ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕಿಲೀಕ್ಸ್ ಸ್ಪಷ್ಟನೆ : ತೀವ್ರ ಮುಜುಗರಕ್ಕೀಡಾದ ಮೋದಿ

|
Google Oneindia Kannada News

ನವದೆಹಲಿ, ಮಾ 18: ಜಗತ್ತಿನ ಪ್ರಮುಖ ನಾಯಕರ ಬಣ್ಣ ಬಯಲು ಮಾಡುತ್ತಿರುವ ವಿಕಿಲೀಕ್ಸ್, ಭಾರತೀಯ ಜನತಾ ಪಕ್ಷ ಮತ್ತು ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಮುಜುಗರಕ್ಕೀಡು ಮಾಡುವ ಸತ್ಯವನ್ನು ತೆರೆದಿಟ್ಟಿದೆ.

ನರೇಂದ್ರ ಮೋದಿ ಭ್ರಷ್ಟರಾಗಲು ಸಾಧ್ಯವೇ ಇಲ್ಲ ಎಂದು ತಾನು ಯಾವತ್ತೂ ಹೇಳಿ ಕೊಂಡಿಲ್ಲವೆಂದು ವಿಕಿಲೀಕ್ಸ್ ಸರಣಿ ಟ್ವೀಟ್ ಗಳ ಮೂಲಕ ಸಮಜಾಯಿಷಿ ನೀಡಿದೆ. ಮೋದಿ ಒಬ್ಬ ಪ್ರಾಮಾಣಿಕ ವ್ಯಕ್ತಿ ಮತ್ತು ಭಾರತದ ಏಕೈಕ ಕಳಂಕರಹಿತ ರಾಜಕಾರಣಿ ಎನ್ನುವ ಅರ್ಥದಲ್ಲಿ ನಮ್ಮ ಸಂಸ್ಥೆಯ ಮುಖ್ಯಸ್ಥ ಜೂಲಿಯನ್ ಅಸಾಂಜ್ ಎಂದೂ ಹೇಳಿಲ್ಲ ಎಂದು ವಿಕಿಲೀಕ್ಸ್ ಸ್ಪಷ್ಟನೆ ನೀಡಿದೆ.

ಮೋದಿ ಪ್ರಾಮಾಣಿಕತೆಗೆ ವಿಕಿಲೀಕ್ಸ್ ಶಹಬ್ಬಾಸ್ ಗಿರಿ ನೀಡಿದೆ ಎನ್ನುವ ಅಂಶವನ್ನು ಬಿಜೆಪಿ ತನ್ನ ಚುನಾವಣಾ ಪೋಸ್ಟರ್ ಗಳಲ್ಲಿ ಬಳಸಿಕೊಂಡಿತ್ತು. ಅಸಾಂಜ್ ಬೆಂಬಲ ತನಗಿರುವ ಅರ್ಥದಲ್ಲಿ ಬಿಜೆಪಿ ತನ್ನ ಜಾಹೀರಾತುಗಳಲ್ಲಿ ಬಳಸಿಕೊಳ್ಳುತ್ತಿದೆ. ಬಿಜೆಪಿಯ ಈ ಜಾಹೀರಾತುಗಳು ಸತ್ಯಕ್ಕೆ ದೂರವಾದುದು ಮತ್ತು ಇದಕ್ಕೂ ವಿಕಿಲೀಕ್ಸಿಗೂ ಸಂಬಂಧವಿಲ್ಲ ಎಂದು ವಿಕಿಲೀಕ್ಸ್ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದೆ.

We never said BJP PM candidate Narendra Modi incorruptible, WikiLeaks

ವಿಕಿಲೀಕ್ಸ್ ಮತ್ತು ಮೋದಿ: ಏನಿದು ವಿವಾದ? 2006ರಲ್ಲಿ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿ ಮೈಕಲ್ ಓವೆನ್, ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಪ್ರಮುಖವಾಗಿ ಬಂಡವಾಳ ಹೂಡಿಕೆಯ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದ್ದರು. ಭೇಟಿಯ ನಂತರ ಓವೆನ್ ತನ್ನ ಭೇಟಿಯಲ್ಲಿ ನಡೆದ ಮಾತುಕತೆಯ ಸಾರಾಂಶವನ್ನು ಅಮೆರಿಕಾಕ್ಕೆ ಕಳುಹಿಸಿದ್ದರು.

ಓವೆನ್ ಕಳುಹಿಸಿದ ರಹಸ್ಯ ದಾಖಲೆಗಳನ್ನು ವಿಕಿಲೀಕ್ಸ್ 2011ರಲ್ಲಿ ಸೋರಿಕೆ ಮಾಡಿತ್ತು. ಇದಾದ ನಂತರ ಕಳೆದ ವರ್ಷ ಅಮೆರಿಕ ರಾಯಭಾರಿ ನ್ಯಾನ್ಸಿ ಪೊವೆಲ್ ಗುಜರಾತ್ ರಾಜಧಾನಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಆಗ 2011ರಲ್ಲಿ ಬಿಡುಗಡೆ ಮಾಡಿದ್ದ ದಾಖಲೆಗಳನ್ನು ಮತ್ತೆ ಸುದ್ದಿಗೆ ತಂದ ವಿಕಿಲೀಕ್ಸ್, ಗುಜರಾತಿನ ಪ್ರಮುಖ ಕಾಂಗ್ರೆಸ್ ಮುಖಂಡರೊಬ್ಬರು ಮೋದಿ ಕಾರ್ಯವೈಖರಿಯನ್ನು ಶ್ಲಾಘಿಸಿದ್ದ ಹೇಳಿಕೆಯನ್ನು ಬಳಸಿಕೊಂಡಿತ್ತು.

ಈಗ ಬಿಜೆಪಿ ಅಂದು ತಾವು ಬಳಸಿಕೊಂಡಿದ್ದ ಹೇಳಿಕೆಯನ್ನು ಜಾಹೀರಾತುಗಳಲ್ಲಿ ಬಳಸಿ ಕೊಳ್ಳುತ್ತಿದೆ. ನಿಜಾಂಶ ಏನಂದರೆ ಅದು ನಮ್ಮ ಹೇಳಿಕೆಯಾಗಿರಲಿಲ್ಲ, ಕಾಂಗ್ರೆಸ್ ಮುಖಂಡರೊಬ್ಬರ ಹೇಳಿಕೆಯನ್ನು ನಾವು ಉಲ್ಲೇಖಿಸಿದ್ದೇವೆ. ಮೋದಿ ಪ್ರಾಮಾಣಿಕತೆಗೆ ನಾವು ಸರ್ಟಿಫಿಕೇಟ್ ನೀಡಿಲ್ಲ ಎನ್ನುವುದು ವಿಕಿಲೀಕ್ಸ್ ಈಗ ಕೊಡುತ್ತಿರುವ ಸಮಜಾಯಿಷಿ.

ಬಿಜೆಪಿ ಪ್ರತಿಕ್ರಿಯೆ : ವಿಕಿಲೀಕ್ಸ್ ಮತ್ತು ಅಸಾಂಜ್ ಅವರಿಂದ ಪ್ರಾಮಾಣಿಕತೆಯ ಸರ್ಟಿಫಿಕೇಟ್ ಪಡೆದು ಬಿಜೆಪಿಗೆ ಚುನಾವಣೆಯಲ್ಲಿ ಗೆಲ್ಲುವ ಅನಿವಾರ್ಯತೆ ಇಲ್ಲ. ನರೇಂದ್ರ ಮೋದಿ ಅವರಿಗೆ ಯಾರ ಪ್ರಮಾಣಪತ್ರದ ಅವಶ್ಯಕತೆಯೂ ಇಲ್ಲ ಎಂದು ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

English summary
Julian Assange's WikiLeaks said, BJP had pushed fake endorsement in support of its PM nominee Narendra Modi. In a series of tweets, WikiLeaks claimed it never said Modi was incorruptible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X