ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಪ್ರಯಾಣಿಕರು ಇಂದಿನಿಂದ ಈ ಸೂಚನೆಗಳನ್ನು ಪಾಲಿಸಲೇಬೇಕು

|
Google Oneindia Kannada News

ನವದೆಹಲಿ, ಫೆಬ್ರವರಿ 22: ಭಾರತದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ ಕಂಡುಬರುತ್ತಿದೆ. ಅದರಲ್ಲಿಯೂ ಬ್ರಿಟನ್ ರೂಪಾಂತರದ ಬಳಿಕ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನ ರೂಪಾಂತರಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ರೂಪಾಂತರಿ ವೈರಸ್ ಕಾರಣದಿಂದ ಸೋಂಕಿತರ ಪ್ರಮಾಣ ಹೆಚ್ಚುವ ಭೀತಿ ಮೂಡಿದೆ.

ಜಗತ್ತಿನಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದರೂ, ಈಗ ಮತ್ತೆ ಸೋಂಕು ಹರಡುವುದು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ನಿಯಂತ್ರಿಸಲು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಹೊಸ ನಿಯಮವು ಬ್ರಿಟನ್, ಯುರೋಪ್ ಮತ್ತು ಮಧ್ಯಪ್ರಾಚ್ಯದಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಹೊರತುಪಡಿಸಿ ಉಳಿದವರಿಗೆ ಅನ್ವಯವಾಗಲಿದ್ದು, ಇಂದಿನಿಂದ (ಫೆ. 22) ಜಾರಿಯಾಗುತ್ತಿದೆ.

 ಭಾರತದಲ್ಲಿ ರೂಪಾಂತರಿ ಕೊರೊನಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಬಹುದು: ಏಮ್ಸ್ ಮುಖ್ಯಸ್ಥ ಭಾರತದಲ್ಲಿ ರೂಪಾಂತರಿ ಕೊರೊನಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಬಹುದು: ಏಮ್ಸ್ ಮುಖ್ಯಸ್ಥ

ಬ್ರಿಟನ್, ಯುರೋಪ್ ಮತ್ತು ಮಧ್ಯಪ್ರಾಚ್ಯದಿಂದ ಹೊರಡುವ ವಿಮಾನಗಳ ಮೂಲಕ ಬರುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಹೊರತುಪಡಿಸಿ ಉಳಿದವರು ತಮ್ಮ ನಿಗದಿತ ಪ್ರಯಾಣಕ್ಕೂ ಮುನ್ನ ಏರ್ ಸುವಿಧಾ ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಸಲ್ಲಿಸಬೇಕು ಎಂದು ಸರ್ಕಾರ ತಿಳಿಸಿದೆ. ಬ್ರಿಟನ್, ಯುರೋಪ್ ಹಾಗೂ ಮಧ್ಯಪ್ರಾಚ್ಯದಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈಗಾಗಲೇ ಪ್ರತ್ಯೇಕ ಮಾರ್ಗದರ್ಶಿ ಜಾರಿಯಲ್ಲಿದೆ. ಮುಂದೆ ಓದಿ.

ಕೋವಿಡ್ ನೆಗೆಟಿವ್ ವರದಿ

ಕೋವಿಡ್ ನೆಗೆಟಿವ್ ವರದಿ

ಕುಟುಂಬದಲ್ಲಿ ಯಾರಾದರೂ ಮೃತಪಟ್ಟ ಕಾರಣದಿಂದಾಗಿ ಭಾರತಕ್ಕೆ ತುರ್ತಾಗಿ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಕೋವಿಡ್ 19 ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಅಪ್ಲೋಡ್ ಮಾಡಬೇಕು. ಇದರಿಂದ ವಿನಾಯಿತಿ ಬೇಕಿದ್ದಲ್ಲಿ ವಿಮಾನ ಏರುವ ಕನಿಷ್ಠ 72 ಗಂಟೆಗೂ ಮುನ್ನ ನ್ಯೂಡೆಲ್ಲಿ ಏರ್‌ಪೋರ್ಟ್ ವೆಬ್‌ಸೈಟ್‌ನಲ್ಲಿ ಮನವಿ ಸಲ್ಲಿಸಬೇಕು. ಪ್ರಯಾಣಕ್ಕೂ 72 ಗಂಟೆಗಳ ಒಳಗೆ ಪರೀಕ್ಷೆ ನಡೆಸಬೇಕು. ಪ್ರತಿ ಪ್ರಯಾಣಿಕರೂ ವರದಿಯ ಅಧಿಕೃತತೆ ಬಗ್ಗೆ ಘೋಷಣೆ ಸಲ್ಲಿಸಬೇಕು.

ಮಹಾರಾಷ್ಟ್ರದಲ್ಲಿ ಜನರ ನಿರ್ಲಕ್ಷ್ಯದಿಂದಲೇ ಕೊರೊನಾ ಸೋಂಕು ಹೆಚ್ಚಳ: ತಜ್ಞರುಮಹಾರಾಷ್ಟ್ರದಲ್ಲಿ ಜನರ ನಿರ್ಲಕ್ಷ್ಯದಿಂದಲೇ ಕೊರೊನಾ ಸೋಂಕು ಹೆಚ್ಚಳ: ತಜ್ಞರು

ಲಕ್ಷಣವಿಲ್ಲದಿದ್ದರೆ ಮಾತ್ರ ಪ್ರಯಾಣ

ಲಕ್ಷಣವಿಲ್ಲದಿದ್ದರೆ ಮಾತ್ರ ಪ್ರಯಾಣ

ವಿಮಾನ ಪ್ರಯಾಣಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಯಾವುದೇ ರೋಗ ಲಕ್ಷಣಗಳಿಲ್ಲದ ಪ್ರಯಾಣಿಕರಿಗೆ ಮಾತ್ರ ವಿಮಾನದೊಳಗೆ ಪ್ರವೇಶ ನೀಡಲಾಗುತ್ತದೆ. ಹಾಗೆಯೇ ಸಮುದ್ರ ಮಾರ್ಗದಲ್ಲಿ ಬಂದರುಗಳ ಮೂಲಕ ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಚಾರದಲ್ಲಿ ಕೂಡ ಇದೇ ಶಿಷ್ಟಾಚಾರಗಳನ್ನು ಅನುಸರಿಸಬೇಕು.

ನಿರಂತರ ಮಾಹಿತಿ ನೀಡಬೇಕು

ನಿರಂತರ ಮಾಹಿತಿ ನೀಡಬೇಕು

ನೇರವಾಗಿ ಭಾರತಕ್ಕೆ ಬಾರದೆ, ಬೇರೆ ದೇಶಗಳಿಂದ ಸಂಪರ್ಕ ವಿಮಾನಗಳಿಂದ ಬರುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಕೂಡ ಭಾರತದ ಪ್ರತಿ ವಿಮಾನ ನಿಲ್ದಾಣಕ್ಕೂ ಪ್ರಯಾಣಕ್ಕೆ ಕನಿಷ್ಠ 6-8 ಗಂಟೆ ಹೆಚ್ಚುವರಿ ಸಮಯದ ಅಗತ್ಯ ಬೀಳಲಿದೆ ಎಂದು ಪ್ರಯಾಣಿಕರಿಗೆ ತಿಳಿಸುತ್ತಿರಬೇಕು. ತಪಾಸಣೆ ಹಾಗೂ ಇತರೆ ಪ್ರಕ್ರಿಯೆಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂಬ ಮಾಹಿತಿಯನ್ನು ಸಂಪರ್ಕ ವಿಮಾನಗಳ ಟಿಕೆಟ್ ಬುಕಿಂಗ್ ಸಂದರ್ಭದಿಂದಲೂ ನೀಡಬೇಕು.

ಅಂತಾರಾಷ್ಟ್ರಿಯ ಪ್ರತ್ಯೇಕಿಸಬೇಕು

ಅಂತಾರಾಷ್ಟ್ರಿಯ ಪ್ರತ್ಯೇಕಿಸಬೇಕು

ಬೇರೆ ದೇಶಗಳಿಂದ ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಮೂಲಕ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಗಳು ಗುರುತಿಸಿ ಅವರನ್ನು ವಿಮಾನದಲ್ಲಿ ಪ್ರತ್ಯೇಕಿಸಬೇಕು. ಬ್ರಿಟನ್, ಯುರೋಪ್ ಹಾಗೂ ಮಧ್ಯಪ್ರಾಚ್ಯದಿಂದ ಹೊರಡುವ ವಿಮಾನಗಳಲ್ಲಿ ಬಂದು ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಇಳಿಯುವ ರಾಜ್ಯವಾರು ಪ್ರಯಾಣಿಕರ ಬಗ್ಗೆ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಬೇಕಾಗುತ್ತದೆ.

ಮತ್ತೆ ಕೊರೊನಾ ಹೆಚ್ಚಳ; ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆಮತ್ತೆ ಕೊರೊನಾ ಹೆಚ್ಚಳ; ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ

ಅನುಮತಿ ಕಡ್ಡಾಯ

ಅನುಮತಿ ಕಡ್ಡಾಯ

ಭಾರತದಲ್ಲಿ 14 ದಿನಕ್ಕಿಂತ ಕಡಿಮೆ ಅವಧಿ ಉಳಿದುಕೊಳ್ಳುವ ಅಂತಾರಾಷ್ಟ್ರೀಯ ಪ್ರಯಾಣಿಕರು, ನೆಗೆಟಿವ್ ಪತ್ತೆಯಾದವರು, ಯಾವುದೇ ರೋಗ ಲಕ್ಷಣಗಳಿಲ್ಲದವರು ಕೂಡ ಎಲ್ಲ ಪ್ರಕ್ರಿಯೆಗಳಿಗೂ ಒಳಪಡಬೇಕು. ಭಾರತದಿಂದ ಹೊರಕ್ಕೆ ಪ್ರಯಾಣಿಸಲು ತಮ್ಮ ಜಿಲ್ಲಾ/ರಾಜ್ಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಮುಂಚೆಯೇ ಅನುಮತಿ ಪಡೆಯಬೇಕು.

English summary
Indian government's new guidelines for international travellers has been implemented on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X