ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 10 ದಿನದಲ್ಲೇ ನೀಟ್-ಪಿಜಿ 2022 ಫಲಿತಾಂಶ ಪ್ರಕಟ

|
Google Oneindia Kannada News

ನವದೆಹಲಿ, ಜೂನ್ 1: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಫಲಿತಾಂಶಗಳನ್ನು ಕೇವಲ 10 ದಿನಗಳಲ್ಲೇ ಪ್ರಕಟಿಸುವ ಮೂಲಕ ಹೊಸ ದಾಖಲೆಯನ್ನು ಬರೆಯಲಾಗಿದೆ. ಕಳೆದ 21ರಂದು ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಬುಧವಾರ ಪ್ರಕಟಿಸಲಾಗಿದೆ.

ಈ 10 ದಿನಗಳ ದಾಖಲೆ ಸಮಯದಲ್ಲೇ NEET PG 2022 ಫಲಿತಾಂಶಗಳ ಪ್ರಕಟಣೆ ಮಾಡಿರುವುದಕ್ಕೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ 'ಕೆಲಸಕ್ಕಾಗಿ ವೈದ್ಯಕೀಯ ವಿಜ್ಞಾನಗಳಲ್ಲಿನ ರಾಷ್ಟ್ರೀಯ ಪರೀಕ್ಷಾ ಮಂಡಳಿ (NBEMS) ಅನ್ನು ಶ್ಲಾಘಿಸಿದ್ದಾರೆ.

Breaking: ನೀಟ್ ಪರೀಕ್ಷೆ ಮುಂದೂಡಿಕೆ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ Breaking: ನೀಟ್ ಪರೀಕ್ಷೆ ಮುಂದೂಡಿಕೆ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

"NEET-PG ಫಲಿತಾಂಶ ಹೊರಬಿದ್ದಿದೆ! NEET-PG ಗೆ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

ನೀಟ್ ಪಿಜಿ ಫಲಿತಾಂಶ ಪರಿಶೀಲನೆ ಲಿಂಕ್ ಶೇರ್: "ನಿಯೋಜನೆಗಿಂತ ಹೆಚ್ಚು ಮುಂಚಿತವಾಗಿ, ದಾಖಲೆಯ 10 ದಿನಗಳಲ್ಲಿ ಫಲಿತಾಂಶಗಳನ್ನು ಘೋಷಿಸುವ ಅವರ ಶ್ಲಾಘನೀಯ ಕೆಲಸಕ್ಕಾಗಿ @NBEMS_INDIA ಅವರನ್ನು ನಾನು ಪ್ರಶಂಸಿಸುತ್ತೇನೆ" ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ. ಅದೇ ರೀತಿ ಮಾಂಡವಿಯಾ, NEET PG 2022 ಅಭ್ಯರ್ಥಿಗಳಿಗೆ ಫಲಿತಾಂಶವನ್ನು ಪರಿಶೀಲಿಸಲು https://natboard.edu.in ನಲ್ಲಿ ಲಿಂಕ್ ಅನ್ನು ಶೇರ್ ಮಾಡಿದ್ದಾರೆ.

NEET PG 2022 Result declared in record 10 days; Health Minister Mansukh Mandaviya

849 ಕೇಂದ್ರಗಳಲ್ಲಿ ನಡೆದ ನೀಟ್ ಪರೀಕ್ಷೆ: ಭಾರತದಲ್ಲಿ ಈ ಬಾರಿ NEET PG 2022 ಪರೀಕ್ಷೆಯನ್ನು 267 ನಗರಗಳ 849 ಕೇಂದ್ರಗಳಲ್ಲಿ ನಡೆಸಲಾಯಿತು. ಈ ಬಾರಿ 2,06,301 ಅಭ್ಯರ್ಥಿಗಳಲ್ಲಿ 1,82,318 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ನೀಟ್ ಪರೀಕ್ಷೆಯನ್ನು ಮುಂದೂಡುವಂತೆ ಕೂಗು ಕೇಳಿ ಬಂದಿತ್ತು. ಅದಾಗ್ಯೂ, ಮೂಲ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲಾಯಿತು. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಹ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಪತ್ರ ಬರೆದು NEET PG 2022 ಪರೀಕ್ಷೆಯ ದಿನಾಂಕಗಳನ್ನು ಮರುಪರಿಶೀಲಿಸುವಂತೆ ವಿನಂತಿಸಿತ್ತು.

NEET PG 2022 ಪರೀಕ್ಷೆ ಮುಂದೂಡುವಂತೆ ಕರೆ ನೀಡುವವರು ಪರೀಕ್ಷೆ ದಿನಾಂಕವನ್ನು ಕೌನ್ಸೆಲಿಂಗ್‌ನೊಂದಿಗೆ ವರ್ಗೀಕರಿಸಲಾಗುತ್ತಿದೆ ಎಂದು ವಾದಿಸಿದರು, ಇದರಿಂದಾಗಿ ಅಭ್ಯರ್ಥಿಗಳಿಗೆ ತಯಾರಿ ನಡೆಸಲು ಸಾಕಷ್ಟು ಸಮಯವಿರಲಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದ್ದು, ಇದನ್ನು ಸುಪ್ರೀಂ ಕೋರ್ಟ್ ಮೇ 13 ರಂದು ತಿರಸ್ಕರಿಸಿತು.

ನೀಟ್ ಪರೀಕ್ಷೆ ಮುಂದೂಡಿಕೆ ಅರ್ಜಿಗೆ ಕೋರ್ಟ್ ಹೇಳಿದ್ದೇನು?: ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನೀಟ್ ಪರೀಕ್ಷೆ ಮುಂದೂಡಿಕೆಯಿಂದ ಸಾವಿರಾರು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಕೋರ್ಟ್ ಹೇಳಿದೆ. ಸ್ನಾತಕೋತ್ತರ ಪದವಿಗಾಗಿ 2022ನೇ ಸಾಲಿನಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET PG) ಪರೀಕ್ಷೆಗೆ ನೋಂದಾಯಿಸಿದ ಸಾವಿರಾರು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿತ್ತು.

English summary
NEET PG 2022 Result declared in 10 days says Union Health Minister Mansukh Mandaviya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X