• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ: ಇಂದಿನಿಂದ ಹೊಸ ನಿಯಮ ಜಾರಿ

|

ನವದೆಹಲಿ, ಅಕ್ಟೋಬರ್ 1: ಕೇಂದ್ರ ಸರ್ಕಾರ ನೂತನ ಮೋಟಾರು ವಾಹನ ನಿಯಮಾವಳಿ- 1989ಕ್ಕೆ ತಿದ್ದುಪಡಿ ತಂದಿದ್ದು, ವಾಹನ ಸವಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದಾಖಲೆಗಳ ಡಿಜಿಟಲೀಕರಣಕ್ಕೆ ಆದ್ಯತೆ ನೀಡಿದೆ.

ಇದರಿಂದಾಗಿ ಇನ್ನುಮುಂದೆ ನೀವು ನಿಮ್ಮ ವಾಹನದಲ್ಲಿ ಆರ್​ಸಿ ಬುಕ್, ಇನ್ಶುರೆನ್ಸ್​, ಲೈಸೆನ್ಸ್​ ಇಟ್ಟುಕೊಂಡು ಓಡಾಡಬೇಕಾಗಿಲ್ಲ. ನೀವು ಆ ಎಲ್ಲ ದಾಖಲೆಗಳನ್ನು ಮನೆಯಲ್ಲೇ ಮರೆತು ಬಂದರೂ ಟ್ರಾಫಿಕ್ ಪೊಲೀಸರು ಶುಲ್ಕ ವಿಧಿಸುವಂತಿಲ್ಲ.

ಮೋಟಾರು ವಾಹನ ತಿದ್ದುಪಡಿ ಕಾಯ್ದೆ; ರಾಜ್ಯದಿಂದ ಅಧಿಸೂಚನೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನ ನಿಯಮಾವಳಿ- 1989ಕ್ಕೆ ತಿದ್ದುಪಡಿ ತಂದಿದ್ದು ಈ ಮೂಲಕ ಕೆಲವೊಂದು ನಿಯಮಗಳನ್ನು ಮಾರ್ಪಾಡು ಮಾಡಿದೆ.

ಅಕ್ಟೋಬರ್‌ 1ರಿಂದ ದೇಶಾದ್ಯಂತ ಈ ಹೊಸ ಟ್ರಾಫಿಕ್‌ ನಿಯಮಗಳು ಜಾರಿಗೊಂಡಿವೆ.

ಇ-ಚಲನ್‌, ಲೈಸೆನ್ಸ್‌ ನಿಯಮ ಬದಲಾವಣೆ

ಇ-ಚಲನ್‌, ಲೈಸೆನ್ಸ್‌ ನಿಯಮ ಬದಲಾವಣೆ

ತಿದ್ದುಪಡಿ ಅನ್ವಯ ಚಾಲನಾ ಪರವಾನಗಿ ಮತ್ತು ಇ-ಚಲನ್‌ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾಹಿತಿ ತಂತ್ರಜ್ಞಾನ ಪೋರ್ಟಲ್‌ ಮೂಲಕ ನಿರ್ವಹಿಸಲಾಗುತ್ತದೆ. ಜತೆಗೆ ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ (DL) ಮತ್ತು ನೋಂದಣಿ ಪ್ರಮಾಣ ಪತ್ರಗಳನ್ನು (ಆರ್‌ಸಿ) ವಿತರಿಸಲಾಗುತ್ತದೆ. ವಾಹನ ಸವಾರರು ಚಾಲನಾ ಪರವಾನಗಿ ಹಾಗೂ ಆರ್‌ಸಿಗಳನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕಿದೆ.

ಎಟಿಎಂ ಕಾರ್ಡ್‌ ಮಾದರಿ ಕಾರ್ಯಾಚರಣೆ

ಎಟಿಎಂ ಕಾರ್ಡ್‌ ಮಾದರಿ ಕಾರ್ಯಾಚರಣೆ

ಹೊಸದಾಗಿ ಬರುವ ಡಿಎಲ್‌ ಮತ್ತು ಆರ್‌ಸಿಗಳು ಸ್ಮಾರ್ಟ್‌ ತಂತ್ರಜ್ಞಾನವನ್ನು ಹೊಂದಿರಲಿವೆ. ಅಂದರೆ ಹೊಸ ಕಾರ್ಡ್‌ನಲ್ಲಿ ಅತ್ಯಾಧುನಿಕ ಮೈಕ್ರೋ ಚಿಪ್‌ ಇರಲಿದ್ದು, ಕ್ಯೂಆರ್‌ ಕೋಡ್‌ ಹಾಗೂ ನಿಯರ್‌ ಫೀಲ್ಡ್ ಕಮ್ಯುನಿಕೇಶನ್‌ಗಳು ಇರಲಿವೆ. ಈ ಕಾರ್ಡ್‌ ಗಳು ಎಟಿಎಂ ಕಾರ್ಡ್‌ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ಡಿಜಿಟಲ್‌ ಮಾದರಿ

ಡಿಜಿಟಲ್‌ ಮಾದರಿ

ಚಾಲನಾ ಪರವಾನಗಿ, ಇ-ಚಲನ್‌ ಮತ್ತು ವಾಹನ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಮುದ್ರಿತ ಪ್ರತಿ (ಹಾರ್ಡ್‌ ಕಾಪಿ)ಗಳು ಆವಶ್ಯಕವಾಗಿರುವುದಿಲ್ಲ. ಇದರ ಹೊರತಾಗಿ ಡಿಜಿಟಲ್‌ ಮಾದರಿಯ ಮೂಲಕ ಮಾನ್ಯತೆ ಪಡೆದ ದಾಖಲೆಗಳನ್ನು ನೀಡಬಹುದಾಗಿದೆ.

ಅಧಿಕಾರಿಗಳ ಬಳಿ ಮಾಹಿತಿ

ಅಧಿಕಾರಿಗಳ ಬಳಿ ಮಾಹಿತಿ

ವಾಹನ ಸವಾರರ ಚಾಲನಾ ಪರವಾನಗಿ ಸಂಬಂಧಿಸಿದ ಎಲ್ಲ ಮಾಹಿತಿಗಳು ಸಂಚಾರಿ ಅಧಿಕಾರಿಗಳ ಬಳಿ ಲಭ್ಯವಾಗಲಿವೆ. ಪರವಾನಿಗೆ ಪ್ರಾಧಿಕಾರವು ಅನರ್ಹಗೊಳಿಸಿದ ಅಥವಾ ರದ್ದುಪಡಿಸಿದ ಚಾಲನಾ ಪರವಾನಿಗೆಯ ವಿವರಗಳನ್ನು ಅಧಿಕೃತ ಪೋರ್ಟಲ್‌ನಲ್ಲಿ ದಾಖಲಿಸಲಾಗುವುದಲ್ಲದೇ ಅದನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತದೆ.

ಡಿಜಿಲಾಕರ್‌, ಎಂ-ಪರಿವಾಹನ್‌ ಬಳಕೆ

ಡಿಜಿಲಾಕರ್‌, ಎಂ-ಪರಿವಾಹನ್‌ ಬಳಕೆ

ವಾಹನಗಳಿಗೆ ಸಂಬಂಧಪಟ್ಟ ದಾಖಲೆ ಪ್ರತಿಗಳನ್ನು ಕೇಂದ್ರ ಸರಕಾರದ ಆನ್‌ಲೈನ್‌ ಪೋರ್ಟಲ್‌ ಆದ ಎಂ-ಪರಿವಾಹನ್‌ ಅಥವಾ ಡಿಜಿಲಾಕರ್‌ ಆ್ಯಪ್‌ ಗಳಿಗೆ ಅಪ್‌ಲೋಡ್‌ ಮಾಡಬಹುದು. ಅಗತ್ಯ ಸಂದರ್ಭದಲ್ಲಿ ಇವುಗಳನ್ನು ದಾಖಲೆಯಾಗಿ ಬಳಸಬಹುದು.

ಇದು ನಿಮಗೆ ತಿಳಿದಿರಲಿ

ಇದು ನಿಮಗೆ ತಿಳಿದಿರಲಿ

ವಾಹನ ಚಲಾಯಿಸುವಾಗ ಮೊಬೈಲ್‌ ಬಳಸಿದರೆ 1,000 ದಿಂದ 5 ಸಾವಿರ ರೂ.ಗಳ ವರೆಗೆ ದಂಡ ವಿಧಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ. ಈ ನಿಯಮವೂ ಅ. 1 ರಿಂದ ಜಾರಿಗೆ ಬಂದಿದೆ.

English summary
In order to push digitisation and prevent harassment of drivers from traffic police officials, Union Ministry of Road Transport & Highways (MoRTH) has notified various amendments in Central Motor Vehicle Rules 1989 from 1 October
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X