• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದನದ ಮಾಂಸ ತಿನ್ನುತ್ತಿದ್ದ ನೆಹರು 'ಪಂಡಿತ'ರಲ್ಲ: ಬಿಜೆಪಿ ಶಾಸಕ

By Manjunatha
|
   ದನದ ಮಾಂಸ ತಿನ್ನುತ್ತಿದ್ದ ನೆಹರು 'ಪಂಡಿತ'ರಲ್ಲವಂದು ಹೇಳಿದ ಬಿಜೆಪಿ ಶಾಸಕ | Oneindia Kannada

   ನವದೆಹಲಿ, ಆಗಸ್ಟ್ 11: ದನದ ಮಾಂಸ, ಹಂದಿ ಮಾಂಸ ತಿನ್ನುತ್ತಿದ್ದ ಮಾಂಸಾಹಾರಿ ಜವಾಹರಲಾಲ್ ನೆಹರು, 'ಪಂಡಿತ'ರಾಗಿರಲಿಲ್ಲ ಎಂದು ಬಿಜೆಪಿ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

   ಮಾಂಸಾಹಾರ ಸೇವಿಸುತ್ತಿದ್ದ ಅವರು ಪಂಡಿತರಾಗಿರಲು ಸಾಧ್ಯವಿಲ್ಲ ಬ್ರಾಹ್ಮಣರ ಓಲೈಕೆಗಾಗಿ ಅವರನ್ನು ಪಂಡಿತ ಎಂದು ಕರೆಯಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

   ರಾಜಸ್ಥಾನದ ಅಲ್ವಾರ್‌ ಕ್ಷೇತ್ರದ ಬಿಜೆಪಿ ಶಾಸಕ ಜ್ಞಾನ ದೇವ್ ಅಹುಜಾ ಈ ಹೇಳಿಕೆ ನೀಡಿದ್ದು, ಈ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

   ಈ ಮುಂಚೆಯೂ ಈ ಶಾಸಕ ಈ ರೀತಿಯ ಹೇಳಿಕೆಗಳನ್ನು ನೀಡಿದ್ದರು. ತಮ್ಮ ಕ್ಷೇತ್ರದಲ್ಲಿ ಸಮೂಹ ಮಾಡುವ ಹತ್ಯೆ ಹಾಗೂ ಹಲ್ಲೆಗಳು ಹೆಚ್ಚಾಗಿರುವ ಬಗ್ಗೆ ಕೇಳಿದ್ದಾಗ, ಹಸುವನ್ನು ಕೊಲ್ಲುವುದು ಭಯೋತ್ಪಾದನೆಗಿಂತಲೂ ದೊಡ್ಡ ಅಪರಾಧ ಹಾಗಾಗಿ ಅಂತಹಾ ಅಪರಾಧ ಮಾಡುವವರಿಗೆ ಜನ ಶಿಕ್ಷೆ ನೀಡುತ್ತಿದ್ದಾರೆ ಎಂದಿದ್ದರು.

   ನೆಹರೂ ಸ್ವಂತ ಲಾಭಕ್ಕಾಗಿ ದೇಶ ಇಬ್ಭಾಗವಾಯ್ತೆಂದ ದಲೈಲಾಮ

   ಜವಹಾರ್‌ಲಾಲ್ ನೆಹರು ಬಗ್ಗೆ ಸಹ ಬಿಜೆಪಿಯ ಶಾಸಕರು ವಿವಾದಾತ್ಮಕವಾಗಿ ಮಾತನಾಡುವುದು ಇದು ಮೊದಲೇನಲ್ಲ ಈ ಮುಂಚೆಯೂ ಹಲವು ಶಾಸಕರು ನೆಹರು ಅವರ ವೈಯಕ್ತಿಕ ತೇಜೋವಧೆ ಮಾಡಿದ್ದಾರೆ.

   English summary
   BJP MLA Gyan Dev Ahuja says, "Nehru was not a Pandit. One who ate beef and pork, cannot be a Pandit".
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X