ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದಲ್ಲಿ ಎರಡು ಬಾರಿ ನೀಟ್, ಜೀ ಪರೀಕ್ಷೆ: ಜಾವಡೇಕರ್

|
Google Oneindia Kannada News

ನವದೆಹಲಿ, ಜುಲೈ 7: ರಾಷ್ಟ್ರಮಟ್ಟದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪರೀಕ್ಷೆಗಳ ಜಂಟಿ ಪ್ರವೇಶ ಪರೀಕ್ಷೆ (ಜೀ) ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗಳನ್ನು (ನೀಟ್) ವರ್ಷದಲ್ಲಿ ಎರಡು ಬಾರಿ ನಡೆಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಮುಂದಿನ ವರ್ಷದಿಂದ ಈ ಪದ್ಧತಿ ಜಾರಿಗೆ ಬರಲಿದೆ ಎಂದು ಕೇಂದ್ರ ಮಾನವ ಅಭಿವೃದ್ಧಿ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಅರ್ಧದಷ್ಟು ತಗ್ಗಲಿದೆ ಎನ್‌ಸಿಇಆರ್‌ಟಿ ಸಿಲಬಸ್ ಹೊರೆಅರ್ಧದಷ್ಟು ತಗ್ಗಲಿದೆ ಎನ್‌ಸಿಇಆರ್‌ಟಿ ಸಿಲಬಸ್ ಹೊರೆ

ವಿಶ್ವವಿದ್ಯಾಲಯ ಅನುದಾನ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ ನೆಟ್), ಕಾಮನ್ ಮ್ಯಾನೇಜ್‌ಮೆಂಟ್ ಅಡ್ಮಿಷನ್ ಟೆಸ್ಟ್ (ಸಿಎಂಎಟಿ) ಪರೀಕ್ಷೆಗಳ ಜತೆಗೆ ಈ ಪರೀಕ್ಷೆಗಳನ್ನು ಕೂಡ ನಡೆಸುವ ಹೊಣೆಗಾರಿಕೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ವಹಿಸಲಾಗಿದೆ,

NEET, JEE to be conducted twice a year

ನೀಟ್, ಜೀ, ಯುಜಿಸಿ ನೆಟ್ ಮತ್ತು ಸಿಎಂಎಟಿ ಪರೀಕ್ಷೆಗಳನ್ನು ಇನ್ನು ಮುಂದೆ ಎನ್‌ಇಟಿ ಆಯೋಜಿಸಲಿದೆ. ಇವೆಲ್ಲವೂ ಕಂಪ್ಯೂಟರ್ ಆಧಾರಿತವಾಗಿರಲಿವೆ.

ಈ ಪರೀಕ್ಷೆಗಳು ಬೇರೆ ಬೇರೆ ದಿನಾಂಕಗಳಂದು ನಡೆಯಲಿವೆ. ನೀಟ್ ಮತ್ತು ಜೀ ಪರೀಕ್ಷೆಗಳಲ್ಲಿ ವರ್ಷದಲ್ಲಿ ಎರಡು ಬಾರಿ ನಡೆಯಲಿವೆ.

ಕೆಎಸ್‌ಒಯು ಮಾನ್ಯತೆ ಕೇಂದ್ರದ ಹೊಣೆಯಲ್ಲ, ಯುಜಿಸಿಯದ್ದು: ಜಾವಡೇಕರ್ಕೆಎಸ್‌ಒಯು ಮಾನ್ಯತೆ ಕೇಂದ್ರದ ಹೊಣೆಯಲ್ಲ, ಯುಜಿಸಿಯದ್ದು: ಜಾವಡೇಕರ್

ಜೀ ಪರೀಕ್ಷೆಯು ಜನವರಿ ಮತ್ತು ಏಪ್ರಿಲ್‌ನಲ್ಲಿ ನಡೆದರೆ, ನೀಟ್ ಪರೀಕ್ಷೆಯು ಫೆಬ್ರುವರಿ ಮತ್ತು ಮೇ ತಿಂಗಳಿನಲ್ಲಿ ನಡೆಯಲಿವೆ ಎಂದು ಜಾವಡೇಕರ್ ವಿವರಿಸಿದರು.

ಈ ಮುಂಚೆ ಜೀ ಮತ್ತು ನೀಟ್ ಪರೀಕ್ಷೆಗಳ ನಿರ್ವಹಣೆಯನ್ನು ಸಿಬಿಎಸ್‌ಇ ನಡೆಸುತ್ತಿತ್ತು.

ಪರೀಕ್ಷೆಯ ಸಿಲಬಸ್ ಮತ್ತು ಇತರೆ ಪ್ರಕ್ರಿಯೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ.

English summary
NEET and JEE examinations will be held twice a year from next year onwards, Union Minister Prakash Javadekar announced on saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X