ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಒಡಿಶಾದ ಟಾಪರ್‌ಗೆ 720 ಅಂಕ

|
Google Oneindia Kannada News

ನವದೆಹಲಿ, ಅಕ್ಟೋಬರ್ 16: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ನೀಟ್ ಪರೀಕ್ಷೆಗಳ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ಒಡಿಶಾದ ಶೋಯೆಬ್ ಅಫ್ತಾಬ್ ನೀಟ್ ಪರೀಕ್ಷೆಗಳಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಇದೇ ಮೊದಲ ಬಾರಿಗೆ ಎಲ್ಲ 720 ಅಂಕಗಳಿಗೆ 720ಕ್ಕೂ ಸರಿ ಉತ್ತರ ನೀಡುವ ಮೂಲಕ ಈ ಸಾಧನೆ ಮಾಡಿದ ಮೊದಲ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರೂರ್ಕೆಲಾದ 18 ವರ್ಷದ ಶೋಯೆಬ್ ಅಫ್ತಾಬ್, ನೀಟ್ 2020ರಲ್ಲಿ ಆಲ್ ಇಂಡಿಯಾ ಮೊದಲ ಶ್ರೇಯಾಂಕ (Rank) ಪಡೆದುಕೊಂಡಿದ್ದಾರೆ. ದೆಹಲಿಯ ಏಮ್ಸ್‌ನಲ್ಲಿ ಪ್ರವೇಶ ಪಡೆದುಕೊಳ್ಳುವ ಗುರಿ ಹೊಂದಿರುವ ಅವರು, ಕೋಟಾ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ದೆಹಲಿಯ ಆಕಾಂಕ್ಷಾ ಸಿಂಗ್ ಕೂಡ 720ಕ್ಕೆ 720 ಅಂಕಗಳನ್ನೂ ಪಡೆದು ಸಾಧನೆ ಮಾಡಿದ್ದಾರೆ. ಟೈ ಬ್ರೇಕರ್ ಪದ್ಧತಿಯ ಆಧಾರದಲ್ಲಿ ಶೋಯೆಬ್ ಅಫ್ತಾಬ್ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.

ನೀಟ್ ಪರೀಕ್ಷೆ ಫಲಿತಾಂಶ: ಶೇಕಡಾವಾರು, ಶ್ರೇಯಾಂಕ ಮತ್ತು ಅಂಕದ ಲೆಕ್ಕಾಚಾರ ಹೇಗೆ?ನೀಟ್ ಪರೀಕ್ಷೆ ಫಲಿತಾಂಶ: ಶೇಕಡಾವಾರು, ಶ್ರೇಯಾಂಕ ಮತ್ತು ಅಂಕದ ಲೆಕ್ಕಾಚಾರ ಹೇಗೆ?

'ನನ್ನ ಕುಟುಂಬದಲ್ಲಿ ಯಾರೂ ವೈದ್ಯರಿಲ್ಲ. ಹೀಗಾಗಿ ಈ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ. ಟಾಪ್ 100 ಅಥವಾ 50ರ ಒಳಗೆ ಸ್ಥಾನ ಪಡೆಯುವ ಭರವಸೆ ಇತ್ತೇ ವಿನಾ 720/720ರ ನಿರೀಕ್ಷೆ ಇರಲಿಲ್ಲ. ಪರೀಕ್ಷೆ ಮುಂದೂಡಲಾಗಿದ್ದರಿಂದ ಬಹಳ ಒತ್ತಡ ಇತ್ತು. ಆದರೆ ಆದಷ್ಟು ಸಂಯಮದಿಂದ ಇದ್ದು, ಸಮಯವನ್ನು ಬಳಸಿಕೊಳ್ಳುವುದು ನನ್ನ ಗುರಿಯಾಗಿತ್ತು' ಎಂದು ಅಫ್ತಾಬ್ ಹೇಳಿದ್ದಾರೆ.

 NEET Result 2020 Declared: Shoyeb Aftab The Topper With 720/720 Marks

ಗರಿಷ್ಠ ಅಂಕ ಪಡೆದ ಐವರಲ್ಲಿ ಮೂವರು ವಿದ್ಯಾರ್ಥಿನಿಯರಾಗಿದ್ದಾರೆ. ತುಮ್ಮಲಾ ಸ್ನಿಕಿತಾ 715, ವಿನೀತ್ ಶರ್ಮಾ 715 ಮತ್ತು ಅಮ್ರಿಶಾ ಖೈತಾನ್ 715 ಅಂಕಗಳನ್ನು ಪಡೆದಿದ್ದಾರೆ.

ಪರೀಕ್ಷೆಗೆ ಒಟ್ಟು 6,18,075 ಪುರುಷ ಅಭ್ಯರ್ಥಿಗಳು ಹಾಜರಾಗಿದ್ದು, ಅವರಲ್ಲಿ 3,43,556 ಮಂದಿ ಅರ್ಹತೆ ಪಡೆದುಕೊಂಡಿದ್ದಾರೆ. 7,48,866 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, 4,27,943 ಮಂದಿ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಒಬ್ಬ ತೃತೀಯ ಲಿಂಗಿ ಅಭ್ಯರ್ಥಿ ಸೇರಿದಂತೆ ಪರೀಕ್ಷೆಗೆ ಹಾಜರಾದ 13,66,945 ಮಂದಿಯಲ್ಲಿ ಒಟ್ಟು 7,71,500 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಅಂದರೆ ಶೇ 56.44ರಷ್ಟು ಮಂದಿ ಅರ್ಹರಾಗಿದ್ದಾರೆ.

ಸಿಎಂ, ವೈದ್ಯಕೀಯ ಸಚಿವರ ನೆರವಿನಿಂದ 'ನೀಟ್' ಆಯ್ತು ಪರೀಕ್ಷೆಸಿಎಂ, ವೈದ್ಯಕೀಯ ಸಚಿವರ ನೆರವಿನಿಂದ 'ನೀಟ್' ಆಯ್ತು ಪರೀಕ್ಷೆ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪರೀಕ್ಷೆಯ ಹಾಜರಾತಿಯು ಶೇ 92.85ರಿಂದ ಶೇ 85.57ಕ್ಕೆ ಕುಸಿತವಾಗಿತ್ತು. ಮೊದಲ ಹಂತದಲ್ಲಿ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದೆ, ಮುಖ್ಯಮಂತ್ರಿ ಹಾಗೂ ಸಚಿವರ ಸಹಾಯದಿಂದ ಎರಡನೆಯ ಹಂತದಲ್ಲಿ ಪರೀಕ್ಷೆ ಬರೆದಿದ್ದ ರಾಜ್ಯದ ತನುಜಾ 720ಕ್ಕೆ 586 ಅಂಕಗಳನ್ನು ಪಡೆದಿದ್ದಾರೆ.

English summary
NEET result 2020 declared: Odisha's Shoyeb Aftab and Delhi's Akanksha Singh scores 720/720.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X