ್ಲಿತು, ಉತ್ಸಾಹ ಹರಿಯಿತು ಎಲ್ಲರ ಮನೆ, ಮನಗಳಲ್ಲಿ. ಕೇಕ್ ಕತ್ತರಿಸಿ, ಬಿಯರ್ಸ್ ಹಿಡಿದು ಚಿಯರ್ಸ್ ಅಂದದ್ದಾಯ್ತು, ಪಟಾಕಿ ಸಿಡಿಸಿ, ಯಾವ್ಯಾವುದೋ ಹಾಡುಗಳಿಗೆ ಒಂದೆರಡು ಡಂಬಗ್ಗುಚ್ಚಿ ಸ್ಟೆಪ್ ಹಾಕಿಯಾಯ್ತು ಇಡೀ ಪ್ರಪಂಚದ ಮಂದಿ ಬಹಳ ಸಂತಸದಿಂದಲೇ 2016ನ್ನು ಬರ ಮಾಡಿಕೊಂಡಿದ್ದಾರೆ.

ಸಣ್ಣಮಕ್ಕಳಿಂದ ಹಿಡಿದು ವೃದ್ದರವರೆಗೂ ಹೊಸ ವರ್ಷ ಏನೋ ಒಂದು ರೀತಿಯ ಚೈತನ್ಯ ತುಂಬಿದೆ. ಮಕ್ಕಳು ಒಂದು ಕೈಯಲ್ಲಿ ಬಲೂನು, ಇನ್ನೊಂದು ಕೈಯಲ್ಲಿ ಕೇಕ್ ಹಿಡಿದು ತಿನ್ನುತ್ತಾ ಹೊಸ ವರ್ಷಕ್ಕೆ ಅಡಿ ಇಟ್ಟರೆ, ಮೊಮ್ಮಕ್ಕಳ, ಮಕ್ಕಳ ಸಂಭ್ರಮದಲ್ಲಿಯೇ ಹಿರಿಯರು ಹೊಸವರ್ಷಕ್ಕೆ ಮುನ್ನುಡಿ ಬರೆದಿದ್ದಾರೆ.

ಸಂತೋಷಕ್ಕೆ ಸಂಸ್ಕೃತಿಯ ಹಂಗು ಇರುವುದಿಲ್ಲ ಎಂಬುದಕ್ಕೆ ಇಡೀ ಪ್ರಪಂಚ ಹೊಸವರ್ಷದ ಸಂತಸದಲ್ಲಿ ಮಿಂದಾಗಲೇ ಸಾಕ್ಷಿಯಾಯಿತು, ಬನ್ನಿ ಹೊಸವರ್ಷ-2016ನ್ನು ಬಹಳ ಉತ್ಸಾಹದಿಂದಲೇ ಬರಮಾಡಿಕೊಂಡ ಮಂದಿ ಜೊತೆ ನಾವು ಒಂದಾಗೋಣ ಬನ್ನಿ.[ಹೊಸವರ್ಷಕ್ಕೆ ಒಂದಷ್ಟು ತಮಾಷೆಯ ಸಂಕಲ್ಪಗಳು!]

ಬಲೂನಲ್ಲಿ ತುಂಬಿದ ಗಾಳಿಯಂತೆ ಹೊಸವರ್ಷ ಬದುಕಲಿ ಸಂತೋಷ ತರಲಿ

ಬಲೂನಲ್ಲಿ ತುಂಬಿದ ಗಾಳಿಯಂತೆ ಹೊಸವರ್ಷ ಬದುಕಲಿ ಸಂತೋಷ ತರಲಿ

ನವದೆಹಲಿಯಲ್ಲಿ ನಾನಾ ಬಣ್ಣದ ಬಲೂನು ಹಿಡಿದ ಮಂದಿ ಹೊಸವರ್ಷವನ್ನು ಬಹಳ ವಿಜೃಂಭಣೆಯಿಂದ ಬರಮಾಡಿಕೊಂಡಿದ್ದು, ಬಲೂನುಗಳಲ್ಲಿ ತುಂಬಿದ ಗಾಳಿಯಂತೆ ಬದುಕಲ್ಲಿಯೂ ಸಂತೋಷ ಯಾವಾಗಲೂ ತುಂಬಿರಲಿ ಎನ್ನುವುದು ದೆಹಲಿ ಮಂದಿಯ ಆಶಯವಾಗಿದೆ.

2016 ಸೈಕಲ್ಲಿನಂತಿರುವುದಿಲ್ಲ, ನಮ್ಮಂತಿರುತ್ತದೆ

2016 ಸೈಕಲ್ಲಿನಂತಿರುವುದಿಲ್ಲ, ನಮ್ಮಂತಿರುತ್ತದೆ

ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಾಲ್ಕು ಮಕ್ಕಳು 2016 ಎಂಬ ಅಂಕೆಗಳನ್ನು ಹಿಡಿದು ಸೈಕಲ್ ಸವಾರಿ ಮಾಡುತ್ತಾ ಬಹಳ ವಿಭಿನ್ನವಾಗಿಯೇ ಹೊಸವರ್ಷವನ್ನು ಬರಮಾಡಿಕೊಂಡಿದ್ದಾರೆ.

ಮೊಗದಲ್ಲಿ ಮೂಡಿದ ಹೊಸವರ್ಷ

ಮೊಗದಲ್ಲಿ ಮೂಡಿದ ಹೊಸವರ್ಷ

ಪಂಜಾಬಿನ ಅಮೃತಸರದಲ್ಲಿ ಮಕ್ಕಳು ಮೊಗದ ಮೇಲೆ ಭಾರತದ ನಕ್ಷೆ ಬಿಡಿಸಿಕೊಂಡು, ಅದಲ್ಲಿ ಹೊಸವರ್ಷ, 2016 ಎಂದು ಬರೆದುಕೊಂಡು ಮುಖಕ್ಕೆ ಮುಖ ಒಡ್ಡಿ, ನಗುವನ್ನು ಬೀರುತ್ತಾ ಹೊಸವರ್ಷ ಆಚರಿಸಿದ್ದು ಹೀಗೆ

ಪ್ರೇಮಸೌಧದ ಬಳಿ ಪ್ರವಾಸಿಗರ ಸಂಭ್ರಮ

ಪ್ರೇಮಸೌಧದ ಬಳಿ ಪ್ರವಾಸಿಗರ ಸಂಭ್ರಮ

ಆಗ್ರಾದಲ್ಲಿನ ಪ್ರೇಮಸೌಧವಾದ ತಾಜ್ ಮಹಲ್ ಬಳಿ ಪ್ರವಾಸಿಗರು ಹೊಸವರ್ಷದ ಸಂಭ್ರಮದಲ್ಲಿ ಭಾಗಿಯಾದರು.

ಹಿಮದ ಮೇಲೆ ಹೊಸವರ್ಷ

ಹಿಮದ ಮೇಲೆ ಹೊಸವರ್ಷ

ಪ್ರವಾಸಿಗನೊಬ್ಬ ಹಿಮದ ಮೇಲೆ ಕಪ್ಪು ಬಣ್ಣದ ಪುಡಿಯಿಂದ '2016-ಹ್ಯಾಪಿ ನ್ಯೂ ಇಯರ್' ಎಂದು ಬರೆದು ಸಂಭ್ರಮಪಟ್ಟಿದ್ದು ಹೀಗೆ.

ಬಾಳೆ ಹಣ್ಣಿನಲ್ಲಿ ಹೊಸವರ್ಷ

ಬಾಳೆ ಹಣ್ಣಿನಲ್ಲಿ ಹೊಸವರ್ಷ

ಬಾಳೆಹಣ್ಣನ್ನು ಹೊಸವರ್ಷ ಎಂದು ಜೋಡಿಸಿದ ಫರಿದಾಬಾದ್ ಹುಡುಗಿಯೊಬ್ಬಳು 2016ನ್ನು ತನ್ನ ಪ್ರತಿಭೆ ಮೂಲಕ ಅನಾವರಣ ಮಾಡಿದ್ದಾಳೆ.

English summary
Revelers at CP on the evening of New Year in New Delhi, Children welcome New Year 2016 at a village in Moradabad, A girl arranges bananas to write "2016'' as she welcomes the New Year in Faridabad
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X