ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ, ವಿಮಾನ ಪ್ರಯಾಣಿಕರಿಗೆ ಇಂದಿನಿಂದ ಹೊಸ ನಿಯಮಾವಳಿ

ಇತ್ತೀಚೆಗೆ, ಮಹಾರಾಷ್ಟ್ರದ ಶಿವಸೇನೆ ಪಕ್ಷದ ಸಂಸದ ರವೀಂದ್ರ ಗಾಯಕ್ವಾಡ್ ಅವರು, ಏರ್ ಇಂಡಿಯಾ ವಿಮಾನದ ಹಿರಿಯ ಅಧಿಕಾರಿಯೊಬ್ಬರನ್ನು ಚಪ್ಪಲಿಯಿಂದ ಹೊಡೆದ ಪ್ರಕರಣ ದೊಡ್ಡ ವಿವಾದ ಎಬ್ಬಿಸಿದ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೆ ತರಲಾಗುತ್ತಿದೆ.

|
Google Oneindia Kannada News

ನವದೆಹಲಿ, ಮೇ 5: ಭಾರತದಲ್ಲಿ ವಿಮಾನ ಸೇವೆ ಬಳಸುವ ಯಾವುದೇ ಪ್ರಯಾಣಿಕರು ವಿಮಾನದಲ್ಲಾಗಲೀ ಅಥವಾ ವಿಮಾನ ನಿಲ್ದಾಣಗಳಲ್ಲೇ ಆಗಲಿ ಸೌಜನ್ಯದಿಂದ ವರ್ತಿಸಬೇಕೆಂಬ ನಿಟ್ಟಿನಲ್ಲಿ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಹೊಸ ನಿಯಮಾವಳಿಗಳನ್ನು ರೂಪಿಸಿದೆ.

ನಾಗರಿಕ ವಿಮಾನ ಯಾನ ಸಚಿವ ಅಶೋಕ್ ಗಜಪತಿ ರಾಜು ಮೇ 5ರಂದು ಈ ಹೊಸ ನಿಯಮಾವಳಿಗಳನ್ನು ಪ್ರಕಟಿಸಲಿದ್ದಾರೆ.

ಇತ್ತೀಚೆಗೆ, ಮಹಾರಾಷ್ಟ್ರದ ಶಿವಸೇನೆ ಪಕ್ಷದ ಸಂಸದ ರವೀಂದ್ರ ಗಾಯಕ್ವಾಡ್ ಅವರು, ಏರ್ ಇಂಡಿಯಾ ವಿಮಾನದ ಹಿರಿಯ ಅಧಿಕಾರಿಯೊಬ್ಬರನ್ನು ಚಪ್ಪಲಿಯಿಂದ ಹೊಡೆದ ಪ್ರಕರಣ ದೊಡ್ಡ ವಿವಾದ ಎಬ್ಬಿಸಿದ ಹಿನ್ನೆಲೆಯಲ್ಲಿ ಈ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲಾಗುತ್ತಿದೆ.[ಚಪ್ಪಲಿ ಹೊಡೆತ ಪ್ರಕರಣ: ಸಂಸದ ರವೀಂದ್ರ ಮೇಲೆ ಏರ್ ಲೈನ್ ಗಳ ನಿಷೇಧ]

ಆಧಾರ್ ಇಲ್ಲದಿದ್ರೆ ಟಿಕೆಟ್ ಇಲ್ಲ

ಆಧಾರ್ ಇಲ್ಲದಿದ್ರೆ ಟಿಕೆಟ್ ಇಲ್ಲ

ಯಾವುದೇ ಏರ್ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರು ಇನ್ನು ಮುಂದೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಿದೆ.

ಈ ಪಟ್ಟೀಲಿ ಸೇರಿದರೆ ಮುಗೀತು

ಈ ಪಟ್ಟೀಲಿ ಸೇರಿದರೆ ಮುಗೀತು

ವಿಮಾನದೊಳಗೇ ಆಗಲಿ, ವಿಮಾನ ನಿಲ್ದಾಣದಲ್ಲೇ ಆಗಲಿ ಅನುಚಿತವಾಗಿ ವರ್ತಿಸುವ ಪ್ರಯಾಣಿಕರನ್ನು ನೋ- ಫ್ಲೈ ಎಂಬ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ. ಅಂದರೆ, ಆ ಪ್ರಯಾಣಿಕರ ಮೇಲೆ ವಿಮಾನ ಸೇವೆಗಳಿಂದ ನಿಷೇಧ ಹೇರಲಾಗುತ್ತದೆ.

ಸೌಜನ್ಯದಿಂದ ಇರಲೇಬೇಕು

ಸೌಜನ್ಯದಿಂದ ಇರಲೇಬೇಕು

ವಿಮಾನ ಸಂಸ್ಥೆಗಳ ಸಿಬ್ಬಂದಿಯೊಡನೆ ಮಾತ್ರವಲ್ಲ ಸಹ ಪ್ರಯಾಣಿಕರೊಂದಿಗೆ ಅಸಭ್ಯ, ಅನುಚಿತವಾಗಿ ವರ್ತಿಸಿದರೆ ಅಥವಾ ಮತ್ಯಾವುದೇ ತರಲೆಗಳನ್ನು ಮಾಡಿದರೂ ಅಂಥವನ್ನು ನೋ- ಫ್ಲೈ ಪಟ್ಟಿಗೆ ಸೇರಿಸಲಾಗುವುದು.

ಗಾಢ, ಗಂಭೀರ

ಗಾಢ, ಗಂಭೀರ

ಈ ನಿಷೇಧ ತಾತ್ಕಾಲಿಕವಾಗಿರುತ್ತದಾದರೂ, ಆ ಅವಧಿಯಲ್ಲಿ ಆ ನಿರ್ದಿಷ್ಟ ಪ್ರಯಾಣಿಕರು ಭಾರತದಲ್ಲಿ ಯಾವುದೇ ವಿಮಾನ ಯಾನ ಸೇವೆಯನ್ನು ಬಳಸುವಂತಿರುವುದಿಲ್ಲ.

ಪತ್ತೆ ಹಚ್ಚಲು ಆಧಾರ್ ಇದೆಯಲ್ಲಾ?

ಪತ್ತೆ ಹಚ್ಚಲು ಆಧಾರ್ ಇದೆಯಲ್ಲಾ?

ಹಾಗೊಮ್ಮೆ ವಿಮಾನ ಯಾನಕ್ಕಾಗಿ ನಿಷೇಧಿತ ಪ್ರಯಾಣಿಕರು ಪ್ರಯತ್ನಿಸಿದರೂ, ಟಿಕೆಟ್ ಬುಕಿಂಗ್ ವೇಳೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಲೇಬೇಕಿರುವುದರಿಂದ ನಿಷೇಧಿತ ಪ್ರಯಾಣಿಕರನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

English summary
After Shivsena MP Ravindra Gaikwad incident, Directorate General of Civil Aviation, Government of India is planning to introducing new norms for the airline passengers in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X