ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚು ಕೋವಿಡ್ ಪ್ರಕರಣ; ಟಾಪ್ 10 ರಾಜ್ಯಗಳಲ್ಲಿ ಕರ್ನಾಟಕ

|
Google Oneindia Kannada News

ನವದೆಹಲಿ, ಮೇ 13; ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ದೆಹಲಿ, ಹರ್ಯಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಕಳೆದ 24 ಗಂಟೆಗಳ ಹೊಸ ಸೋಂಕಿನ ಅಂಕಿ ಸಂಖ್ಯೆಯಲ್ಲಿ ಈ ರಾಜ್ಯಗಳ ಪಾಲು ಶೇ 72.42ರಷ್ಟಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3,62,272 ಹೊಸ ಪ್ರಕರಣ ದಾಖಲಾಗಿದೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ ರಾಜ್ಯಗಳು ಸಹ ಹೆಚ್ಚು ಸೋಂಕಿತರು ಇರುವ ಟಾಪ್ 10 ರಾಜ್ಯಗಳಪಟ್ಟಿಯಲ್ಲಿದೆ.

ಸಿಎಂ, ಸಚಿವರ 1 ವರ್ಷದ ವೇತನ ಕೋವಿಡ್ ಪರಿಹಾರ ನಿಧಿಗೆ ಸಿಎಂ, ಸಚಿವರ 1 ವರ್ಷದ ವೇತನ ಕೋವಿಡ್ ಪರಿಹಾರ ನಿಧಿಗೆ

ಮಹಾರಾಷ್ಟ್ರದಲ್ಲಿ 46,781, ಕೇರಳದಲ್ಲಿ 43,529 ಮತ್ತು ಕರ್ನಾಟಕದಲ್ಲಿ 39,998 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 10,400 ಕಡಿಮೆಯಾಗಿದೆ.

ಬೆಂಗಳೂರಲ್ಲಿ ಕೋವಿಡ್ ಸೋಂಕು ಇಳಿಮುಖವೋ?, ಪರೀಕ್ಷೆ ಕಡಿಮೆಯೋ? ಬೆಂಗಳೂರಲ್ಲಿ ಕೋವಿಡ್ ಸೋಂಕು ಇಳಿಮುಖವೋ?, ಪರೀಕ್ಷೆ ಕಡಿಮೆಯೋ?

New COVID Cases In State Karnataka In Top 10 List

ಆಕ್ಸಿಜನ್ ಅಗತ್ಯತೆ ಎಷ್ಟು?; ದೆಹಲಿಯಲ್ಲಿ ಪ್ರತಿದಿನ ಅಗತ್ಯವಿದ್ದ ಆಕ್ಸಿಜನ್ ಪ್ರಮಾಣ 700 ಮೆಟ್ರಿಕ್ ಟನ್‌ನಿಂದ 582 ಮೆಟ್ರಿಕ್ ಟನ್‌ಗೆ ಕುಸಿದಿದೆ. ಉಳಿಯುವ ಆಕ್ಸಿಜನ್‌ ಅನ್ನು ಅಗತ್ಯವಿರುವ ಬೇರೆ ರಾಜ್ಯಗಳಿಗೆ ವಿತರಣೆ ಮಾಡಿ ಎಂದು ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದೆ.

ಕೋವಿಡ್‌ನಿಂದ ಗುಣಮುಖರಾದವರು ಎಂದು ಲಸಿಕೆ ಪಡೆಯಬೇಕು? ಕೋವಿಡ್‌ನಿಂದ ಗುಣಮುಖರಾದವರು ಎಂದು ಲಸಿಕೆ ಪಡೆಯಬೇಕು?

"ದೆಹಲಿ ನಗರದಲ್ಲಿ ಪಾಸಿಟಿವಿಟಿ ದರ ಶೇ 35ರಿಂದ ಶೇ 14ಕ್ಕೆ ಕಡಿಮೆಯಾಗಿದೆ. ಹೊಸ ಪ್ರಕರಣಗಳ ಸಂಖ್ಯೆ 28,000ದಿಂದ 10,400ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ನಗರದಲ್ಲಿ ಹೆಚ್ಚು ಬೆಡ್‌ಗಳು ಖಾಲಿಯಾಗಿವೆ. ಆಕ್ಸಿಜನ್ ಮೇಲಿನ ಅವಲಂಬನೆ ಕಡಿಮೆಯಾಗಿದೆ" ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ನರೇಂದ್ರ ಮೋದಿ ಸಭೆ; ಪ್ರಧಾನಿ ನರೇಂದ್ರ ಮೋದಿ ಕೋವಿಡ್ ಸೋಂಕಿನ ಪರಿಸ್ಥಿತಿ ತಿಳಿಯಲು ಸರಣಿ ಸಭೆಗಳನ್ನು ಮಾಡುತ್ತಿದ್ದಾರೆ. ಮೇ 18 ಮತ್ತು 20ರಂದು ಅವರು ಸೋಂಕು ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. 9 ರಾಜ್ಯಗಳ 46 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಯಲಿದ್ದು, ಇದರಲ್ಲಿ ಮುಖ್ಯಮಂತ್ರಿಗಳು ಸಹ ಪಾಲ್ಗೊಳ್ಳಲಿದ್ದಾರೆ.

English summary
Delhi, Haryana and Uttar Pradesh are among 10 states that account for 72.42 per cent of the 3,62,727 new Covid cases in the country. Karnataka, Tamil Nadu, Andhra Pradesh, West Bengal and Rajasthan are the other states in the list of 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X