ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪಿಜಿ ಕೌನ್ಸೆಲಿಂಗ್‌ ತಡೆಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 25: ನೀಟ್ ಪಿಜಿ ಕೌನ್ಸೆಲಿಂಗ್‌ಗೆ ತಡೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಒಬಿಸಿ, ಇಡಬ್ಲ್ಯೂಸಿ ಮೀಸಲು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಮುಗಿಯುವವರೆಗೂ ನೀಟ್ ಸ್ನಾತಕೋತ್ತರ ಕೋರ್ಸ್‌ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ತಡೆಹಿಡಿಯಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

 NEET-UG 2021: ಪರೀಕ್ಷೆ ಮುಂದೂಡಲು ಸುಪ್ರೀಂಕೋರ್ಟ್ ನಕಾರ NEET-UG 2021: ಪರೀಕ್ಷೆ ಮುಂದೂಡಲು ಸುಪ್ರೀಂಕೋರ್ಟ್ ನಕಾರ

ಇಡಬ್ಲ್ಯೂಎಸ್ ಕೋಟಾ ಸೀಟು ಪಡೆಯಲು ಕೇಂದ್ರ ಸರ್ಕಾರದಿಂದ ಆದಾಯ ಮಿತಿ ನಿಗದಿ ಮಾಡಲಾಗಿದ್ದು, ವಾರ್ಷಿಕ 8 ಲಕ್ಷ ರೂ. ಆದಾಯ ಮಿತಿ ನಿಗದಿಯಾಗಿದೆ. ಈ 8 ಲಕ್ಷ ಆದಾಯ ಮಿತಿ ನಿಗದಿಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಎಂಡಿಎಸ್ ಕೋರ್ಸ್​ಗಳಿಗೆ ನಡೆಸಬೇಕಾಗಿದ್ದ ಕೌನ್ಸಿಲಿಂಗ್​ಗೆ ತಾತ್ಕಾಲಿಕ ತಡೆ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.

NEET PG Counselling 2021 On Hold Until SC Decides Validity Of OBC, EWS Reservations In AIQ

ನೀಟ್ ಪಿಜಿ ಫಲಿತಾಂಶವನ್ನು ಈ ಮೊದಲು ಸೆಪ್ಟೆಂಬರ್ 28ರಂದು ಘೋಷಿಸಲಾಯಿತು. ಅಕ್ಟೋಬರ್ 9ರಂದು ನೀಟ್ ಪರೀಕ್ಷೆಯ ಸ್ಕೋರ್ ಕಾರ್ಡ್ ಬಿಡುಗಡೆ ಮಾಡಲಾಗಿತ್ತು. ನೀಟ್ ಪರೀಕ್ಷೆಯನ್ನು ಈ ಬಾರಿ ಇಂಗ್ಲಿಷ್ ಸೇರಿದಂತೆ 10 ಇತರ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗಿದೆ. ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು ಭಾಷೆಯಲ್ಲಿ ಪರೀಕ್ಷೆ ನಡೆದಿದೆ.

ನೀಟ್ 2021 ಅರ್ಜಿ ನಮೂನೆಯಲ್ಲಿನ ಪ್ರಕ್ರಿಯೆಯು ಐದು ಹಂತಗಳನ್ನು ಒಳಗೊಂಡಿದೆ. ಅದರಲ್ಲಿ ಪ್ರಮುಖವಾಗಿ, ನೀಟ್ ನೋಂದಣಿ; ಅರ್ಜಿಯನ್ನು ಭರ್ತಿ ಮಾಡುವುದು; ಸ್ಕ್ಯಾನ್ ಮಾಡಿದ ಫೋಟೋ, ಮಾರ್ಕ್‌ಶೀಟ್‌ಗಳು ಮತ್ತು ಪ್ರಮಾಣಪತ್ರಗಳು ಸೇರಿದಂತೆ ದಾಖಲೆಗಳ ಅಪ್‌ಲೋಡ್ ಮಾಡುವುದು ; ಶುಲ್ಕ ಪಾವತಿ ಮತ್ತು ದೃಢೀಕರಣ ಪುಟದ ಪ್ರಿಂಟ್ ಔಟ್ ತೆಗೆದುಕೊಳ್ಳುವುದು ಇದರಲ್ಲಿ ಒಳಗೊಂಡಿರುತ್ತದೆ.

ಕೇಂದ್ರ ಸರ್ಕಾರವು ಎಂಡಿಎಸ್​ ಸೀಟ್​ಗೆ ಒಬಿಸಿಗೆ ಶೇ. 27ರಷ್ಟು ಮೀಸಲು, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ. 10ರಷ್ಟು ಮೀಸಲು ನೀಡುವುದಾಗಿ ಹೇಳಿತ್ತು.

ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು, ಆ ಅರ್ಜಿಗಳ ವಿಚಾರಣೆ ಇನ್ನೂ ಮುಕ್ತಾಯಗೊಂಡಿಲ್ಲ. ಹೀಗಾಗಿ, ಆಲ್ ಇಂಡಿಯಾ ಕೋಟಾದಡಿ ಒಬಿಸಿ ಹಾಗೂ ಇಡಬ್ಲುಸಿ ಮೀಸಲಾತಿ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಸಿಂಧುತ್ವದ ಬಗ್ಗೆ ನಿರ್ಧಾರವಾಗುವವರೆಗೂ ನೀಟ್-ಪಿಜಿ ಕೌನ್ಸೆಲಿಂಗ್ ನಡೆಸದಂತೆ ಸುಪ್ರೀಂ ಕೋರ್ಟ್​ ಆದೇಶಿಸಿದೆ.

English summary
Supreme Court has told the centre to put the counselling for NEET-PG on hold. It has been put on hold until the validity of the Centre's decision to introduce OBC and EWS reservation in All India Quota is decided.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X