ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರಾಯಾಸ ಪ್ರಯಾಣಕ್ಕಾಗಿ ಬರುತ್ತಿದೆ ಹೊಸ ರೈಲ್ವೇ ಆಪ್

|
Google Oneindia Kannada News

ನವದೆಹಲಿ, ಮಾರ್ಚ್ 4: ಯಾವುದೇ ಪ್ರಯಾಣದ ಕುರಿತು ಸಮಗ್ರ ಮಾಹಿತಿ ನೀಡಬಲ್ಲ ಹೊಸ ಆಪ್ ಒಂದನ್ನು ಭಾರತೀಯ ರೈಲ್ವೆ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ರಾಷ್ಟ್ರೀಯ ರೈಲ್ವೇ ಮ್ಯೂಸಿಯಂನಲ್ಲಿ ಮಿನಿ ರೈಲ್ವೇ ಬಜೆಟ್ ಮಂಡಿಸಿದ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ನಿನ್ನೆ ಈ ವಿಷಯ ತಿಳಿಸಿದರು.

ಪ್ರಯಾಣವನ್ನು ನಿರಾಯಾಸಗೊಳಿಸಬಲ್ಲ ಈ ಆಪ್ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.

New railway app will make youre journey hassle free

1. ಈ ಆಪ್ ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.[ಕಣ್ಣೂರು-ಮಂಗಳೂರು ಲೈನ್ ನಿರ್ಮಾಣಕ್ಕಾಗಿ ಡಬಲ್ ಹಣ ಮಂಜೂರು]

2. ಟಿಕೆಟ್ ಬುಕಿಂಗ್, ಟ್ಯಾಕ್ಸಿ ಸೇವೆ, ಕೂಲಿ ಸೇರಿದಂತೆ ಎಲ್ಲ ಸೇವೆಯನ್ನೂ ಒಂದೇ ಆಪ್ ನಲ್ಲಿ ನೀಡಲಿದೆ.

3. ಟಿಕೆಟ್ ಬುಕಿಂಗ್, ಟ್ಯಾಕ್ಸಿ, ಎ-ಕ್ಯಾಟರಿಂಗ್, ಹೊಟೇಲ್ ರೂಮ್ ಬುಕಿಂಗ್ ಸೇರಿದಂತೆ ಎಲ್ಲ ಸೇವೆಗಳೂ ಈಗ ಬೇರೆ ಬೇರೆ ಆಪ್ ಗಳು ಲಭ್ಯವಿದ್ದು, ಇನ್ನು ಮುಂದೆ ಒಂದೇ ಆಪ್ ನಲ್ಲಿ ಈ ಎಲ್ಲವೂ ಸಿಗಲಿವೆ. , ಸಿಸನ್ ಟಿಕೆಟ್ಸ್, ಪ್ಲಾಟ್ ಫಾರ್ಮ್ ಟಿಕೆಟ್ ಸೇವೆಯೂ ಸಿಗಲಿವೆ.[ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೊಸ ಪ್ಲಾಟ್ ಫಾರ್ಮ್]

4. ಪ್ರಯಾಣಿಕರಿಗೆ ರಿಸರ್ವಡ್ ಮತ್ತು ಅನ್ ರಿಸರ್ವಡ್ ಟಿಕೆಟ್ ಪಡೆಯುವುದಕ್ಕೆ, ಸೀಸನಲ್ ಟಿಕೆಟ್ ಮತ್ತು ಪ್ಲಾಟ್ ಫಾರ್ಮ್ ಟಿಕೆಟ್ ಪಡೆಯುವುದಕ್ಕೂ ನೆರವಾಗಲಿದೆ.

5. ಈ ಎಲ್ಲಕ್ಕೂ ಒಂದೇ ರಿಜಿಸ್ಟ್ರೇಶನ್ ಮತ್ತು ಪೇಮೆಂಟ್ ಅಕೌಂಟ್ ಇರಲಿದೆ.

6. ಅನ್ ರಿಸರ್ವಡ್ ಟಿಕೆಟ್ ಗಳನ್ನು ಮೊಬೈಲ್ ಆಪ್ ಮೂಲಕವೇ ಬುಕ್ ಮಾಡುವುದರಿಂದ ಟಿಕೆಟ್ ಕೌಂಟರ್ ಎದುರು ಗಂಟೆಗಟ್ಟಲೆ ನಿಲ್ಲಬೇಕಿಲ್ಲ.

7. ಕಾಗದ ರಹಿತ ಟಿಕೆಟ್ ವ್ಯವಸ್ಥೆ ಮತ್ತು ಡಿಜಿಟಲ್ ವ್ಯವಸ್ಥೆಯನ್ನು ಉತ್ತೇಜಿಸುವ ಗುರಿಯನ್ನು ಆಪ್ ಹೊಂದಿದೆ.(ಪಿಟಿಐ ವರದಿ)

English summary
The Indian Railways will soon launch a travel app which will make your journey hassle free. the app which is going to release on May will include all neccessary service in a common registration and payment account
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X