• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಪರಿಸರ ದಿನ: ಪರಿಸರ ಸಂರಕ್ಷಣೆಗೆ ಧ್ವನಿ ಎತ್ತಿದ ನೇತಾರರು

By Nayana
|
Google Oneindia Kannada News

ಬೆಂಗಳೂರು, ಜೂನ್ 5: ಪ್ರತಿವರ್ಷವೂ ಪರಿಸರ ದಿನಾಚರಣೆ ಬಂದೇ ಬರುತ್ತದೆ. ಪರಿಸರ ದಿನಾಚರಣೆಯನ್ನು ಆಚರಿಸುವ ಮುನ್ನ ನಾವು ನಾಶ ಮಾಡಿದ ಮರಗಳಿಗೆ ಮೌನಾಚರಣೆ ಸಲ್ಲಿಸಲೇ ಬೇಕಿದೆ. ವರ್ಷಪೂರ್ತಿ ಗಿಡಗಳನ್ನು ಕಡಿದು ಪರಿಸರ ದಿನದಂದು ನಾಲ್ಕು ಗಿಡಗಳನ್ನು ನೆಡುವುದಲ್ಲ, ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ನಗರೀಕರಣ, ಪರಿಸರ ಮಾಲಿನ್ಯ ದಿನೇ ದಿನೇ ಅದರೊಂದಿಗೆ ಹೆಚ್ಚುತ್ತಿದೆ. ಕ್ರಮೇಣವಾಗಿ ಮಳೆ ಕಡಿಮೆಯಾಗುತ್ತಿದೆ.

ಇದು ಆತಂಕಕಾರಿ ಸಂಗತಿಯಲ್ಲವೇ, ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಯವರು ಶುದ್ಧಗಾಳಿ ಇಲ್ಲದೆ ಉಸಿರುಗಟ್ಟಿ ಸಾಯುತ್ತಾರೆ ಎನ್ನುವುದು ಆಘಾತಕಾರಿ ವಿಷಯವಲ್ಲವೇ, ಹೀಗಾಗಿ ಪರಿಸರವನ್ನು ಉಳಿಸುವ ಪ್ರಯತ್ನವನ್ನು ಪ್ರತಿಯೊಬ್ಬನೂ ಮಾಡಲೇ ಬೇಕು. ಪರಿಸರ ನಾಶದಿಂದಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

ಕಬ್ಬನ್ ಪಾರ್ಕ್ ನಲ್ಲಿ‌ನ ಅಲಂಕಾರಿಕ ಮನೆಗಳ ಪುನಶ್ಚೇತನ ಶೀಘ್ರ ಕಬ್ಬನ್ ಪಾರ್ಕ್ ನಲ್ಲಿ‌ನ ಅಲಂಕಾರಿಕ ಮನೆಗಳ ಪುನಶ್ಚೇತನ ಶೀಘ್ರ

ಪ್ರತಿ ವರ್ಷ ಪರಿಸರ ದಿನಾಚರಣೆ ಬರುತ್ತದೆ. ಆ ಸಂದರ್ಭದಲ್ಲಿ ಎಲ್ಲರ ಬಾಯಲ್ಲಿ ಪರಿಸರ ಕಾಳಜಿ ಬಗೆಗಿನ ಉದ್ದುದ್ದ ವಾಖ್ಯಗಳು, ಗಿಡ ನೆಡುವ ಸಡಗರ.. ಪರಿಸರ ಸಂರಕ್ಷಣೆಯ ಅಣಿಮುತ್ತುಗಳು..ಎಲ್ಲಡೆ ಹಸಿರಿನಿಂದ ಕಂಗೊಳಿಸುವ ಬಣ್ಣ... ಮುಂದಿನ ವರ್ಷದ ಪರಿಸರ ದಿನಾಚರಣೆ ಬರುವ ಹೊತ್ತಿಗೆ ನಗರದಲ್ಲಿ ಹಸಿರ ಕಾನನ ಮಾಡಿಬಿಡುತ್ತೇವೆ ಎಂಬ ಧಾವಂತ... ಹಾಗೆ ದಿನಗಳೆದಂತೆ ಆಡಿದ ಮಾತನ್ನು, ಪರಿಸರದ ಬಗೆಗಿನ ಕಾಳಜಿಯನ್ನೇ ಮರೆತು ಸಾಗುವ ಪರಿ.. ಇದು ನಾವು ಆಚರಿಸುತ್ತಿರುವ ಪರಿಸರ ದಿನಾಚರಣೆ....

1972ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕು ಎಂದು ನಿರ್ಧರಿಸಲಾಯಿತು. 1973ರಿಂದ ಪರಿಸರ ದಿನದ ಆಚರಣೆ ಪ್ರಾರಂಭವಾಯಿತು. ಅಂತೆಯೇ ಜೂನ್ 5 ವಿಶ್ವ ಪರಿಸರ ದಿನಾಚರಣೆ. ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮ. ಪ್ರತಿ ವರ್ಷ ನಿರ್ಧಿಷ್ಟ ವಸ್ತು ವಿಷಯವನ್ನಾಧರಿಸಿ ಆಚರಿಸಲಾಗುತ್ತದೆ. ಅಂತಯೇ 'ಯೋಚಿಸು, ಉಣ್ಣು, ಉಳಿಸು' ಎಂಬ ಸಿದ್ಧಾಂತದ ಮೇಲೆ ಈ ಬಾರಿ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.

ಪ್ರಧಾನಿ ಮೋದಿ ಗಿಡ ನೆಡುವ ಮೂಲಕ ಪರಿಸರ ದಿನ ಆಚರಣೆ

ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಗಿಡ ನೆಟ್ಟು ಅದಕ್ಕೆ ನೀರು ಹಾಕುವ ಮೂಲಕ ವಿಶ್ವ ಪರಿಸರ ದಿವನ್ನು ಆಚರಿಸಿದರು.ಅದರಂತೆಯೇ ನಮ್ಮ ಮುಂದಿನ ಭವಿಷ್ಯವನ್ನು ಉಜ್ವಲವಾಗಿಡಲು ಪರಿಸರ ನಮಗೆ ಮೂಲವಾಗಿದೆ. ಎಲ್ಲರೂ ಒಗ್ಗೂಡಿ ಪರಿಸರವನ್ನು ಉಳಿಸಲು ಪಣತೊಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಜೆಪಿನಗರದ ಉದ್ಯಾನದಲ್ಲಿ ಸಸಿನೆಟ್ಟ ಎಚ್‌ಡಿ ಕುಮಾರಸ್ವಾಮಿ

ಜೆಪಿನಗರದ ಉದ್ಯಾನದಲ್ಲಿ ಸಸಿನೆಟ್ಟ ಎಚ್‌ಡಿ ಕುಮಾರಸ್ವಾಮಿ

ಎಚ್‌ಡಿ ಕುಮಾರಸ್ವಾಮಿಯವರು ಜೆಪಿನಗರದ ಉದ್ಯಾನದಲ್ಲಲಿ ಗಿಡ ನೆಉವ ಮೂಲಕ ವಿಸ್ವ ಪರಿಸರ ದಿನವನ್ನು ಆಚರಿಸಿದರು. ವಿಶ್ವ ಪರಿಸರ ದಿನದಂದು ಪ್ರತಿಯೊಬ್ಬರು ಪರಿಸರ ಉಳಿಸುವ ಪ್ರತಿಜ್ಞೆ ಮಾಡಬೇಕು, ಪರಿಸರವನ್ನು ಕಾಪಾಡಲು ನಮ್ಮ ಸರ್ಕಾರ ಪೂರ್ಣ ಪ್ರಮಾಣದ ಆದ್ಯತೆ ನೀಡುತ್ತದೆ ಎಂದರು.

ನಮ್ಮ ಸುತ್ತಮುತ್ತಲಿನ ಪರಿಸರ ನಮ್ಮ ಸಂಪಾದನೆಯಲ್ಲ ಉಡುಗೊರೆ

ನಮ್ಮ ಸುತ್ತಲಿನ ಪರಿಸರ ನಮ್ಮ ಸಂಪಾದನೆಯಲ್ಲ, ಅದು ನಮಗೆ ಹಿರಿಯರು ನೀಡಿದ ಉಡುಗೊರೆ. ಅದನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮ ಕರ್ತವ್ಯ. ಇದರಲ್ಲಿ ವಿಫಲವಾದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸುವುದಿಲ್ಲ. ಪರಿಸರದ ರಕ್ಷಣೆಯಲ್ಲಿಯೇ ನಮ್ಮ ರಕ್ಷಣೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಅವರಿಂದ ಪರಿಸರ ದಿನಕ್ಕೆ ಟ್ವಿಟ್ಟರ್ ಸಂದೇಶ

ಮರಗಳನ್ನು ಕಡಿಯುವುದನ್ನು ನಿಲ್ಲಿಸುವುದರೊದಿಗೆ ಪ್ಲಾಸ್ಟಿಕ್ ಬಳಕೆಯನ್ನು ಕೂಡ ನಿಲ್ಲಿಸಬೇಕು, ಇದರಿಂದ ನಮ್ಮ ಪರಿಸರವನ್ನು ಉಳಿಸಲು ಸಾಧ್ಯವಾಗುತ್ತದೆ. ಇಂದು ನಮ್ಮ ಪರಿಸರವನ್ನು ಕಾಪಾಡಿಕೊಂಡರೆ ನಮ್ಮ ಮುಂದಿನ ಪೀಳಿಗೆಯೂ ಅದನ್ನು ಭದ್ರವಾಗಿಡುತ್ತದೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಪ್ಲಾಸ್ಟಿಕ್ ಬೇಕಾ ಪರಿಸರ ಬೇಕಾ ನೀವೇ ನಿರ್ಧರಿಸಿ

ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಇದರಿಂದ ಪರಿಸರ ಉಳಿಯುತ್ತದೆ, ನಿಮಗೆ ಪರಿಸರ ಮುಖ್ಯ ಅಥವಾ ಪ್ಲಾಸ್ಟಿಕ್ ಮುಖ್ಯವಾ ಎಂದು ಆಲೋಚನೆ ಮಾಡಿ, ಹಾಗೆಯೇ ಸ್ಯಾಂಕಿ ಕೆರೆಯೂ ಶೀಘ್ರದಲ್ಲಿ ಪರಿಸರ ಸ್ನೇಹಿಯಾಗಿ ಮಾರ್ಪಾಡಾಗಲಿದೆ. ಕೆರೆಯ ಸುತ್ತಮುತ್ತ ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ನೀರು, ಗಾಳಿಯನ್ನು ಮಲಿನ ಮಾಡಲು ಹೋಗಿ ನೀವೇ ಮಲಿನವಾಗಬೇಡಿ

ನೀರು, ಗಾಳಿ, ಪರಿಸರವನ್ನು ಮಲಿನ ಮಾಡಿ ನಿಮ್ಮನ್ನು ನೀವು ಮಲಿನ ಮಾಡಿಕೊಳ್ಳಬೇಡಿ, ಪರಿಸರವನ್ನು ಉಳಿಸಿಕೊಂಡು ಹೋಗುವತ್ತ ಗಮನಕೊಡಿ ಎಂದು ಮಾಜಿ ಸಚಿವ ಕೆಜೆ ಜಾರ್ಜ್ ವಿಶ್ವ ಪರಿಸರ ದಿನಕ್ಕೆ ಶುಭಾಶಯ ಕೋರಿದ್ದಾರೆ.

English summary
Prime minister Narendra modi, karanataka chief minister HD Kumaraswamy, D.K.Shivakumar, Dr.Ashwath narayan, KJ George have tweeted about environment preservation is need of the hour on the occasion of World Environment Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X