ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಫೋಟಕ್ಕೆ ಉಗ್ರರು ಬಳಸುತ್ತಿರುವ ಹೊಸ ಟೆಕ್ನಿಕ್ ಏನು ಗೊತ್ತಾ?

|
Google Oneindia Kannada News

ಸಾಮಾನ್ಯವಾಗಿ ವಾಹನ ಕಳುವಾಗದಿರಲಿ ಎಂದು ಬಳಸುವ ರಿಮೋಟ್ ಅಲಾರಂ ಅಥವಾ ಕೀಗಳನ್ನು ಜಮ್ಮು-ಕಾಶ್ಮೀರದಲ್ಲಿ ಸುಧಾರಿತ ಸ್ಫೋಟಕಗಳಿಗಾಗಿ ಬಳಸಲಾಗುತ್ತಿದೆ. ಈಚೆಗೆ ನಲವತ್ತು ಮಂದಿಯನ್ನು ಬಲಿ ಪಡೆದ ಪುಲ್ವಾಮಾದಲ್ಲಿನ ಸಿಆರ್ ಪಿಎಫ್ ಸಿಬ್ಬಂದಿ ವಾಹನದ ಮೇಲಿನ ಉಗ್ರ ದಾಳಿಯೂ ಹೀಗೇ ಆಗಿರಬಹುದು ಎಂದು ಹೊಸ ವರದಿಗಳು ಹೇಳುತ್ತಿವೆ.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳ ವರದಿಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ದ್ವಿಚಕ್ರ ಅಥವಾ ಕಾರುಗಳಲ್ಲಿ ಸುಧಾರಿತ ಸ್ಫೋಟಕಗಳನ್ನು ಇರಿಸಿ, ಅವುಗಳನ್ನು ಸಿಡಿಸಲು ರಿಮೋಟ್ ಕಂಟ್ರೋಲ್ ಬಳಸುವುದು ಹೆಚ್ಚಾಗಿದೆ. ದಿಢೀರನೇ ಉಗ್ರರ ತಂತ್ರದಲ್ಲಿ ಬದಲಾವಣೆ ಆಗಿದೆ. ಮೊಬೈಲ್ ಫೋನ್, ವಾಕಿ ಟಾಕಿ ಸೆಟ್ಸ್, ಕಳವು ನಿರೋಧಕ ಸಲಕರಣೆಗಳ ಬಳಕೆ ಆಗುತ್ತಿದೆ ಎಂದು ತಿಳಿಸಲಾಗಿದೆ.

ಪುಲ್ವಾಮಾ ದಾಳಿಯ ರೂವಾರಿ ಜೈಷ್ ನ ಕಮ್ರನ್ ಮತ್ತೊಬ್ಬ ಖಲಾಸ್ ಪುಲ್ವಾಮಾ ದಾಳಿಯ ರೂವಾರಿ ಜೈಷ್ ನ ಕಮ್ರನ್ ಮತ್ತೊಬ್ಬ ಖಲಾಸ್

ಎಲೆಕ್ಟ್ರಾನಿಕ್ಸ್ ಉಪಕರಣಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತವೆ. ರಿಮೋಟ್ ಕಂಟ್ರೋಲ್ ನಿಂದ ನಿಯಂತ್ರಿಸಬಹುದಾದ ಸ್ಫೋಟಕಗಳಿಗೆ ಅವುಗಳನ್ನು ಬಳಸುತ್ತಾರೆ. ಸೇನೆಯ ಜತೆಗೆ ಮುಖಾಮುಖಿ ಆಗುವುದು ತಪ್ಪುತ್ತದೆ. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಗಾಯ ಮಾಡಬಹುದು ಎಂಬುದು ಉಗ್ರರ ಉದ್ದೇಶ ಎನ್ನಲಾಗಿದೆ.

New strategy by terrorists using remote motorcycle keys to trigger IEDs in Kashmir

ಇತರ ರಾಜ್ಯಗಳಲ್ಲಿ ನಕ್ಸಲರು ಬಳಸುವಂಥ ಸಲಕರಣೆಗಳನ್ನೇ ಜಮ್ಮು-ಕಾಶ್ಮೀರದಲ್ಲಿ ಉಗ್ರರು ಬಳಸುತ್ತಿದ್ದಾರೆ. ಆದ್ದರಿಂದ ಜಮ್ಮು-ಕಾಶ್ಮೀರದಲ್ಲಿ ನಿಯೋಜನೆ ಆಗುವ ಸೈನಿಕರು ಮತ್ತೂ ನಿಗಾ ವಹಿಸಿ ಕೆಲಸ ಮಾಡಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪಾಕಿಸ್ತಾನಿ ವಿರುದ್ಧ ಸೈಬರ್ ವಾರ್, ಹ್ಯಾಕರ್ ಅಂಶುಲ್ ಹೇಳಿದ ಸತ್ಯ ಪಾಕಿಸ್ತಾನಿ ವಿರುದ್ಧ ಸೈಬರ್ ವಾರ್, ಹ್ಯಾಕರ್ ಅಂಶುಲ್ ಹೇಳಿದ ಸತ್ಯ

ಇದೇ ವೇಳೆ ಉಗ್ರಗಾಮಿಗಳು ಹಾಗೂ ನಕ್ಸಲರ ದಾಳಿ ಮಧ್ಯೆ ಸಾಮ್ಯತೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಉಗ್ರಗಾಮಿಗಳು ಹಾಗೂ ನಕ್ಸಲರ ಮಧ್ಯೆ ನಂಟಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಆದರೆ ಈ ಅನುಮಾನಕ್ಕೆ ಯಾವುದೇ ಗಟ್ಟಿ ಆಧಾರ ಇಲ್ಲ ಎಂದು ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಉಗ್ರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಈಗಲೂ ಪುಲ್ವಾಮಾದಲ್ಲಿಉಗ್ರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಈಗಲೂ ಪುಲ್ವಾಮಾದಲ್ಲಿ

ಇದರ ಜತೆಗೆ ಜಮ್ಮು-ಕಾಶ್ಮೀರದಲ್ಲಿ ಈಚೆಗೆ ಬಳಕೆ ಆಗಿರುವ ಸ್ಫೋಟಕಗಳ ಬಗ್ಗೆ ಕೂಡ ವಿಶ್ಲೇಷಣೆ ಮಾಡಿದ್ದು, ಸೇನೆಗಳಲ್ಲಿ ಬಳಸುವಂಥ ಸ್ಫೋಟಕಗಳನ್ನು ಬಳಕೆ ಮಾಡಿರುವುದು ಕಂಡುಬಂದಿದೆ. ಇನ್ನು ಈ ರೀತಿ ದಾಳಿ ಮಾಡುವುದಕ್ಕೆ ನೇರವಾಗಿ ಪಾಲ್ಗೊಳ್ಳಬೇಕು ಎಂಬುದು ಕೂಡ ಇಲ್ಲ ಎಂಬುದೇ ಕಾರಣ ಎಂದು ಅಭಿಪ್ರಾಯವಿದೆ.

English summary
The commonly used anti-theft remote alarms or keys used in motorcycles and vehicles are being increasingly used by terrorists to trigger IEDs in Jammu and Kashmir, a possibility suspected in the recent Pulwama attack on a CRPF convoy that killed 40 personnel, a latest report has revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X