ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

861.9 ಕೋಟಿ ರೂ ವೆಚ್ಚದಲ್ಲಿ ಹೊಸ ಸಂಸತ್ ಭವನ: ಬಿಡ್ ಗೆದ್ದ ಟಾಟಾ ಸಮೂಹ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ದೇಶದಲ್ಲಿ ಮತ್ತೊಂದು ಬೃಹತ್ ಸಂಸತ್‌ ಭವನ ಸಿದ್ಧವಾಗಲಿದೆ. ಇನ್ನು ಒಂದು ವರ್ಷದಲ್ಲಿ ಸಂಸತ್‌ನ ಸದಸ್ಯರು ಹೊಸ ಸಂಸತ್ ಕಟ್ಟಡ ಸಂಕೀರ್ಣದಲ್ಲಿ ಕುಳಿತುಕೊಳ್ಳುವ ಸಾಧ್ಯತೆ ಇದೆ. ನೂತನ ಸಂಸತ್ ಭವನ ಕಟ್ಟಡ ನಿರ್ಮಾಣದ ಬಿಡ್‌ಅನ್ನು ದಿ ಟಾಟಾ ಪ್ರಾಜೆಕ್ಸ್ಟ್ ಲಿ. (ಟಿಪಿಎಲ್) ಗೆದ್ದುಕೊಂಡಿದೆ.

ನೂತನ ಸಂಸತ್ ಭವನದ ನಿರ್ಮಾಣ ಒಂದು ವರ್ಷದಲ್ಲಿಯೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಟ್ಟಡ ನಿರ್ಮಾಣಕ್ಕೆ ಅತಿ ಕಡಿಮೆ, ಅಂದರೆ 861.9 ಕೋಟಿ ರೂ ಯೋಜನಾ ವೆಚ್ಚದ ಬಿಡ್‌ಅನ್ನು ಟಾಟಾ ಸಮೂಹ ಪಡೆದುಕೊಂಡಿದೆ.

ಹೊಸ ಸಂಸತ್ ಭವನ ನಿರ್ಮಾಣ ಮತ್ತು ಐದು ವರ್ಷಗಳವರೆಗೆ ಅದರ ನಿರ್ವಹಣೆಗೆ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯೂಡಿ) ಕರೆದಿದ್ದ ಹಣಕಾಸು ಬಿಡ್‌ನಲ್ಲಿ ಟಾಟಾ ಸಮೂಹವು ಅತ ಕಡಿಮೆ ಮೊತ್ತದ ಬಿಡ್ ಸಲ್ಲಿಸಿತ್ತು.

ಕೊವಿಡ್ 19 ಸಂಕಷ್ಟದಲ್ಲೂ ಸಿಬ್ಬಂದಿಗೆ 235.54 ಕೋಟಿ ಬೋನಸ್!ಕೊವಿಡ್ 19 ಸಂಕಷ್ಟದಲ್ಲೂ ಸಿಬ್ಬಂದಿಗೆ 235.54 ಕೋಟಿ ಬೋನಸ್!

ಸಿಪಿಡಬ್ಲ್ಯೂಡಿ ಸುಮಾರು 940 ಕೋಟಿ ರೂ ವೆಚ್ಚದೊಳಗೆ ನೂತನ ಸಂಸತ್ ಭವನದ ನಿರ್ಮಾಣಕ್ಕೆ ಅಂದಾಜಿಸಿತ್ತು. ಟಾಟಾದ ಬಳಿಕ ಲಾರ್ಸೆನ್ ಆಂಡ್ ಟೌಬ್ರೊ ಲಿ. ಕಡಿಮೆ ಮೊತ್ತದ ಬಿಡ್ ಸಲ್ಲಿಸಿತ್ತು. ಎಲ್‌ ಆಂಡ್ ಟಿ 865 ಕೋಟಿ ರೂ. ಮೊತ್ತದ ಬಿಡ್ ಸಲ್ಲಿಕೆ ಮಾಡಿತ್ತು. ಮುಂದೆ ಓದಿ.

ತ್ರಿಕೋನಾಕಾರದಲ್ಲಿ ಕಟ್ಟಡ

ತ್ರಿಕೋನಾಕಾರದಲ್ಲಿ ಕಟ್ಟಡ

ಹಾಲಿ ಇರುವ ಸಂಸತ್ ಭವನದ ಸಮೀಪದಲ್ಲಿಯೇ ನೂತನ ಸಂಸತ್ ಭವನ ಸ್ಥಾಪನೆಯಾಗಲಿದೆ. ಸಂಸತ್ ಭವನ ಎಸ್ಟೇಟ್‌ನ ಪ್ಲಾಟ್ ಸಂಖ್ಯೆ 118ರಲ್ಲಿ ಇದನ್ನು ಗುರುತಿಸಲಾಗಿದೆ. ವಿಶೇಷವೆಂದರೆ ಈ ಹೊಸ ಭವನವು ತ್ರಿಕೋನಾಕೃತಿ ವಿನ್ಯಾಸದಲ್ಲಿ ಇರಲಿದೆ.

ಬ್ರಿಟಿಷರು ನಿರ್ಮಿಸಿದ ಕಟ್ಟಡ

ಬ್ರಿಟಿಷರು ನಿರ್ಮಿಸಿದ ಕಟ್ಟಡ

ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಹಾಲಿ ಸಂಸತ್ ಕಟ್ಟಡ ವೃತ್ತಾಕಾರದಲ್ಲಿದೆ. ಭಾರತದ ಅತ್ಯಂತ ವಿಶೇಷ ಸ್ಮಾರಕಗಳಲ್ಲಿ ಇದೂ ಒಂದು. 1921ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿ ಆರು ವರ್ಷದಲ್ಲಿ ಸಂಸತ್ ಭವನ ಸಿದ್ಧವಾಗಿತ್ತು. ಸ್ವಾತಂತ್ರ್ಯಾನಂತರ ಸಂಸದರು ಮತ್ತು ಕಚೇರಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಜಾಗದ ಅವಶ್ಯಕತೆ ಬೇಕಾಯಿತು. ಹೀಗಾಗಿ 1956ರಲ್ಲಿ ಇದರ ಮೇಲೆ ಇನ್ನೂ ಎರಡು ಮಹಡಿಗಳನ್ನು ನಿರ್ಮಿಸಲಾಗಿತ್ತು.

ಶಿಥಿಲಗೊಂಡ ಸಂಸತ್ ಭವನ

ಶಿಥಿಲಗೊಂಡ ಸಂಸತ್ ಭವನ

ಈಗಿರುವ ಸಂಸತ್ ಭವನವು ಹಳೆಯದಾಗಿದ್ದು, ಅತಿಯಾದ ಬಳಕೆ ಹಾಗೂ ಶಿಥಿಲವಾಗುತ್ತಿರುವ ಲಕ್ಷಣಗಳನ್ನು ತೋರಿಸುತ್ತಿದೆ. ಹೀಗಾಗಿ ಹೊಸ ಸಂಸತ್ ಭವನ ಕಟ್ಟುವುದು ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಹೊಸ ಭವನಕ್ಕೆ ಎಲ್ಲವೂ ವರ್ಗಾವಣೆಯಾದ ಬಳಿಕ ಹಳೆಯ ಕಟ್ಟಡವನ್ನು ನವೀಕರಿಸಿ ಸರ್ಕಾರದ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ.

ಹೆಚ್ಚುವರಿ ಸದಸ್ಯರಿಗೆ ಸ್ಥಳವಿಲ್ಲ

ಹೆಚ್ಚುವರಿ ಸದಸ್ಯರಿಗೆ ಸ್ಥಳವಿಲ್ಲ

ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯ ಬಳಿಕ ಇನ್ನಷ್ಟು ಹೊಸ ಕ್ಷೇತ್ರಗಳು ಸೃಷ್ಟಿಯಾಗಲಿವೆ. ಈಗಿರುವ ಸಂಸತ್‌ ರಚನೆಯಲ್ಲಿ ಹೆಚ್ಚುವರಿ ಸದಸ್ಯರಿಗೆ ಕೂರಲು ಸ್ಥಳಾವಕಾಶ ಕಡಿಮೆ ಇದೆ. ಹೀಗಾಗಿ ಹೊಸ ಕಟ್ಟಡದ ಅಗತ್ಯವಿದೆ ಎಂದು ವಿರೋಧಪಕ್ಷಗಳ ಪ್ರಶ್ನೆಗೆ ಸರ್ಕಾರ ಉತ್ತರಿಸಿದೆ. 2022ರಲ್ಲಿ ಭಾರತವು 75ನೇ ಸ್ವಾತಂತ್ರ್ಯೋತ್ಸವ ಆಚರಿಸಿದ ಸಂದರ್ಭದಲ್ಲಿ ಸಂಸತ್ ಅಧಿವೇಶನಗಳು ಹೊಸ ಕಟ್ಟಡದಲ್ಲಿ ನಡೆಯಬಹುದು ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

English summary
The Tata Projects Ltd (TPL) has won bid for the construction of the new Parliament House building for Rs 861.9 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X