ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತಾಜಿ ಜನ್ಮದಿನಕ್ಕೆ ತಲೆಬಾಗಿದ ಸಾಮಾಜಿಕ ಜಾಲತಾಣ

|
Google Oneindia Kannada News

ಬೆಂಗಳೂರು, ಜ. 23: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 118 ನೇ ಜನ್ಮದಿನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಗೌರವದ ಮಾಹಾಪೂರವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ನಮನ ಸಲ್ಲಿಸಿದ್ದಾರೆ.

ಬ್ರಿಟಿಷರ ವಿರುದ್ಧ ಸೇನೆ ಕಟ್ಟಿ ಹೋರಾಡಲು ಮುಂದಾಗಿದ್ದ ಸೇನಾನಿ ಆದರೆ 1945 ರ ಆಗಸ್ಟ್ 18 ರಂದು ಅವರು ನಿಗೂಢವಾಗಿ ಕಣ್ಮರೆಯಾಗಿದ್ದರು. ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅವರು ನಿಧನ ಹೊಂದಿದರು ಎಂದು ಹೇಳಲಾಗುತ್ತಿದ್ದರೂ ಎದ್ದಿರುವ ಗೊಂದಲಗಳಿಗೆ ತೆರೆ ಬಿದ್ದಿಲ್ಲ.[ಸಾಮಾಜಿಕ ಜಾಲತಾಣದಲ್ಲಿ ಮೂಡಿದ 'ವಿವೇಕ ಪ್ರಭೆ']

india

ನೇತಾಜಿಯವರ ಹಳೆಯ ಫೋಟೋಗಳು, ಅವರ ಸಾವಿನ ಸುದ್ದಿಯ ವರದಿ ಇರುವ ದಿನಪತ್ರಿಕೆಯ ಪುಟ, ವೀರ ಸಾವರ್ಕರ್ ಜತೆಗಿರುವ ಚಿತ್ರ ಮುಂತಾದವುಗಳು
ಸೇನಾನಿ ಹೋರಾಟವನ್ನು ನೆನಪು ಮಾಡಿಕೊಟ್ಟಿವೆ.

ಸುಭಾಷ್ ಚಂದ್ರ ಬೋಸ್ ಅವರ ಧೈರ್ಯ, ಚಿಂತನಾ ಶಕ್ತಿ, ಆಲೋಚನೆಗಳು ನಮಗೆ ಎಂದೆಂದಿಗೂ ಮಾದರಿ, ಅವರು ಹುಟ್ಟಿದ ನಾಡಲ್ಲಿ ನಾನು ಜನ್ಮ ತಳೆದಿರುವುದು ಹೆಮ್ಮೆ ತಂದಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ನೇತಾಜಿ ಕಣ್ಮರೆ ನೆಹರು ಮಾಡಿದ ಪಾಪ, ಬೋಸ್ ಜನ ಮರೆತ ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಎಂಬಿತ್ಯಾದಿ ಟ್ವೀಟ್ ಗಳನ್ನು ಸಹ ಕಾಣಬಹುದಾಗಿದೆ.

English summary
Indians took to social media to pay tribute to one of the greatest freedom fighters of the country - Subhas Chandra Bose - on his 118th birth anniversary, on 23 January. Even, Prime Minister Narendra Modi tweeted about his bravery, courage and patriotic zeal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X