ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆ ಇಲ್ಲ, ಬೇಡಿಕೆ ಏನು?

|
Google Oneindia Kannada News

ನವದೆಹಲಿ, ಮೇ 4: ಈ ವರ್ಷದ ಸ್ನಾತಕೋತ್ತರ ನೀಟ್ (NEET PG) ಪರೀಕ್ಷೆ ಮುಂದೂಡಬೇಕೆಂದು ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರ ಸಮೂಹ ಮಾಡುತ್ತಿರುವ ಮನವಿಗೆ ಸರಕಾರ ಸ್ಪಂದಿಸುವ ಸಾಧ್ಯತೆ ಇಲ್ಲ. ಪರೀಕ್ಷೆ ನಿಗದಿಯಂತೆ ಮೇ 21ಕ್ಕೆ ನಡೆಯಲಿದೆ ಎಂದು ಆರೋಗ್ಯ ಇಲಾಖೆಯಲ್ಲಿನ ಮೂಲಗಳು ಹೇಳಿರುವುದಾಗಿ ಡಿಎನ್‌ಎ ವರದಿ ಮಾಡಿದೆ.

ನೀಟ್ ಪಿಜಿ ಎಂದರೆ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಾಗಿದೆ (NEET- National Eligibility and Entrance Test). 2022ರ ನೀಟ್ ಪಿಜಿ ಪರೀಕ್ಷೆಯನ್ನ ತಡವಾಗಿ ನಡೆಸಬೇಕೆಂಬುದು ವೈದ್ಯರ ಒಕ್ಕೂಟ ಹಾಗೂ ಪರೀಕ್ಷಾರ್ಥಿಗಳ ಒತ್ತಾಯವಾಗಿದೆ.

NEET 2022 : ನೀಟ್ ನೋಂದಣಿ ಪ್ರಕ್ರಿಯೆ ಮುನ್ನ ಈ ಮಾಹಿತಿ ಗೊತ್ತಿರಲಿ!NEET 2022 : ನೀಟ್ ನೋಂದಣಿ ಪ್ರಕ್ರಿಯೆ ಮುನ್ನ ಈ ಮಾಹಿತಿ ಗೊತ್ತಿರಲಿ!

ಆದರೆ, ಕಳೆದ ವಾರ ಅಂದರೆ ಏಪ್ರಿಲ್ 30ರಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಅದರೆ ಪರೀಕ್ಷೆಯನ್ನು ಮುಂದೂಡದೇ ನಿಗದಿಯಂತೆ ಮೇ 21ರಂದೇ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿ ಬರಬೇಕು.

NEET PG 2022: latest updates on exam postponement, students demand

ಪರೀಕ್ಷೆ ಮುಂದೂಡುವ ಬೇಡಿಕೆ ಯಾಕೆ?; ಹಿಂದಿನ ವರ್ಷದ (2021) ನೀಟ್ ಪಿಜಿ ಪರೀಕ್ಷೆ ಮತ್ತು ಕೌನ್ಸಲಿಂಗ್ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿ ನಡೆದಿತ್ತು. ಇದರಿಂದಾಗಿ ಈ ವರ್ಷದ ಪರೀಕ್ಷೆಗೆ ಸಿದ್ಧಗೊಳ್ಳಲು ಸಾಕಷ್ಟು ಸಮಯಾವಕಾಶ ಸಿಗಲಿಲ್ಲ ಎಂಬುದು ನೀಟ್ ಪಿಜಿ ಪರೀಕ್ಷಾರ್ಥಿಗಳ ಅಳಲು. ಅಖಿಲ ಭಾರತ ವೈದ್ಯಕೀಯ ಸಂಸ್ಥೆಗಳ ಒಕ್ಕೂಟ (ಎಫ್‌ಎಐಎಂಎ) ಕೂಡ ವಿದ್ಯಾರ್ಥಿಗಳ ಕೂಗಿಗೆ ಧ್ವನಿಗೂಡಿಸಿದೆ.

ತಮಿಳುನಾಡು; ನೀಟ್ ವಿರೋಧಿ ಮಸೂದೆ ರಾಷ್ಟ್ರಪತಿಗೆ ರವಾನೆತಮಿಳುನಾಡು; ನೀಟ್ ವಿರೋಧಿ ಮಸೂದೆ ರಾಷ್ಟ್ರಪತಿಗೆ ರವಾನೆ

2021ರ ನೀಟ್ ಪಿಜಿ ಕೌನ್ಸಲಿಂಗ್ ಪ್ರಕ್ರಿಯೆ ಮೂಲತಃ 2021 ಅಕ್ಟೋಬರ್‌ನಲ್ಲಿ ಆರಂಭಗೊಳ್ಳಬೇಕಿತ್ತು. ವೈದ್ಯಕೀಯ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಒಬಿಸಿ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಹಾಕಲಾಗಿತ್ತು. ಇದರಿಂದಾಗಿ ಕೌನ್ಸಲಿಂಗ್ ಅನ್ನು ತಡೆಹಿಡಿಯಲಾಯಿತು. ಈ ವರ್ಷ ಜನವರಿಯಲ್ಲಿ ಕೌನ್ಸಲಿಂಗ್ ಮತ್ತೆ ಶುರುವಾಯಿತು. ಆದರೆ, ಸುಪ್ರೀಂಕೋರ್ಟ್ ಮಧ್ಯ ಪ್ರವೇಶದಿಂದ ನಿಂತಿತು. ಅದಾದ ಬಳಿಕ ವಿಶೇಷ ಸುತ್ತಿನ ಕೌನ್ಸಲಿಂಗ್ ನಡೆಸಲಾಯಿತು.

NEET PG 2022: latest updates on exam postponement, students demand

ಇವೆಲ್ಲಾ ಗೊಂದಲಗಳ ಮಧ್ಯೆ ಈ ವರ್ಷದ ನೀಟ್ ಪಿಜಿ ಪರೀಕ್ಷಾರ್ಥಿಗಳು ಪರೀಕ್ಷೆಗೆ ಸರಿಯಾಗಿ ಸಜ್ಜಾಗಲು ಸಾಧ್ಯವಾಗಿಲ್ಲ ಎಂದು ಧ್ವನಿ ಎತ್ತಿದ್ದಾರೆ.

English summary
Even as some doctors’ unions have asked for postponement of NEET PG 2022, the date is unlikely to be revised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X