ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1966ರ ತಾಷ್ಕೆಂಟ್ ಒಪ್ಪಂದಕ್ಕೆ ನೇತಾಜಿ ಸಾಕ್ಷಿಯಾಗಿದ್ದರೆ?

By Mahesh
|
Google Oneindia Kannada News

ಕೋಲ್ಕತಾ,ಡಿ.13: ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಜೀವಿತಾವಧಿ ಕುರಿತಂತೆ ಮತ್ತೊಂದು ಮಹತ್ವದ ವಿಷಯ ಹೊರಬಂದಿದೆ. ಬ್ರಿಟಿಷ್ ಫಾರೆನ್ಸಿಕ್ ಮ್ಯಾಪಿಂಗ್ ವರದಿ ಪ್ರಕಾರ, 1966ರ ತಾಷ್ಕೆಂಟ್‌ ಒಪ್ಪಂದಕ್ಕೆ ನೇತಾಜಿ ಅವರು ಸಾಕ್ಷಿಯಾಗಿದ್ದರು ಎಂದು ಹೇಳಲಾಗಿದ್ದು, ಈ ಕುರಿತಂತೆ ಗ್ರೂಪ್ ಫೋಟೊ ಪ್ರಕಟಿಸಲಾಗಿದೆ. ಇದು ನಿಜವಾಗಿಯೂ ನೇತಾಜಿ ಅವರ ಚಿತ್ರ ಹೌದೋ ಅಲ್ಲವೋ ಎಂಬುದರ ಬಗ್ಗೆ ಚರ್ಚೆ ಮೊದಲುಗೊಂಡಿದೆ.

1966ರಲ್ಲಿ ತಾಷ್ಕೆಂಟ್‌ನಲ್ಲಿ 1966ರಲ್ಲಿ ಭಾರತ-ಪಾಕಿಸ್ತಾನ ನಡುವೆ ರಷ್ಯಾದ ತಾಷ್ಕೆಂಟ್​ನಲ್ಲಿ ನಡೆದ ಶಾಂತಿ ಮಾತುಕತೆ ಒಪ್ಪಂದದ ವೇಳೆ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜೊತೆ ನೇತಾಜಿ ಅವರು ಇದ್ದರು.[ಸುಭಾಷ್ ಚಂದ್ರ ಬೋಸ್ ‍ಸಂಬಂಧಿಸಿದ 64 ರಹಸ್ಯ ಫೈಲ್ಸ್ ಬಹಿರಂಗ]

Netaji Subhas Chandra Bose was alive in 1966 Tashkent declaration

ನೇತಾಜಿ ಅವರು ಪತ್ರಕರ್ತರಾಗಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು 'ನೇತಾಜಿ ಸಂಶೋಧಕರ' ತಂಡ ಹೇಳಿದೆ.

ಈ ತಿಂಗಳ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಸ್ಕೊಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ವಿಷಯದ ಕುರಿತ ಸತ್ಯಾಂಶವನ್ನು ಬಹಿರಂಗಪಡಿಸುವಂತೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮೇಲೆ ಒತ್ತಡ ಹೇರಬೇಕು ಎಂದು 'ನೇತಾಜಿ ಸಂಶೋಧಕರ' ತಂಡ ಕೇಳಿಕೊಂಡಿದೆ.

English summary
A forensic face-mapping report submitted by a British expert, which is yet to be wholly ascertained, has found strong resemblance between a man – sharing space with the former prime minister Lal Bahadur Shashtri in a photograph clicked in Tashkent – and Netaji Subhas Chandra Bose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X