ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಹರು ಜನ್ಮದಿನ, ಮಗುತನದ ಮುಗ್ಧತೆ ಉಳಿಸುವ ಮಕ್ಕಳದಿನ

|
Google Oneindia Kannada News

"ಪ್ರತಿ ಮನುಷ್ಯನೂ ತನ್ನೊಳಗಿರುವ ಮಗುತನದ ಮುಗ್ಧತೆಯನ್ನು ಕಾಪಿಟ್ಟುಕೊಳ್ಳುವುದು, ಬದುಕಿನಲ್ಲಿ ಸದಾ ಚೈತನ್ಯದಿಂದ ಉಳಿಯುವುದಕ್ಕಿರುವ ದಾರಿ" ಎಂಬುದು ಮಹಾತ್ಮರೊಬ್ಬರ ಮಾತು. ಇಂದು(ನ.14) ಮಕ್ಕಳ ದಿನಾಚರಣೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು(14.11.1889-27.05.1964) ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತೇವೆ.

ನೆಹರೂ -ಎಡ್ವಿನಾ ನಡುವೆ ಪ್ರೀತಿಗೆ ಪಮೇಲಾ ಸಾಕ್ಷಿನೆಹರೂ -ಎಡ್ವಿನಾ ನಡುವೆ ಪ್ರೀತಿಗೆ ಪಮೇಲಾ ಸಾಕ್ಷಿ

ಮೋತಿಲಾಲ್ ನೆಹರು ಮತ್ತು ಸ್ವರೂಪ ರಾಣಿ ಅವರ ಪುತ್ರರಾಗಿ ಅಲಹಾಬಾದ್ ನಲ್ಲಿ ಜನಿಸಿದ ಜವಾಹರಲಾಲ್ ನೆಹರು ಎರಡು ಅವಧಿಗೆ ಭಾರತೀಯ ಪ್ರಧಾನಿಯಾಗಿ ಕಾರ್ಯನಿರ್ಹಿಸಿದರು. ಮಹಾತ್ಮಾ ಗಾಂಧೀಜಿಯವರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡಿದ್ದ ನೆಹರು, ಗಾಂಧಿಯವರ ಅಹಿಂಸಾ ಹೋರಾಟವನ್ನು ಬೆಂಬಲಿಸಿದವರು. ಮಕ್ಕಳನ್ನು ಬಹುವಾಗಿ ಇಷ್ಟಪಡುತ್ತಿದ್ದ ನೆಹರು ಅವರೇ ತಮ್ಮ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವಂತೆ ಹೇಳಿದ್ದರು.

ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ?ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ?

ಇಂದು ಅವರ 128 ನೇ ಜನ್ಮದಿನದ ನಿಮಿತ್ತ ಟ್ವಿಟ್ಟರ್ ನಲ್ಲಿ #ChildrensDay ಟ್ರೆಂಡಿಂಗ್ ಆಗಿದೆ. ಹಲವರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದರೆ, ಮತ್ತೆ ಕೆಲವರು ದೇಶದ ಭವಿಷ್ಯವೇ ಆದ ಮಕ್ಕಳಿಗೆ ತುಂಬು ಹೃದಯದಿಂದ ಮಕ್ಕಳ ದಿನಾಚರಣೆಯ ಶುಭಕೋರಿದ್ದಾರೆ.

ಪ್ರತಿ ಮಗುವೂ ಕನಸುಕಾಣಬೇಕು

ಒಬ್ಬ ಮಗು ಕನಸುಕಂಡರೆ ಅದರಿಂದಾಗಿ ಇಡೀ ರಾಜ್ಯವೂ ಪ್ರಗತಿ ಕಾಣುತ್ತದೆ. ಕರ್ನಾಟಕದಲ್ಲಿರುವ ಪ್ರತಿ ಮಗುವೂ ಕನಸುಕಾಣಬೇಕು ಎಂಬುದು ನನ್ನ ಕನಸು. ಮತ್ತು ಆ ಕನಸನ್ನು ನನಸುಗೊಳಿಸಲು ನಾವು ಸಾಕಷ್ಟು ಪ್ರೋತ್ಸಾಹ ನೀಡುತ್ತೇವೆ, ಆ ಕನಸುಗಳಿಗೆ ನೀರೆರೆದು ಪೋಷಿಸುತ್ತೇವೆ. ಮಕ್ಕಳು ಕನಸುಕಂಡರೆ ಇಳಿವಯಸ್ಸಿನ ವ್ಯಕ್ತಿಗೂ ಹೊಸಭವಿಷ್ಯ ಗೋಚರಿಸುತ್ತದೆ. ಮಕ್ಕಳದಿನದ ಶುಭಾಶಯಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Array

ನನ್ನುಸಿರು ಬಸಿದು ಕನಸು ನನಸು ಮಾಡಬೇಕು!

ನನಗೂ ಒಂದು ಕನಸಿದೆ. ಈ ನಾಡಿನ ಪ್ರತಿಯೊಂದು ಮಗುವಿನ ಕಣ್ಣಲ್ಲೂ ನೂರಾರು ಕನಸಿರಬೇಕೆಂದು; ಆ ಕನಸುಗಳ ನನಸು ಮಾಡಲು ನನ್ನ ಉಸಿರು ಬಸಿಯಬೇಕೆಂದು ಎಂದು ಸಹ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ನಿಮ್ಮೊಳಗಿನ ಮಗುವನ್ನು ಸಾಯಿಸಬೇಡಿ!

ನಿಮ್ಮ ಒಳಗಿರುವ ಮಗುತನವನ್ನು ಎಂದಿಗೂ ಸಾಯುವುದಕ್ಕಾಗಲಿ, ಖಿನ್ನವಾಗುವುದಕ್ಕಾಗಲಿ ಬಿಡಬೇಡಿ. ಮಗುವಾಗಿರುವುದು ಒಂದು ಮೋಜು. ಅದರಿಂದ ಸದಾ ಸಂತಸದಿಂದಿರುವುದಕ್ಕೆ ಸಾಧ್ಯ. ಮಕ್ಕಳದಿನದ ಶುಭಾಶಯಗಳು ಎಂದು ವಿಶೇಷ ಖನ್ನಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಪ್ರತಿದಿನವೂ ಮಕ್ಕಳ ದಿನವಾಗಲಿ...

ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆಯಾದರೆ ಆಗ ಪ್ರತಿದಿನವೂ ಮಕ್ಕಳದಿನವೇ ಆಗುತ್ತದೆ ಎಂದು ಪ್ರಶಾಂತ್ ರಾಜನ್ ಎನ್ನುವವರು ಟೀಟ್ ಮಾಡಿದ್ದಾರೆ.

ಅಪರಿಮಿತ ಪ್ರೀತಿಯ ಪ್ರತೀಕ, ಮಗು

ಪ್ರತಿ ಮಗುವೂ ಮುಗ್ಧತೆ, ಕ್ಷಮಾಗುಣ, ಸ್ನೇಹ, ಕಾಳಜಿ, ಕ್ರಿಯಾಶೀಲತೆ ಮತ್ತು ಅಪರಿಮಿತ ಪ್ರೀತಿಯ ಪ್ರತೀಕ. ಮಕ್ಕಳ ದಿನದ ಶುಭಾಶಯಗಳು ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಖರ್ ಟ್ವೀಟ್ ಮಾಡಿದ್ದಾರೆ.

English summary
Every year, 14th november is celebrating as the national children's day. This is the birthday of Independent India's first prime minister Jawaharlal Nehru. Childrens day is trending in twitter today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X