ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿ ರಿಯೋ ಪ್ರಮಾಣವಚನ

|
Google Oneindia Kannada News

ಕೋಹಿಮಾ, ಮಾರ್ಚ್ 08: ನ್ಯಾಶ್ನಲ್ ಡೆಮಾಕ್ರೆಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್ ಡಿಪಿಪಿ) ಮುಖಂಡ ನೈಫಿಯು ರಿಯೂ ಅವರು ನಾಗಾಲ್ಯಾಂಡಿನ ನೂತನ ಮುಖ್ಯಮಂತ್ರಿಯಾಗಿ ಇಂದು(ಮಾ.8) ಪ್ರಮಾಣವಚನ ಸ್ವೀಕರಿಸಿದರು.

ಅವರೊಂದಿಗೆ 11 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಮುಖ್ಯಮಂತ್ರಿ ರಿಯೋ ಮತ್ತು ಇತರ ಸಚಿವರಿಗೆ ಪ್ರಮಾಣವಚನ ಬೊಧಿಸಿದರು. ರಾಜಭವನದ ಬದಲಾಗಿ ಸಾರ್ವಜನಿಕವಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ನಾಗಾಲ್ಯಾಂಡ್ ಮುಖಂಡ ಎಂಬ ಹೆಗ್ಗಳಿಕೆಗೆ ರಿಯೋ ಪಾತ್ರರಾದರು.

ಈಶಾನ್ಯ ರಾಜ್ಯಗಳ ಗೆಲುವಿಗೆ 'ವಾಸ್ತು' ಟಚ್ ನೀಡಿದ ಪ್ರಧಾನಿ ಮೋದಿಈಶಾನ್ಯ ರಾಜ್ಯಗಳ ಗೆಲುವಿಗೆ 'ವಾಸ್ತು' ಟಚ್ ನೀಡಿದ ಪ್ರಧಾನಿ ಮೋದಿ

ನಾಗಾಲ್ಯಾಂಡ್ ನಲ್ಲಿ ಫೆ.27 ರಂದು ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಮಾರ್ಚ್ 03 ರಂದು ಹೊರಬಿದ್ದಿತ್ತು. ಚುನಾವಣೆಯಲ್ಲಿ ಎನ್ ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟ ಓಟ್ಟು 32 ಸ್ಥಾನಗಳನ್ನು ಪಡೆದು ಬಹುಮತ ಗಳಿಸಿತ್ತು.

Neiphiu Rio takes oath as chief minister of Nagaland

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂತಾದ ಗಣ್ಯರು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.

ನಾಗಾಲ್ಯಾಂಡ್ : ಎನ್ ಡಿಪಿಪಿ-ಬಿಜೆಪಿ ಸಿಎಂ ಅಭ್ಯರ್ಥಿ ನೈಫಿಯು ರಿಯೋನಾಗಾಲ್ಯಾಂಡ್ : ಎನ್ ಡಿಪಿಪಿ-ಬಿಜೆಪಿ ಸಿಎಂ ಅಭ್ಯರ್ಥಿ ನೈಫಿಯು ರಿಯೋ

English summary
Nationalist Democratic Progressive Party(NDPP) leader Neiphiu Rio took over as Chief Minister of Nagaland. Governor P B Acharya administered the oath of office and secrecy to Rio and his 11 Council of Ministers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X