ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಪ್ರದೇಶ ತನ್ನದೆಂದು ಪುಸ್ತಕಗಳಲ್ಲಿ ಉಲ್ಲೇಖಿಸಿದ ನೇಪಾಳ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 18: ಭಾರತದ ಉತ್ತರಾಖಂಡದ ಪಿಥೊರಾಗಡವನ್ನು ತನ್ನದೇ ಭೂಮಿ ಎಂದು ಪ್ರತಿಪಾದಿಸುವ ರಾಜಕೀಯ ಭೂಪಟವನ್ನು ಅಂಗೀಕರಿಸಿದ ಮೂರು ತಿಂಗಳ ಬಳಿಕ ನೇಪಾಳವು, ತನ್ನ ಶೈಕ್ಷಣಿಕ ಪಠ್ಯಕ್ರಮಗಳು ಹಾಗೂ ಕರೆನ್ಸಿಗಳಲ್ಲಿ ಬದಲಾವಣೆ ತಂದಿದೆ.

ನೇಪಾಳದ ಭೂಗೋಳಶಾಸ್ತ್ರ ಮತ್ತು ಪ್ರಾದೇಶಿಕ ಗಡಿ ಎಂಬ ಪಠ್ಯ ಪುಸ್ತಕವನ್ನು ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗಿದೆ ಎಂದು ನೇಪಾಳದ ಶಿಕ್ಷಣ ಸಚಿವ ಗಿರಿರಾಜ್ ಮಣಿ ಪೋಖರೆಲ್ ಕಚೇರಿ ತಿಳಿಸಿದೆ. ಇದಕ್ಕೆ ಮುನ್ನುಡಿಯನ್ನು ಪೋಖರೆಲ್ ಬರೆದಿದ್ದಾರೆ.

ಭಾರತೀಯರಿರುವ ಮೂರು ಹಳ್ಳಿಯನ್ನು ಖರೀದಿಸಲು ಮುಂದಾದ ನೇಪಾಳ ಭಾರತೀಯರಿರುವ ಮೂರು ಹಳ್ಳಿಯನ್ನು ಖರೀದಿಸಲು ಮುಂದಾದ ನೇಪಾಳ

ಉತ್ತರಾಖಂಡದ ವಿವಾದಾತ್ಮಕ ಪ್ರದೇಶ ಕಾಲಾಪಾನಿಯು ನೇಪಾಳಕ್ಕೆ ಸೇರಿದ್ದು ಎಂದು ಪುಸ್ತಕದಲ್ಲಿ ಹೇಳಲಾಗಿದೆ. ನೇಪಾಳವು 1,47,641.28 ಚದರ ಕಿ.ಮೀ. ಭೌಗೋಳಿಕ ಪ್ರದೇಶ ಹೊಂದಿದ್ದು, ಅದರಲ್ಲಿ 460 ಚದರ ಕಿ.ಮೀ. ಕಾಲಾಪಾನಿ ಪ್ರದೇಶವಿದೆ ಎಂದು ಅದರಲ್ಲಿ ನಮೂದಿಸಲಾಗಿದೆ.

Nepal Depicts Indias Pithoragarh As Its Own Area in Book

ಇದೇ ವೇಳೆ ಪ್ರಧಾನಿ ಕೆ.ಪೊ. ಒಲಿ ನೇತೃತ್ವದ ನೇಪಾಳ ಸಂಪುಟವು ದೇಶದ ಕೇಂದ್ರ ಬ್ಯಾಂಕ್, ನೇಪಾಳ ರಾಷ್ಟ್ರ ಬ್ಯಾಂಕ್‌ಗೆ ಹೊಸ ರಾಜಕೀಯ ನಕಾಶೆಯೊಂದಿಗಿನ ಒಂದು ರೂಪಾಯಿ ಮತ್ತು ಎರಡು ರೂಪಾಯಿ ಮುಖಬೆಲೆಯ ಹೊಸ ನಾಣ್ಯಗಳನ್ನು ಟಂಕಿಸಲು ಅನುಮತಿ ನೀಡಿದೆ.

ನೇಪಾಳ ಗಡಿಯಲ್ಲಿ ಎಚ್ಚರಿಕೆಯಿಂದಿರಲು ಕೇಂದ್ರ ಗೃಹ ಸಚಿವಾಲಯ ಸೂಚನೆ ನೇಪಾಳ ಗಡಿಯಲ್ಲಿ ಎಚ್ಚರಿಕೆಯಿಂದಿರಲು ಕೇಂದ್ರ ಗೃಹ ಸಚಿವಾಲಯ ಸೂಚನೆ

ಹೊಸ ನಾಣ್ಯಗಳು ದಸರಾ ಆಚರಣೆ ಸಂದರ್ಭದಲ್ಲಿ ಚಲಾವಣೆಗೆ ಬರಲಿವೆ. ನೇಪಾಳದಲ್ಲಿ ಪ್ರಮುಖ ಹಬ್ಬವಾಗಿ ದಸರಾ ಆಚರಣೆಯಾಗುತ್ತದೆ. ಈ ವೇಳೆ ಹೊಸ ನಾಣ್ಯಗಳು ಜನರಿಗೆ ತಲುಪಲಿವೆ.

ಪಿಥೊರಾಗಡದಲ್ಲಿ ಕಳೆದ ನವೆಂಬರ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಿಪುಲೇಖ್ ರಸ್ತೆಯನ್ನು ಉದ್ಘಾಟಿಸಿದ್ದರು. ಆಗ ಅದಕ್ಕೆ ನೇಪಾಳ ಪ್ರತಿಭಟನೆ ವ್ಯಕ್ತಪಡಿಸಿತ್ತು. ರಸ್ತೆಯ ಒಂದು ಭಾಗವು ತನ್ನ ಪ್ರದೇಶದೊಳಗೆ ಹಾದು ಹೋಗುತ್ತದೆ ಎಂದು ಆರೋಪಿಸಿತ್ತು.

English summary
Nepal Education department in its new curriculam has depicts Uttarakhand's Pithoragarh as its own.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X