ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ- ಲಾಹೋರ್ ಬಸ್ ಸೇವೆ ಸೋಮವಾರದಿಂದ ರದ್ದುಗೊಳಿಸಿದ ಡಿಟಿಸಿ

By ಅನಿಲ್ ಆಚಾರ್
|
Google Oneindia Kannada News

ದೆಹಲಿ- ಲಾಹೋರ್ ಮಧ್ಯದ ಬಸ್ ಸೇವೆಯನ್ನು ದೆಹಲಿ ಸಂಚಾರ ನಿಗಮವು ಸೋಮವಾರ ರದ್ದು ಮಾಡಿದೆ. ಭಾರತ ಸರಕಾರವು ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದ ಮೇಲೆ ಪಾಕಿಸ್ತಾನವು ಆ ಕಡೆಯಿಂದ ಬಸ್ ಸೇವೆ ನಿಲ್ಲಿಸಲು ತೀರ್ಮಾನಿಸಿದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಾರ್ವಜನಿಕ ಸಾರಿಗೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದೆಹಲಿ ಸಂಚಾರ ನಿಗಮದ ಬಸ್ ಲಾಹೋರ್ ಗೆ ತೆರಳಲು ಸೋಮವಾರ ಬೆಳಗ್ಗೆ ಆರು ಗಂಟೆಗೆ ಹೊರಡಬೇಕಿತ್ತು. ಆದರೆ ಬಸ್ ಸೇವೆಯನ್ನು ರದ್ದು ಮಾಡಲು ಪಾಕಿಸ್ತಾನ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಭಾರತದ ಕಡೆಯಿಂದಲೂ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿಯಿಂದ ಪಾಕಿಸ್ತಾನಕ್ಕೆ ಹೊರಟ ಕೊನೆ ಬಸ್ಸಿನಲ್ಲಿ 2 ಪ್ರಯಾಣಿಕರು!ದೆಹಲಿಯಿಂದ ಪಾಕಿಸ್ತಾನಕ್ಕೆ ಹೊರಟ ಕೊನೆ ಬಸ್ಸಿನಲ್ಲಿ 2 ಪ್ರಯಾಣಿಕರು!

ಪಾಕಿಸ್ತಾನ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದಿಂದ ಶನಿವಾರ ದೂರವಾಣಿ ಕರೆ ಮಾಡಿ, ಬಸ್ ಸೇವೆ ರದ್ದು ಮಾಡುತ್ತಿರುವ ಬಗ್ಗೆ ದೆಹಲಿ ಸಂಚಾರ ನಿಗಮಕ್ಕೆ ಮಾಹಿತಿ ನೀಡಲಾಗಿದೆ. ದೆಹಲಿಯಿಂದ ಲಾಹೋರ್ ಗೆ ಶನಿವಾರ ಬೆಳಗ್ಗೆ ಹೊರಟ ಬಸ್ ನಲ್ಲಿ ಇಬ್ಬರು ಪ್ರಯಾಣಿಕರು ಇದ್ದರು. ಇನ್ನು ಅದೇ ದಿನ ಸಂಜೆ ಲಾಹೋರ್ ನಿಂದ ದೆಹಲಿಗೆ ತಲುಪಿದ ಬಸ್ ನಲ್ಲಿ ಹತ್ತೊಂಬತ್ತು ಮಂದಿ ಇದ್ದರು. ಭಾನುವಾರದಂದು ಬಸ್ ಸೇವೆ ಇರಲಿಲ್ಲ.

New Delhi- Lahore Bus Cancelled From Monday

ಬಸ್ ಸೇವೆ ಮೊದಲ ಬಾರಿಗೆ 1999ರಲ್ಲಿ ಆರಂಭವಾಯಿತು. 2001ರಲ್ಲಿ ಭಾರತದ ಸಂಸತ್ ಮೇಲೆ ದಾಳಿ ನಡೆದ ನಂತರ ರದ್ದಾಗಿತ್ತು. ಆ ನಂತರ 2003ರ ಜುಲೈನಲ್ಲಿ ಬಸ್ ಸೇವೆ ಪುನರಾರಂಭ ಆಗಿತ್ತು. ಈ ವರ್ಷ ಫೆಬ್ರವರಿಯಲ್ಲಿ ಪುಲ್ವಾಮಾ ಉಗ್ರ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಬಾಲಾಕೋಟ್ ದಾಳಿ ಆದ ನಂತರ ಬಸ್ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತಾ ಬಂದಿತ್ತು.

ಲಾಹೋರ್- ದೆಹಲಿಗೆ ಡಿಟಿಸಿ ಬಸ್ ಗಳು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಮತ್ತು ದೆಹಲಿ- ಲಾಹೋರ್ ಪಿಟಿಡಿಸಿ ಬಸ್ ಗಳು ಮಂಗಳವಾರ, ಗುರುವಾರ, ಶುಕ್ರವಾರದಂದು ಕಾರ್ಯಾಚರಣೆ ನಡೆಸುತ್ತಿದ್ದವು. ವಾಪಸ್ ಪ್ರಯಾಣಕ್ಕೆ ಡಿಟಿಸಿ ಬಸ್ ಗಳು ಲಾಹೋರ್ ನಿಂದ ಪ್ರತಿ ಮಂಗಳವಾರ ಗುರುವಾರ ಹಾಗೂ ಶನಿವಾರ ಮತ್ತು ಪಿಟಿಡಿಸಿ ಬಸ್ ಗಳು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸಂಚರಿಸುತ್ತಿದ್ದವು.

English summary
Delhi transport corporation cancelled Delhi- Lahore bus service from Monday (August 12, 2019). Here is the further details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X