ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

29 ರಾಷ್ಟ್ರಗಳನ್ನು ಕಾಡುತ್ತಿರುವ ಕೊರೊನಾವೈರಸ್ ಹೊಸ ರೂಪಾಂತರ ತಳಿ ಲ್ಯಾಂಬ್ಡಾ!

|
Google Oneindia Kannada News

ನವದೆಹಲಿ, ಜೂನ್ 18: ಜಗತ್ತಿನ ಬಲಿಷ್ಠ ರಾಷ್ಟ್ರಗಳಿಗೆ ಕೊರೊನಾವೈರಸ್ ಸೋಂಕಿನ ಡೆಲ್ಟಾ ರೂಪಾಂತರ ತಳಿಯನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ. ಇದರ ಮಧ್ಯೆ ಹರಡುತ್ತಿರುವ ಹೊಸ ರೂಪಾಂತರ ತಳಿಗೆ "ಲ್ಯಾಂಬ್ಡಾ" ಎಂದು ವಿಶ್ವ ಆರೋಗ್ಯ ಸಂಸ್ಥೆ ಹೆಸರು ನೀಡಿದೆ.

ಲ್ಯಾಂಬ್ಡಾ ರೂಪಾಂತರ ತಳಿಯು ಆತಂಕಕಾರಿ ಎಂಬಂತೆ ತೋರುತ್ತದೆ. ಆದರೆ ಆರೋಗ್ಯ ಸಂಸ್ಥೆಗಳಿಂದ ಪತ್ತೆ ಮಾಡಲಾಗಿರುವ ರೂಪಾಂತರ ತಳಿಯು ಗಂಭೀರ ಸ್ವರೂಪದ ಅಪಾಯವನ್ನು ಉಂಟು ಮಾಡುತ್ತಿದೆ ಎಂಬುದು ಸಾಬೀತಾಗಿಲ್ಲ.

ಭಾರತದಲ್ಲಿ ಪತ್ತೆಯಾದ ಕೊರೊನಾವೈರಸ್ ರೂಪಾಂತರ ತಳಿಗೆ ಹೊಸ ಹೆಸರು!ಭಾರತದಲ್ಲಿ ಪತ್ತೆಯಾದ ಕೊರೊನಾವೈರಸ್ ರೂಪಾಂತರ ತಳಿಗೆ ಹೊಸ ಹೆಸರು!

ಲ್ಯಾಂಬ್ಡಾ ರೂಪಾಂತರ ತಳಿಯು 2020ರ ಆಗಸ್ಟ್ ತಿಂಗಳಿನಲ್ಲಿ ಪೆರು ರಾಷ್ಟ್ರದಲ್ಲಿ ಆರಂಭಿಕವಾಗಿ ಪತ್ತೆಯಾಗಿತ್ತು. ಇಂದು ಜಗತ್ತಿನ 29 ದೇಶದಲ್ಲಿ ಲ್ಯಾಂಬ್ಡಾ ರೂಪಾಂತರ ತಳಿಯು ಪತ್ತೆ ಆಗಿದೆ. ಅರ್ಜೆಂಟೀನಾ, ಚಿಲಿ ರಾಷ್ಟ್ರಗಳು ಸೇರಿದಂತೆ ಲ್ಯಾಟಿನ್ ಅಮೆರಿಕಾದ ಹಲವೆಡೆ ಹೊಸ ತಳಿಯು ಕಾಣಿಸಿಕೊಂಡಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ವಾರದ ಬುಲೆಟಿನ್ ನಲ್ಲಿ ಉಲ್ಲೇಖಿಸಿದೆ.

ಹೊಸ ರೂಪಾಂತರ ತಳಿಯ ಸಂಯೋಜನೆ ಹೇಗೆ?

ಹೊಸ ರೂಪಾಂತರ ತಳಿಯ ಸಂಯೋಜನೆ ಹೇಗೆ?

"ಪ್ಯಾಂಗೋ ವಂಶಾವಳಿಯ C-37, ಮತ್ತು GISAID Clade ಅಂದರೆ GR/452Q.V1 ಮೊದಲ ತಳಿಯಾಗಿದ್ದು, 20D ಸಂಯೋಜಿತ ತಳಿಯನ್ನು ಜಾಗತಿಕವಾಗಿ ಲ್ಯಾಂಬ್ಡಾ ರೂಪಾಂತರ ತಳಿ ಎಂದು ಕಳೆದ ಜೂನ್ 14ರಂದು ವಿಶ್ವ ಆರೋಗ್ಯ ಸಂಸ್ಥೆಯ ಬುಲೆಟಿನ್ ನಲ್ಲಿ ಹೇಳಲಾಗಿದೆ.

ಲ್ಯಾಂಬ್ಡಾ ರೂಪಾಂತರ ತಳಿಯ ಹರಡುವಿಕೆ

ಲ್ಯಾಂಬ್ಡಾ ರೂಪಾಂತರ ತಳಿಯ ಹರಡುವಿಕೆ

"2021ರ ಏಪ್ರಿಲ್ ತಿಂಗಳವರೆಗೂ ಪೆರು ರಾಷ್ಟ್ರದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪೈಕಿ ಶೇ.81ರಷ್ಟು ಸೋಂಕಿತರಲ್ಲಿ ಲ್ಯಾಂಬ್ಡಾ ರೂಪಾಂತರ ತಳಿ ಪತ್ತೆಯಾಗಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜೊತೆಗೆ "ಕಳೆದ 60 ದಿನಗಳಲ್ಲಿ ಚಿಲಿ ರಾಷ್ಟ್ರದಲ್ಲಿ ಪತ್ತೆಯಾದ ಹೊಸ ಸೋಂಕಿತ ಪ್ರಕರಣಗಳಲ್ಲಿ ಶೇ.32ರಷ್ಟು ಮಂದಿಯಲ್ಲಿ ಲ್ಯಾಂಬ್ಡಾ ರೂಪಾಂತರ ತಳಿ ಪತ್ತೆಯಾಗಿದೆ. ಲ್ಯಾಂಬ್ಡಾ ರೂಪಾಂತರವನ್ನು "ವಿಸ್ತೃತ ಅವಧಿಯ ಎಚ್ಚರಿಕೆಯಂತೆ" ಪರಿಗಣಿಸಲಾಗುತ್ತದೆ," ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳಿದೆ.

ಲ್ಯಾಂಬ್ಡಾ ರೂಪಾಂತರದ ಹರಡುವಿಕೆ ಬಗ್ಗೆ ಉಲ್ಲೇಖ

ಲ್ಯಾಂಬ್ಡಾ ರೂಪಾಂತರದ ಹರಡುವಿಕೆ ಬಗ್ಗೆ ಉಲ್ಲೇಖ

"ಕೊರೊನಾವೈರಸ್ ಸೋಂಕಿನ ಲ್ಯಾಂಬ್ಡಾ ರೂಪಾಂತರ ತಳಿಯು ಸಮುದಾಯದ ಮಟ್ಟದಲ್ಲಿ ಹೇಗೆ ಪ್ರಸರಣ ಆಗಲಿದೆ. ಕೊವಿಡ್-19 ಸಂಬಂಧಿಸಿದ ಬೆಳವಣಿಗೆಗಳ ಆಧಾರದ ಮೇಲೆ ಈ ತಳಿಯ ಹರಡುವಿಕೆ ವೇಗ ಎಷ್ಟಿರುತ್ತದೆ ಎಂಬುದು ನಿರ್ಧಾರವಾಗುತ್ತದೆ," ಎಂದು WHO ತಿಳಿಸಿದೆ. 2020ರ ಆಗಸ್ಟ್ ನಲ್ಲಿ ಪೆರು ರಾಷ್ಟ್ರದಲ್ಲಿ ಆರಂಭಿಕವಾಗಿ ಸೋಂಕಿನ ಮಾದರಿ ಪತ್ತೆಯಾಗಿತ್ತು. 2021ರ ಜೂನ್ 15ರ ವೇಳೆಗೆ 29 ರಾಷ್ಟ್ರಗಳಿಂದ 1730 ಪ್ರಕರಣಗಳು ವರದಿಯಾಗಿವೆ.

ಲ್ಯಾಂಡ್ಯಾ ರೂಪಾಂತರ ತಳಿಯ ಸಾಮರ್ಥ್ಯ?

ಲ್ಯಾಂಡ್ಯಾ ರೂಪಾಂತರ ತಳಿಯ ಸಾಮರ್ಥ್ಯ?

"ಕೊರೊನಾವೈರಸ್ ಸೋಂಕಿನ ಲ್ಯಾಂಬ್ಡಾ ರೂಪಾಂತರ ತಳಿ ಹೆಚ್ಚು ಹರಡುವಿಕೆ ಸಾಮರ್ಥ್ಯ ಮತ್ತು ಪ್ರತಿಕಾಯಗಳನ್ನು ತಟಸ್ಥಗೊಳಿಸುವ ಕೆಲಸ ಮಾಡುತ್ತವೆ. ಜೊತೆಗೆ ಹೆಚ್ಚಿನ ಪ್ರತಿರೋಧದಂತಹ ಶಂಕಿತ ಫಿನೋಟೈಪಿಕ್ ಪರಿಣಾಮಗಳೊಂದಿಗೆ ಹಲವಾರು ರೂಪಾಂತರಗಳನ್ನು ಹೊಂದಿದೆ," ಎಂದು WHO ಹೇಳಿದೆ. "G75V, T76I, del247/253, L452Q, F490S, D614G and T859N ಸೇರಿದಂತೆ ಪ್ರೋಟೀನ್‌ನಲ್ಲಿನ ರೂಪಾಂತಗಳ ಹೆಚ್ಚಳದಿಂದ ಇದು ಖಾತ್ರಿಯಾಗುತ್ತದೆ," ಎಂದು WHO ತಿಳಿಸಿದೆ.

ಯಾವ ದೇಶದ ಕೊವಿಡ್ ರೂಪಾಂತರಕ್ಕೆ ಯಾವ ಹೆಸರು?

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ವಿವಿಧ ಹೆಸರುಗಳನ್ನು ನೀಡಿದೆ. ಈ ಕೊವಿಡ್-19 ರೂಪಾಂತರ ತಳಿಗಳ ಮೂಲ ವಂಶಾವಳಿ, ರಾಷ್ಟ್ರ, ರೂಪಾಂತರ ತಳಿ ಕಾಣಿಸಿಕೊಂಡ ವರ್ಷ ಹಾಗೂ ತಿಂಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.


ಕೊರೊನಾವೈರಸ್ ತಳಿ ಹೆಸರು - ದೇಶ ಮತ್ತು ದಿನಾಂಕ - ರೋಗಾಣುವಿನ ವಂಶಾವಳಿ

ಆಲ್ಫಾ - ಯುನೈಟೆಡ್ ಕಿಂಗ್ ಡಮ್, ಸಪ್ಟೆಂಬರ್ 2020 - B.1.1.7

ಬೇಟಾ - ದಕ್ಷಿಣ ಆಫ್ರಿಕಾ, ಮೇ 2020 - B.1.351

ಗಮ್ಮಾ - ಬ್ರೆಜಿಲ್, ನವೆಂಬರ್ 2020 - P.1

ಡೆಲ್ಟಾ - ಭಾರತ, ಅಕ್ಟೋಬರ್, 2020 - B.1.617.2

ಎಪ್ಸಿಲೋನ್ - ಯುಎಸ್ಎ, ಮಾರ್ಚ್, 2020 - B.1.427/B.1.429

ಜೇಟಾ - ಬ್ರೆಜಿಲ್, ಏಪ್ರಿಲ್ 2020 - P.2

ಎಟಾ - ಹಲವು ರಾಷ್ಟ್ರಗಳಲ್ಲಿ, ಡಿಸೆಂಬರ್,2020 - B.1.525

ಥೇಟಾ - ಫಿಲಿಫೈನ್ಸ್, ಜನವರಿ, 2021 - P.3

ಲೋಟಾ - ಯುಎಸ್ಎ, ನವೆಂಬರ್,2020 - B.1.526

ಕಪ್ಪಾ - ಭಾರತ, ಅಕ್ಟೋಬರ್, 2020 - B.1.617.1

English summary
New Lambda Coronavirus Variant Found In 29 Countries: All You Need To Know About New Variant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X