ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ಬುಕ್ ಫಾಲೋವರ್ಸ್ ಹೆಚ್ಚಿಸಿ, ಕಾಂಗ್ರೆಸ್ ಟಿಕೆಟ್ ಪಡೀರಿ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 03: ಹೇಳಿ ಕೇಳಿ ಇದು ಸೋಶಿಯಲ್ ಮೀಡಿಯಾ ಕಾಲ. ಸಾಮಾಜಿಕ ಮಾಧ್ಯಮಗಳಲ್ಲಿ active ಆಗಿದ್ರೆ ಅಷ್ಟರ ಮಟ್ಟಿಗೆ ವ್ಯಕ್ತಿ ಈ ಕಾಲಕ್ಕೆ ತಕ್ಕ ಹಾಗೆ ಅಪ್ಡೇಟ್ ಆಗಿದ್ದಾನೆ ಅಂತ ಅರ್ಥ. ಇಂತಿಪ್ಪ ಸಾಮಾಜಿಕ ಮಾಧ್ಯಮಗಳನ್ನು ಚುನಾವಣೆಯ ಗೆಲುವಿನ ಏಣಿಯನ್ನಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.

ಇದೇ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮುಖಂಡರು ತಮ್ಮ ಬೆಂಬಲಿಗರಿಗೆ, ಟಿಕೆಟ್ ಆಕಾಂಕ್ಷಿಗಳಿಗೆ ಹೊಸ ಟಾಸ್ಕ್ ನೀಡಿದ್ದಾರೆ. ಕಾಂಗ್ರೆಸ್ ಟಿಕೇಟ್ ಬೇಕು ಅಂದ್ರೆ ಅಂಥವರು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು active ಇರಲೇಬೇಕು! ಮಾತ್ರವಲ್ಲ, ಅವರ ಫೇಸ್ ಬುಕ್ ಪೇಜ್ ಗೆ ಕನಿಷ್ಠಪಕ್ಷ 15000 ಲೈಕ್ಸ್, ಟ್ವಿಟ್ಟರ್ ನಲ್ಲಿ 5000 ಫಾಲೋವರ್ಸ್ ಇರಲೇಬೇಕು! ಜೊತೆಗೆ ಕೆಲವು whatsapp ಗ್ರೂಪಿನಲ್ಲಿ ಸದಸ್ಯರಾಗಿರಬೇಕು!

ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರಿಕೆಯಿಂದಿರಿ: ಮೋದಿಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರಿಕೆಯಿಂದಿರಿ: ಮೋದಿ

ಮಧ್ಯಪ್ರದೇಶ ಕಾಂಗ್ರೆಸ್ ನ ಅಧಿಕೃತ ಸಾಮಾಜಿಕ ಮಾಧ್ಯಮದ ಪೇಜ್ ಗಳಲ್ಲಿ ಪೋಸ್ಟ್ ಮಾಡುವ ಯಾವುದೇ ಸ್ಟೇಟಸ್, ಪೋಸ್ಟ್ ಗಳನ್ನು ಶೇರ್ ಮಾಡಬೇಕು ಮತ್ತು ಅವುಗಳನ್ನು ಲೈಕ್, ರೀಟ್ವೀಟ್ ಮಾಡಬೇಕು ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

New Social media task to Congress ticket aspirants for Madhya Pradesh assembly elections

ಸೆಪ್ಟೆಂಬರ್ 15 ರ ಒಳಗೆ ಪಕ್ಷದ ಸದಸ್ಯರು(ಟಿಕೆಟ್ ಆಕಾಂಕ್ಷಿಗಳು), ಮುಖಂಡರು ತಮ್ಮ ಸೋಶಿಯಲ್ ಮೀಡಿಯಾ ವಿವರಗಳನ್ನು ನೀಡಬೇಕು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಸಾಮಾಜಿಕ ಮಾಧ್ಯಮವನ್ನು ಪ್ರಭಾವಶಾಲಿಯಾಗಿ ಬಳಸಿಕೊಳ್ಳಲು ನಿರ್ಧರಿಸಿದೆ.

ಒಂದೇ ದಿನದಂದು 55 ಮಹಿಳೆಯರನ್ನು ಮೋದಿ ಖಾತೆ ಹಿಂಬಾಲಿಸಿದ್ದೇಕೆ?ಒಂದೇ ದಿನದಂದು 55 ಮಹಿಳೆಯರನ್ನು ಮೋದಿ ಖಾತೆ ಹಿಂಬಾಲಿಸಿದ್ದೇಕೆ?

2014 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಸಾಮಾಜಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದು ಸಹ ಸದರ ಗೆಲುವಿಗೆ ಒಂದು ಕಾರಣವಾಗಿತ್ತು ಎಂಬ ವಿಶ್ಲೇಷಣೆಯನ್ನು ಇಲ್ಲಿ ಸ್ಮರಿಸಬಹುದು.

English summary
Madhya Pradesh Congress Committee (MPCC) writes in a letter to ticket aspirants, 'candidates in upcoming polls must have 15,000 likes on their FB page, 5000 followers on Twitter,& a WhatsApp group of booth-level workers.They must like&retweet every post on MPCC's twitter account'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X