• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿದ್ಯುತ್ ಖರೀದಿಗೆ ಕೇಂದ್ರದಿಂದ ಹೊಸ ಸೂತ್ರ, ಅವು ಏನೇನು ಗೊತ್ತಾ?

|

ಕೇಂದ್ರ ಸರಕಾರವು ಮಹತ್ತರವಾದ ಗುರಿಯೊಂದನ್ನು ಹಾಕಿಕೊಂಡಿದೆ. ಅದರ ಪ್ರಕಾರ 24X7 ವಿದ್ಯುತ್ ಪೂರೈಕೆ ಮಾಡುವುದು ಒಂದು ಕಡೆಯಾದರೆ, ವಿದ್ಯುತ್ ಉತ್ಪಾದನೆ ಕಾರಣಕ್ಕೆ ಪರಿಸರ ನಾಶ ಆಗದ ಹಾಗೆ ಎಚ್ಚರ ಕೂಡ ವಹಿಸಲಾಗುತ್ತಿದೆ. ಆದ್ದರಿಂದಲೇ ನವೀಕರಣ ಶಕ್ತಿ ಮೂಲದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಸರಕಾರ ಹೆಚ್ಚಿನ ಮಟ್ಟದಲ್ಲಿ ಹಾಕಿಕೊಂಡಿದೆ.

ಈ ಯೋಜನೆಯಲ್ಲಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಮಾಡುವುದು ತುಂಬ ಪ್ರಮುಖವಾದದ್ದು. ಪಾರದರ್ಶಕ ಪ್ರಕ್ರಿಯೆ ಅಳವಡಿಸಿಕೊಳ್ಳುವ ಮೂಲಕ ಸರಕಾರ ಸೌರ ವಿದ್ಯುತ್ ನ ಪ್ರತಿ ಯೂನಿಟ್ ನ ದರವು 2.44 ರುಪಾಯಿಗೆ ತಲುಪುವಂತೆ ಮಾಡಿದೆ. ಇದರಿಂದ ಸೌರವಿದ್ಯುತ್ ಸ್ಪರ್ಧಾತ್ಮಕ ಬೆಲೆಗೆ ದೊರೆಯುವಂತಾಗಿದೆ.

ಅಷ್ಟೇ ಅಲ್ಲ, ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳ ಸಾಮರ್ಥ್ಯ ಕಳೆದ ಮೂರು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿ, 13.1 ಗಿಗಾ ವಾಟ್ ಗೆ ತಲುಪಿದೆ. ಸೌರಶಕ್ತಿ ಆಧಾರಿತ ಗ್ರಿಡ್ ಗಳಿಂದ ವಿದ್ಯುತ್ ಖರೀದಿಸಲು ಸಂಬಂಧಪಟ್ಟ ಸಚಿವಾಲಯವು ದರ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ ಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದೆ.

ಈ ಮಾರ್ಗದರ್ಶಿ ಸೂತ್ರಗಳಿಗೆ ಸಂಬಂಧಿಸಿದಂತೆ ಸರಕಾರವು ಇದೇ ತಿಂಗಳ ಅಂದರೆ ಆಗಸ್ಟ್ ಮೂರನೇ ತಾರೀಕು ಅಧಿಸೂಚನೆ ಹೊರಡಿಸಿದೆ. ಐದು ಮೆಗಾವಾಟ್ ಗಿಂತ ಹೆಚ್ಚು ಸಾಮರ್ಥ್ಯದ ಸೌರಶಕ್ತಿ ಚಾಲಿತ ವಿದ್ಯುತ್ ಅನ್ನು ಖರೀದಿ ಮಾಡಲು ಸ್ಪರ್ಧಾತ್ಮಕ ಬಿಡ್ಡಿಂಗ್ ಮಾಡಬೇಕಾಗುತ್ತದೆ. ಅದಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಲಾಗಿದೆ. 2003ರ ವಿದ್ಯುತ್ ಕಾಯ್ದೆ, ಸೆಕ್ಷನ್ 63ರ ಅಡಿಯಲ್ಲಿ ಸೂತ್ರಗಳನ್ನು ರೂಪಿಸಲಾಗಿದೆ.

ಆ ಮಾರ್ಗದರ್ಶಿ ಸೂತ್ರದ ಪ್ರಮುಖ ಅಂಶಗಳು ಹೀಗಿವೆ.

* ಈ ಹೊಸ ಪದ್ಧತಿ ಪ್ರಕಾರ ಸೌರವಿದ್ಯುತ್ ಖರೀದಿಯಲ್ಲಿ ಪಾರದರ್ಶಕತೆ ಹೆಚ್ಚುತ್ತದೆ. ಎಲ್ಲವೂ ನ್ಯಾಯಸಮ್ಮತವಾಗಿ ನಡೆಯುತ್ತದೆ.

* ಸೌರವಿದ್ಯುತ್ ಖರೀದಿ ವೇಳೆ ಎದುರಾಗಬಹುದಾದ ಅಪಾಯಗಳ ಜವಾಬ್ದಾರಿ ಹಲವರ ಮಧ್ಯೆ ಹಂಚಿಕೆಯಾಗುತ್ತದೆ.

* ಇದರಿಂದ ಈ ವಲಯದಲ್ಲಿ ಬಂಡವಾಳ ಹೆಚ್ಚು ಹರಿದುಬರುತ್ತದೆ. ಹೂಡಿಕೆದಾರರಿಗೂ ಯೋಜನೆಗಳು ಲಾಭದಾಯಕವಾಗುತ್ತವೆ

* ಇಡೀ ಪ್ರಕ್ರಿಯೆಯು ದೇಶದಾದ್ಯಂತ ಏಕರೂಪದಲ್ಲಿ ಇರುತ್ತದೆ.

* ಭೂಮಿ, ಸಂಪರ್ಕ ಹಾಗೂ ಸರಕಾರಿ ಮಟ್ಟದಲ್ಲಿ ಆಗಬೇಕಾದ ಕಡತ ವಿಲೇವಾರಿ ಎಲ್ಲವನ್ನೂ ಸಲೀಸಾಗಿ ಮಾಡಲಾಗಿದೆ. ಇದರಿಂದ ಯೋಜನೆಗಳು ವಿಳಂಬ ಆಗುವುದಿಲ್ಲ.

* ಇನ್ನು ಕನಿಷ್ಠ ಇಪ್ಪತ್ತೈದು ವರ್ಷಗಳಿಗೆ ಹೂಡಿಕೆದಾರರ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಏಕಪಕ್ಷೀಯವಾಗಿ ಒಪ್ಪಂದ ರದ್ದು ಮಾಡಿಕೊಳ್ಳುವುದೋ ಬದಲಾವಣೆ ಮಾಡುವುದೋ ಸಾಧ್ಯವಿಲ್ಲ.

* ವಿದ್ಯುತ್ ಉತ್ಪಾದಕರು ಹಾಗೂ ಖರೀದಿದಾರರ ಮಧ್ಯೆ ಸ್ಪಷ್ಟವಾದ ನಿರ್ದೇಶನಗಳಿರುತ್ತವೆ. ಅದರ ಪರಿಣಾಮವನ್ನು ಕೂಡ ಉಲ್ಲೇಖಿಸಲಾಗಿರುತ್ತದೆ.

* ಒಂದು ವೇಳೆ ಒಪ್ಪಂದವನ್ನು ರದ್ದು ಮಾಡಿದರೆ, ವಿದ್ಯುತ್ ಉತ್ಪಾದಿಸುವವರು ನೀಡಬೇಕಾದ ಪರಿಹಾರ ಅಥವಾ ಖರೀದಿಸುವವರು ನೀಡಬೇಕಾದ ಪರಿಹಾರದ ಸ್ಪಷ್ಟ ಉಲ್ಲೇಖ ಇರುತ್ತದೆ.

* ವಿದ್ಯುತ್ ಉತ್ಪಾದಕರಿಗೆ ಯಾವುದೇ ಬಿಲ್ ಬಾಕಿ ಉಳಿಸದಂತೆ ನೋಡಿಕೊಳ್ಳಲು ಸಹ ಕೆಲವು ಅಂಶಗಳನ್ನು ಸೇರಿಸಲಾಗಿದೆ.

English summary
The Government through transparent processes and an enabling environment has helped reduce solar tariffs to record low of Rs. 2.44 per unit. This has made solar power competitive and helped increase the installed capacity of grid connected solar more than 4 times to 13.1 GW in the last three years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more