ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಏಮ್ಸ್ ಇ-ಹಾಸ್ಪಿಟಲ್ ಡೇಟಾ ಸರ್ವರ್‌ಗಳಲ್ಲಿ ಮರುಸ್ಥಾಪನೆ

|
Google Oneindia Kannada News

ನವದೆಹಲಿ, ನವೆಂಬರ್ 29: ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಮಂಗಳವಾರ ಇ-ಹಾಸ್ಪಿಟಲ್ ಡೇಟಾವನ್ನು ಸರ್ವರ್‌ಗಳಲ್ಲಿ ಮರುಸ್ಥಾಪಿಸಲಾಗಿದೆ ಎಂದು ಹೇಳಿದೆ. ಈ ಸೇವೆಗಳನ್ನು ಮರುಸ್ಥಾಪಿಸುವ ಮೊದಲು ನೆಟ್‌ವರ್ಕ್ ಅನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಏಮ್ಸ್ ಸಂಸ್ಥೆ ತಿಳಿಸಿದೆ.

ದತ್ತಾಂಶದ ಪ್ರಮಾಣ ಮತ್ತು ಆಸ್ಪತ್ರೆಯ ಸೇವೆಗಳಿಗಾಗಿ ಹೆಚ್ಚಿನ ಸಂಖ್ಯೆಯ ಸರ್ವರ್‌ಗಳು ಮಚ್ಚು ಕಂಪ್ಯೂಟರ್‌ಗಳ ಕಾರಣದಿಂದಾಗಿ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸೈಬರ್ ಭದ್ರತೆಯ ಬಗ್ಗೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತಿದೆ.

ದೆಹಲಿ ಏಮ್ಸ್‌ನ ಸರ್ವರ್ ಡೌನ್, ಸೈಬರ್‌ ವೈರಸ್‌ ದಾಳಿ ಶಂಕೆದೆಹಲಿ ಏಮ್ಸ್‌ನ ಸರ್ವರ್ ಡೌನ್, ಸೈಬರ್‌ ವೈರಸ್‌ ದಾಳಿ ಶಂಕೆ

"ಹೊರರೋಗಿ, ಒಳರೋಗಿ, ಪ್ರಯೋಗಾಲಯಗಳು, ಇತ್ಯಾದಿ ಸೇರಿದಂತೆ ಎಲ್ಲಾ ಆಸ್ಪತ್ರೆ ಸೇವೆಗಳು ಮ್ಯಾನುವಲ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ," ಎಂದು ಏಮ್ಸ್ ಸ್ಪಷ್ಟಪಡಿಸಿದೆ.

New Delhi AIIMS E-Hospital Data Restored On Servers after Ransomware Attack Suspect

ದೆಹಲಿಯ ಏಮ್ಸ್ ಸರ್ವರ್ ಮೇಲೆ ಸೈಬರ್ ದಾಳಿ:

ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್) ರಾಮ್ಸಮ್ವೇರ್ ದಾಳಿಗೆ ಒಳಗಾಗಿರಬಹುದು ಎಂದು ಆಸ್ಪತ್ರೆಯು ಹೇಳಿತ್ತು. ಈ ಸಂಬಂದ ಗುರುವಾರ ಬೆಳಗ್ಗೆ 7ರಿಂದಲೇ ಸರ್ವರ್‌ಗಳು ಕೆಟ್ಟು ನಿಂತಿದ್ದರಿಂದ ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಬೇರೆ ವಿಧಾನದಲ್ಲಿ ಕಾರ್ಯನಿರ್ವಹಿಸುವಂತಾಗಿತ್ತು. ಏಮ್ಸ್ ಆಸ್ಪತ್ರೆಯು ಹೇಳಿಕೆಯಲ್ಲಿ, ಸಿಸ್ಟಮ್ ಅನ್ನು ಮರುಸ್ಥಾಪಿಸಲು ಕೆಲಸ ಮಾಡುತ್ತಿರುವ ನ್ಯಾಷನಲ್ ಇನ್ಫೋಮ್ಯಾಟಿಕ್ಸ್ ಸೆಂಟರ್ "ಇದು ರಾಮ್ಸಮ್ವೇರ್ ದಾಳಿಯಾಗಿರಬಹುದು. ಈ ಬಗ್ಗೆ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಲ್ಪಡುತ್ತದೆ," ಎಂದು ತಿಳಿಸಿತು.

"ಡಿಜಿಟಲ್ ಸೇವೆಗಳನ್ನು ಮರುಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಇನ್) ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಬೆಂಬಲವನ್ನು ಪಡೆಯಲಾಗುತ್ತಿದೆ," ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿತ್ತು.

ಏನಿದು ರಾಮ್ಸಮ್ವೇರ್ ದಾಳಿ?:

ರಾಮ್ಸಮ್ವೇರ್ ಎನ್ನುವುದು ದುರುದ್ದೇಶಪೂರಿತ ಸಾಫ್ಟ್‌ವೇರ್ ಆಗಿದ್ದು, ಬಳಕೆದಾರರು ಅಥವಾ ಸಂಸ್ಥೆಯ ಕಂಪ್ಯೂಟರ್‌ನಲ್ಲಿರುವ ಫೈಲ್‌ಗಳಿಗೆ ಪ್ರವೇಶಿಸುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಸೈಬರ್ ದಾಳಿಕೋರರು ಇಂಥ ಫೈಲ್‌ಗಳಿಗೆ ಪ್ರವೇಶವನ್ನು ಅನುಮತಿಸಲು ಸುಲಿಗೆಯನ್ನು ಕೋರುತ್ತಾರೆ.

New Delhi AIIMS E-Hospital Data Restored On Servers after Ransomware Attack Suspect

ಏಮ್ಸ್ ಆಸ್ಪತ್ರೆಯಲ್ಲಿ ಉದ್ದನೆ ಸರತಿ ಸಾಲು:

ಪ್ರತಿ ವರ್ಷ 1.5 ಮಿಲಿಯನ್ ಹೊರರೋಗಿಗಳಿಗೆ ಮತ್ತು 80,000 ಒಳರೋಗಿಗಳಿಗೆ ಸೇವೆ ಸಲ್ಲಿಸುವ ನಗರದ ಅತಿದೊಡ್ಡ ರೆಫರಲ್ ಆಸ್ಪತ್ರೆಯು ಬೆಳಿಗ್ಗೆಯಿಂದ ಬೇರೆ ವಿಧಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ವಿಭಾಗದಲ್ಲೂ ಉದ್ದನೆಯ ಸರತಿ ಸಾಲುಗಳು ಕಾಣುತ್ತಿವೆ. ನೋಂದಾವಣೆ ವಿಭಾಗದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ, ಅಲ್ಲಿ ನೂರಾರು ಜನರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಅಲ್ಲದೆ, ಸ್ಮಾರ್ಟ್ ಲ್ಯಾಬ್, ವರದಿ ತಯಾರಿಕೆ, ಬಿಲ್ಲಿಂಗ್ ಮತ್ತು ಅಪಾಯಿಂಟ್‌ಮೆಂಟ್ ವ್ಯವಸ್ಥೆಗಳ ಮೇಲೂ ಈ ದಾಳಿಯು ಪರಿಣಾಮ ಬೀರಿದೆ. ಭವಿಷ್ಯದಲ್ಲಿ ಇಂತಹ ದಾಳಿಗಳು ನಡೆಯದಂತೆ ಏಮ್ಸ್ ಮತ್ತು ಎನ್ಐಸಿ ಮುನ್ನೆಚ್ಚರಿಕೆ ವಹಿಸಲಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.

ಏಮ್ಸ್ ವೆಬ್‌ಸೈಟ್‌ನ ಪ್ರಕಾರ, ಆಸ್ಪತ್ರೆಯನ್ನು 1956ರಲ್ಲಿ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಇದು ಭಾರತದಲ್ಲಿನ ಆರೋಗ್ಯ ವ್ಯವಸ್ಥೆಯ ಎಲ್ಲಾ ಅಂಶಗಳಲ್ಲಿ ಉತ್ಕೃಷ್ಟತೆಯ ಅಭಿವೃದ್ಧಿಗೆ ನ್ಯೂಕ್ಲಿಯಸ್ ಆಗಿ ಕಾರ್ಯನಿರ್ವಹಿಸುತ್ತದೆ.1978ರಲ್ಲೇ ಕಂಪ್ಯೂಟರ್ ಸೌಲಭ್ಯವನ್ನು ಸಣ್ಣ ರೀತಿಯಲ್ಲಿ ಪ್ರಾರಂಭಿಸಲಾಯಿತು.

English summary
New Delhi AIIMS E-Hospital Data Restored On Servers after Ransomware Attack Suspect. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X