ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರಿಗೆ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ: ಸಿಪಿಐ ಆಕ್ಷೇಪ

|
Google Oneindia Kannada News

ನವದೆಹಲಿ, ಜುಲೈ 31: ನೂತನ ಶಿಕ್ಷಣ ನೀತಿ (ಎನ್.ಇ.ಪಿ.) ಯಿಂದಾಗಿ ಶಿಕ್ಷಣದ ಸಾರ್ವತ್ರೀಕರಣದ ಪರಿಕಲ್ಪನೆಯಿಂದ ದೂರ ಸರಿಯಲಿದೆ. ಶಿಕ್ಷಣ ಮಾರುಕಟ್ಟೆ ಸೃಷ್ಟಿಸುವತ್ತ ಗಮನ ಕೇಂದ್ರೀಕರಿಸಲಾಗಿದೆ ಎಂದು ಸಿಪಿಐ ಆರೋಪಿಸಿದೆ.

ಆರ್.ಎಸ್.ಎಸ್. ನೇತೃತ್ವದ ಎನ್.ಡಿ.ಎ ಸರ್ಕಾರದ ನೂತನ ಶಿಕ್ಷಣ ನೀತಿಯು ಶಿಕ್ಷಣ ಮಾರುಕಟ್ಟೆಯ ಉದ್ದೇಶ ಹೊಂದಿದೆ. ಇದರಿಂದ ಬಡವರು ಹಾಗೂ ಸಾಮಾಜಿಕವಾಗಿ ದಮನಿತರಿಗೆ
ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂದು ಹೇಳಿದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶ

ಸಾರ್ವಜನಿಕ ಅನುದಾನದ ಶಿಕ್ಷಣ ಇರದೇ ಹೋದರೆ ಈಗಿರುವ ಅಲ್ಪ ಸ್ವಲ್ಪ ಸಾಮಾಜಿಕ ನ್ಯಾಯವೂ ತಪ್ಪಲಿದೆ ಸಂಸತ್ತು ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸಿ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ನವ ಉದಾರವಾದಿ ಅಜೆಂಡಾವನ್ನು ಶಿಕ್ಷಣದಲ್ಲಿ ಜಾರಿಗೆ ತರಲು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಪಿಐ ದೂರಿದೆ.

NEP will create education markets, prevent poor from getting quality education: CPI

ಈ ಕ್ರಮದಿಂದ ಶಿಕ್ಷಣ ಸಂಪೂರ್ಣ ಖಾಸಗೀಕರಣ, ವಾಣಿಜ್ಯೀಕರಣ ಹಾಗೂ ಕೇಂದ್ರೀಕರಣವಾಗುತ್ತದೆ. ಇದರಿಂದ ಶುಲ್ಕ ಹೆಚ್ಚುತ್ತದೆ, ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಯ ಮೇಲೆ ದಾಳಿಯಾಗುತ್ತದೆ ಹಾಗೂ ಶಿಕ್ಷಣದಲ್ಲಿ ಶಾಶ್ವತ ಉದ್ಯೋಗ ಉಳಿಯುವುದಿಲ್ಲ ಎಂದು ಎಡಪಕ್ಷ ಆರೋಪಿಸಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ನೂರಾರು ಕನಸುಗಳಿಗೆ 3 ಮತ್ತೊಂದು ಪ್ರಶ್ನೆ...ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ನೂರಾರು ಕನಸುಗಳಿಗೆ 3 ಮತ್ತೊಂದು ಪ್ರಶ್ನೆ...

ಈಗಿರುವ 50 ಶಿಕ್ಷಣ ಸಂಸ್ಥೆಗಳನ್ನು ಕೇವಲ 15 ಸಾವಿರಕ್ಕೆ ಇಳಿಲಾಗುವುದು. 3 ಸಾವಿರಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಸಂಸ್ಥೆಗಳನ್ನು ಮುಚ್ಚಲಾಗುವುದು ಇಲ್ಲವೇ ಇತರೆ ಕಾಲೇಜುಗಳ ಜೊತೆ ವಿಲೀನಗೊಳಿಸಲಾಗುವುದು. ಇದು ಪ್ರಾಂತೀಯ ಅಸಮಾನತೆಗೆ ದೊಡ್ಡ ದಾರಿ ಮಾಡಿಕೊಟ್ಟಂತೆ ಎಂದು ಸಿಪಿಐ ಪ್ರಕಟಣೆಯಲ್ಲಿ ಹೇಳಿದೆ.

English summary
The CPI on Thursday alleged that the new education policy launched by the government strayed away from the concept of universalisation of education and focused on creating "education markets".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X