ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಮಂತ್ರಿಯ ವೆಬ್‌ಸೈಟ್ 22 ಭಾಷೆಗಳಲ್ಲಿ ಲಭ್ಯವಾಗಲಿದೆ

|
Google Oneindia Kannada News

ನವದೆಹಲಿ, ಜುಲೈ 24: ಭಾರತದ ಪ್ರಧಾನಮಂತ್ರಿಯ ಅಧಿಕೃತ ವೆಬ್‌ಸೈಟ್(pmindia.gov.in) ಹೊಸ ರೂಪ ಪಡೆದುಕೊಂಡಿದೆ. ಹೊಸ ವಿನ್ಯಾಸ ಹಾಗೂ ಹೆಚ್ಚು ಭಾಷೆಗಳಲ್ಲಿ ಇದೀಗ ವೆಬ್ ತಾಣ ಲಭ್ಯವಾಗಲಿದೆ. ವಿಶ್ವಸಂಸ್ಥೆಯ 6 ಅಧಿಕೃತ ಭಾಷೆ ಹಾಗೂ 22 ಭಾರತೀಯ ಭಾಷೆಗಳಲ್ಲಿ ಪ್ರಧಾನಿ ವೆಬ್ ತಾಣ ನೋಡಬಹುದು.

ಇದಕ್ಕೂ ಮುನ್ನ ಪ್ರಧಾನಮಂತ್ರಿಯ ವೆಬ್‌ಸೈಟ್ 12 ಭಾಷೆಗಳಲ್ಲಿ ಮಾತ್ರ ಲಭ್ಯವಿತ್ತು. ಈಗ ಅರೇಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್ ಮತ್ತು ಸ್ಪ್ಯಾನಿಷ್ ಭಾಷೆಗಳನ್ನು ಸೇರಿಸಲಾಗಿದೆ. ಭಾರತೀಯ ಭಾಷೆಗಳಾದ ಅಸ್ಸಾಮಿ, ಬೆಂಗಾಳಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದುವಿನಲ್ಲು ಸಂಪೂರ್ಣ ವೆಬ್ ತಾಣದ ವಿವರಗಳು ಲಭ್ಯವಾಗಲಿದೆ.

New PM website to be available in 6 UN, 22 Indian languages

ರಾಷ್ಟ್ರೀಯ ಇ-ಆಡಳಿತ ವಿಭಾಗ (ಎನ್‌ಜಿಡಿ) ನೀಡಿರುವ ಪ್ರಸ್ತಾವಿತ ಮನವಿ(ಆರ್‌ಎಫ್‌ಪಿ) ಅನ್ವಯ ವೆಬ್‌ಸೈಟ್‌ಗಳ ವಿನ್ಯಾಸ, ಅಭಿವೃದ್ಧಿ,ಅನುಭವಿ ಸಂಸ್ಥೆಗೆ ಈ ತಾಣ ನಿರ್ವಹಣೆ ಜವಾಬ್ದಾರಿ ನೀಡಲಾಗುತ್ತದೆ. ಸ್ಥಳೀಯ ಭಾಷೆಗಳಲ್ಲಿ ಪ್ರಧಾನಿ ಸಚಿವಾಲಯದ ಎಲ್ಲಾ ಸುತ್ತೋಲೆ, ಭಾಷಣಗಳನ್ನು ಪ್ರಸಾರ, ನಿರ್ವಹಣೆ ಕೂಡಾ ಸಂಸ್ಥೆ ಜವಾಬ್ದಾರಿಯಾಗಿರುತ್ತದೆ. ಪಿಎಂ ಇಂಡಿಯಾ ಪೋರ್ಟಲ್ ನಿರ್ವಹಣೆಗಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 7 ಕೊನೆ ದಿನಾಂಕವಾಗಿದೆ.

English summary
The government has sought proposals from agencies to redesign the Prime Minister''s official website which will be available in six UN languages and 22 scheduled Indian languages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X