ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಕ್ರೆಡ್ ಗೇಮ್ಸ್ ನಲ್ಲಿ ರಾಜೀವ್ ಬಗ್ಗೆ ಡೈಲಾಗ್, ರಾಹುಲ್ ಪ್ರತಿಕ್ರಿಯೆ

By Mahesh
|
Google Oneindia Kannada News

ನವದೆಹಲಿ, ಜುಲೈ 15: ನೆಟ್ ಫ್ಲಿಕ್ಸ್ ನ ಜನಪ್ರಿಯ ವೆಬ್ ಸರಣಿ 'ಸೇಕ್ರೆಡ್ ಗೇಮ್ಸ್'ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ನಿಂದಿಸುವಂಥ ಡೈಲಾಗ್ ಇಡಲಾಗಿದೆ ಎಂಬ ಆರೋಪದ ಬಗ್ಗೆ ಎಐಸಿಸಿ ಅಧ್ಯಕ್ಷ, ರಾಜೀವ್ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಅವರು ಪ್ರತಿಕ್ರಿಯಿಸಿದ್ದಾರೆ.

'ನನ್ನ ತಂದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಒಂದು ವೆಬ್​ ಸರಣಿ ನನ್ನ ತಂದೆಯ ಖ್ಯಾತಿಯನ್ನು ಕುಗ್ಗಿಸಲು ಸಾಧ್ಯವಿಲ್ಲ' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Netflix row: Rahul says he believes in freedom of expression, nothing can undermine fathers contribution

ಆರ್​ಎಸ್​ಎಸ್​ ಮತ್ತು ಬಿಜೆಪಿ ವಾಕ್​ ಸ್ವಾತಂತ್ರವನ್ನು ಹತ್ತಿಕ್ಕಲು ನೋಡುತ್ತದೆ. ಆದರೆ, ನಾವು ವಾಕ್​ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ನನ್ನ ತಂದೆ ದೇಶಕ್ಕಾಗಿ ಬದುಕಿದ್ದರು ಮತ್ತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಜೀವ್ ಗಾಂಧಿ ಬಗ್ಗೆ ಡೈಲಾಗ್, ನಟ ನವಾಜುದ್ದೀನ್ ವಿರುದ್ಧ ದೂರುರಾಜೀವ್ ಗಾಂಧಿ ಬಗ್ಗೆ ಡೈಲಾಗ್, ನಟ ನವಾಜುದ್ದೀನ್ ವಿರುದ್ಧ ದೂರು

ನಟ ನವಾಜುದ್ದೀನ್ ಸಿದ್ದಿಕಿ, ನೆಟ್‌ಫ್ಲಿಕ್ಸ್ ವೆಬ್ ಸರಣಿಯ ನಿರ್ಮಾಪಕರ ವಿರುದ್ಧ ಕೋಲ್ಕತ್ತಾ ಪೊಲೀಸ್​ ಠಾಣೆಯಲ್ಲಿ ಪಶ್ಚಿಮ ಬಂಗಾಲದ ಕಾಂಗ್ರೆಸ್ ಮುಖಂಡರು ದೂರು ದಾಖಲಿಸಿದ್ದು, ರಾಜೀವ್​ ಗಾಂಧಿ ಅವರನ್ನು ಅವಮಾನಿಸುವಂಥ ಸಂಭಾಷಣೆ ಇಡಲಾಗಿದೆ ಎಂದು ಆರೋಪಿಸಿದ್ದರು.

ರಾಜೀವ್ ಕುಮಾರ್ ಸಿನ್ಹಾ ಎಂಬುವರು ಕೋಲ್ಕತ್ತಾದ ಗಿರೀಶ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಜೀವ್ ಗಾಂಧಿ ವಿರುದ್ಧ ಅಸಂವಿಧಾನಿಕ ಪದಗಳನ್ನು ಬಳಸಲಾಗಿದೆ. ಇದು ದೇಶದ ಜನತೆಗೆ ತಪ್ಪು ಸಂದೇಶ ನೀಡುತ್ತದೆ ಎಂದು ತಿಳಿಸಿದ್ದರು.

ವಿಕ್ರಮ್ ಚಂದ್ರ ಎಂಬವರ ಕಾದಂಬರಿ ಆಧಾರಿತ ಕಥೆಯನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ಇನ್ನು ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ ಹಾಗೂ ರಾಧಿಕಾ ಅಪ್ಟೆ ಮುಖ್ಯ ಭೂಮಿಕೆಯಲ್ಲಿದ್ದು, ಈಗಾಗಲೇ ಈ ವೆಬ್​ ಸರಣಿ ವೀಕ್ಷಕರ ಮನ ಗೆದ್ದಿದೆ.

English summary
Amid a row over alleged use of derogatory language in a web series while referring to former prime minister Rajiv Gandhi, Congress chief Rahul Gandhi today said the BJP and the RSS believe that freedom of expression must be policed, while he regards it as a fundamental democratic right.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X