ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಸ್ಮಾರಕ ನಿರ್ಮಾಣ

|
Google Oneindia Kannada News

ಲಡಾಖ್, ಅಕ್ಟೋಬರ್ 03: ಗಲ್ವಾನ್ ಕಣಿವೆ ಬಳಿ ಚೀನಾದ ಜತೆ ಹೋರಾಡಿ ಹುತಾತ್ಮರಾಗಿದ್ದ 20 ಯೋಧರ ಸ್ಮರಣಾರ್ಥ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ.

"ಜೂ.15, 2020 ರಂದು ಗಲ್ವಾನ್ ಕಣಿವೆಯಲ್ಲಿ ಕರ್ನಲ್ ಸಂತೋಷ್ ಬಾಬು, ಕಮಾಂಡಿಂಗ್ ಅಧಿಕಾರಿ, 16 ಬಿಹಾರ್ ಅವರು 16 ಬಿಹಾರ್ ಕ್ವಿಕ್ ರಿಯಾಕ್ಷನ್ ಫೋರ್ಸ್ ನ್ನು ಮುನ್ನಡೆಸಿ ಪಾಯಿಂಟ್ 14 ರಿಂದ ಮುಂದೆ ಬರುವ ಪಿಎಲ್ಎಯ ಯತ್ನವನ್ನು ತಡೆಗಟ್ಟಿದ್ದರು. ಈ ಕಾರ್ಯಾಚರಣೆ ಯಶಸ್ವಿಯಾಗಿದೆ.

'ಗಲ್ವಾನ್ ಕಣಿವೆ ಪ್ರದೇಶಕ್ಕೆ ಮೇ ತಿಂಗಳಲ್ಲೇ ಚೀನಾ ತನ್ನ ಸೇನೆ ಕಳುಹಿಸಿತ್ತು''ಗಲ್ವಾನ್ ಕಣಿವೆ ಪ್ರದೇಶಕ್ಕೆ ಮೇ ತಿಂಗಳಲ್ಲೇ ಚೀನಾ ತನ್ನ ಸೇನೆ ಕಳುಹಿಸಿತ್ತು'

ಡರ್ಬುಕ್-ಷ್ಯೋಕ್-ದೌಲತ್ ಬೇಗ್ ಓಲ್ಡೀ, ಲಡಾಖ್ ನ ಕೆಎಂ-120 ಪೋಸ್ಟ್ ನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ಅಲ್ಲಿ 20 ಹುತಾತ್ಮ ಯೋಧರ ಹೆಸರನ್ನು ಘಟನೆ ಸಹಿತ ಬರೆಯಲಾಗಿದೆ.

New War Memorial Built For 20 Galwan Warriors Who Caused Heavy Casualties To Chinese Army

ಕರ್ನಲ್ ಬಿ. ಸಂತೋಷ್ ಬಾಬು, ಹವಾಲ್ದಾರ್ ಸುನಿಲ್ ಕುಮಾರ್, ಕಾನ್ಸ್‍ಟೇಬಲ್ ಕುಂದನ್ ಕುಮಾರ್, ಕಾನ್ಸ್‍ಟೇಬಲ್ ಅಮನ್ ಕುಮಾರ್, ದೀಪಕ್ ಕುಮಾರ್, ಕಾನ್ಸ್‍ಟೇಬಲ್ ಚಂದನ್ ಕುಮಾರ್, ಕಾನ್ಸ್‍ಟೇಬಲ್ ಗಣೇಶ ಕುಂಜಮ್, ಕಾನ್ಸ್‍ಟೇಬಲ್ ಗಣೇಶ ರಾಮ್, ಕಾನ್ಸ್‍ಟೇಬಲ್ ಕೆ.ಕೆ. ಓಜಾ, ಕಾನ್ಸ್‍ಟೇಬಲ್ ರಾಜೇಶ್ ಒರಾನ್, ಸಿಪಾಯಿ ಸಿ.ಕೆ.ಪ್ರಧಾನ್, ನಾಯಬ್ ಸುಬೇದಾರ್ ನಂದುರಾಮ್, ಕಾನ್ಸ್‍ಟೇಬಲ್ ಗುರ್ತೇಜ್ ಸಿಂಗ್, ಸಿಪಾಯಿ ಅಂಕುಷ್, ಕಾನ್ಸ್‍ಟೇಬಲ್ ಗುರ್ವಿಂದರ್ ಸಿಂಗ್, ನಾಯಬ್ ಸುಬೇದಾರ್ ಸತ್ನಮ್ ಸಿಂಗ್, ನಾಯಬ್ ಸುಬೇದಾರ್ ಮಂದೀಪ್ ಸಿಂಗ್, ಕಾನ್ಸ್‍ಟೇಬಲ್ ಜೈಕಿಶೋರ್ ಸಿಂಗ್, ಹವಾಲ್ದಾರ್ ಬಿಪುಲ್ ರಾಯ್, ಹವಾಲ್ದಾರ್ ಕೆ.ಪಳನಿ ಹುತಾತ್ಮ ಯೋಧರಾಗಿದ್ದಾರೆ. ಇವರೆಲ್ಲರ ಹೆಸರು ಹಾಗೂ ಘಟನೆಯ ಮಾಹಿತಿಯನ್ನು ಸ್ಮಾರಕದ ಮೇಲೆ ಕೆತ್ತಲಾಗಿದೆ.

ಪಿಪಿ 14 ರ ಬಳಿ ಪಿಎಲ್ಎ ಸೈನಿಕರು ಮುಂದೆ ಬಂದಾಗ ಘರ್ಷಣೆ ಉಂಟಾಗಿದ್ದು, ಪಿಎಲ್ಎ ಯತ್ನವನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ಯೋಧರು ಧೈರ್ಯದಿಂದ ಹೋರಾಡಿದ್ದರು. ಈ ಕಾರ್ಯಾಚರಣೆಯಲ್ಲಿ ಸಾವು-ನೋವುಗಳು ಸಂಭವಿಸಿ, ಯೋಧರು ಹುತಾತ್ಮರಾಗಿದ್ದಾರೆಂದು" ಸ್ಮಾರಕದ ಮೇಲೆ ಘಟನಾ ವಿವರಗಳನ್ನು ನೀಡಲಾಗಿದೆ.

English summary
A memorial has been built for the 20 Indian soldiers who lost their lives in action against the Chinese Army in the Galwan Valley after evicting them from an observation post near the Y-junction area there under Operation Snow Leopard, according to sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X