ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರುಳ್ಳಿ ದರ ಏರಿಕೆಗೆ ಕಣ್ಣೀರಿಡುತ್ತಿರುವ ಗ್ರಾಹಕ

|
Google Oneindia Kannada News

ನವದೆಹಲಿ, ಆಗಸ್ಟ್, 20: ಏರುತ್ತಿರುವ ಈರುಳ್ಳಿ ದರಕ್ಕೆ ಲಂಗು ಲಗಾಮು ಇಲ್ಲವಾಗಿದೆ. ನಾಸಿಕ್​ನ ಲಾಸಲ್​ಗಾಂವ್ ಮಾರುಕಟ್ಟೆಯಲ್ಲಿ ಗುರುವಾರ ಈರುಳ್ಳಿಯ ಬೆಲೆ ಕ್ವಿಂಟಾಲ್​ಗೆ ಏಕಾಏಕಿ 400 ರು. ಏರಿಕೆ ಕಂಡಿತು. ಈ ಮೂಲಕ 4,900 ತಲುಪಿ ಹೊಸ ದಾಖಲೆ ಬರೆಯಿತು.

ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎನ್​ಎಚ್​ಆರ್​ಡಿಎಫ್) ಹೇಳುವಂತೆ ಲಾಸಲ್​ಗಾಂವ್ ಮಾರುಕಟ್ಟೆಗೆ ಆಗಮಿಸುತ್ತಿದ್ದ ಈರುಳ್ಳಿ ಏಕಾಏಕಿ ಕುಸಿತ ಕಂಡಿತು. ಕಟಾವು ವಿಳಂಬವಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಆವಕ ಕಡಿಮೆಯಾದ ಪರಿಣಾಮ ಏಕಾಏಕಿ ದರ ಏರಿಕೆ ಕಂಡಿತು.[ಈರುಳ್ಳಿ: ದೆಲ್ಲಿಯಲ್ಲಿ ಕೆಜಿಗೆ 80, ಬೆಂಗ್ಳೂರಲ್ಲಿ 67 ರು. !]

ಹಾಪ್ ಕಾಮ್ಸ್ ದರಪಟ್ಟಿ ನೋಡಿ

onion

ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮಳೆ ಅಭಾವದ ಕಾರಣ ಈರುಳ್ಳಿಯ ಮುಂಗಾರು ಫಸಲು ಗಣನೀಯವಾಗಿ ಇಳಿಮುಖವಾಗುವ ಸಾಧ್ಯತೆಗಳಿವೆ. ಈ ರಾಜ್ಯಗಳಲ್ಲಿ ಬರಭೀತಿಯೂ ಇದೆ. ಇದರ ಜೊತೆಗೆ ಗುಜರಾತ್, ರಾಜಸ್ತಾನ ಮತ್ತು ಮಧ್ಯ ಪ್ರದೇಶದಲ್ಲಿ ಕಟಾವು ವಿಳಂಬಗೊಂಡಿದೆ. ಇದೇ ರೀತಿ ಮುಂದುವರಿದರೆ ಬದರ ಇನ್ನಷ್ಟು ಏರಿಕೆಯಾಗಲಿದೆ.
ರಾಷ್ಟ್ರೀಯ ಕೃಷಿ ಸಹಕಾರಿ ಮತ್ತು ಮಾರಾಟ ಮಹಾ ಒಕ್ಕೂಟ (ನಫೆಡ್‌) 10 ಸಾವಿರ ಟನ್‌ ಈರುಳ್ಳಿ ಆಮದು ಸಲುವಾಗಿ ಈಗ ಮತ್ತೊಮ್ಮೆ ಟೆಂಡರ್‌ ಕರೆಯಲು ಮುಂದಾಗಿದ್ದರೂ ನಿರೀಕ್ಷಿತ ಸ್ಪಂದನೆ ವಿದೇಶಗಳಿಂದ ಸಿಕ್ಕಿಲ್ಲ.[ಈರುಳ್ಳಿ ದರ ದಿಢೀರ್ ಏರಿಕೆಗೆ ಕಾರಣವೇನು?]

ದೆಹಲಿ ನಾಗರಿಕರಿಗೆ ಸಬ್ಸಿಡಿ ಈರುಳ್ಳಿ
ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಈರುಳ್ಳಿ ದರ 80 ರು. ಗೆ ತಲುಪಿದದೆ. ಆದರ ದೆಹಲಿ ಸರ್ಕಾರ ಸಬ್ಸಿಡಿ ನೀಡಿ 30 ರೂಪಾಯಿ ದರದಲ್ಲಿ ದೆಹಲಿ ನಿವಾಸಿಗಳಿಗೆ ಈರುಳ್ಳಿ ಲಭಿಸುವಂತೆ ಮಾಡಿದೆ. ಬೆಂಗಳೂರಿನಲ್ಲಿ ಸದ್ಯ ಮಧ್ಯಮ ಗಾತ್ರದ ಈರುಳ್ಳಿಗೆ 65 ರಿಂದ 70 ನೀಡಬೇಕಿದೆ. ಅಪಘಾನಿಸ್ತಾನದಿಂದ ಸಣ್ಣ ಪ್ರಮಾಣದಲ್ಲಿ ಈರುಳ್ಳಿ ಆಮದು ಮಾಡಿಕೊಳ್ಳಲು ಆರಂಭ ಮಾಡಲಾಗಿದೆ.

English summary
Wholesale onion prices hit two-year high of Rs 4,900 per quintal, after it shot up by Rs 400 at the country's largest bulb wholesale market in Lasalgaon, Nashik.Meanwhile, Punjab traders have also started importing onions in small quantities from Afghanistan through the Attari-Wagah land route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X