ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿನಿಯ ಒಳ ಉಡುಪು ತೆಗೆಸಿದ್ದ ನಾಲ್ವರು ಶಿಕ್ಷಕಿಯರು ಅಮಾನತು

ಕೇರಳದ ಕಣ್ಣೂರಿನಲ್ಲಿ 'ನೀಟ್' (ಪರೀಕ್ಷೆ) ನಡೆಯುತ್ತಿದ್ದ ವೇಳೆ ವಿದ್ಯಾರ್ಥಿನಿ ಒಳ ಉಡುಪನ್ನು ಕಳಚುವಂತೆ ಹೇಳಿದ್ದ ಖಾಸಗಿ ಶಾಲೆಯ ನಾಲ್ವರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ

By ಅನುಷಾ ರವಿ
|
Google Oneindia Kannada News

ಕಣ್ಣೂರು (ಕೇರಳ), ಮೇ 9: ಕೇರಳದ ಕಣ್ಣೂರಿನಲ್ಲಿ 'ನೀಟ್' (ಪರೀಕ್ಷೆ) ವೇಳೆ ವಿದ್ಯಾರ್ಥಿನಿ ಒಳ ಉಡುಪು ತೆಗೆಯುವಂತೆ ಹೇಳಿದ್ದ ಖಾಸಗಿ ಶಾಲೆಯ ನಾಲ್ವರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ. ನೀಟ್ ಬರೆಯುವ ವೇಳೆ ಸೋಮವಾರ ತನಗೆ ಅವಮಾನ ಆಗುವಂತೆ ವರ್ತಿಸಿದರು ಎಂದು ವಿದ್ಯಾರ್ಥಿನಿ ದೂರು ನೀಡಿದ್ದರು.

ಆ ದೂರಿಗೆ ಸಂಬಂಧಪಟ್ಟ ಹಾಗೆ ಮಾನವ ಹಕ್ಕುಗಳ ಆಯೋಗ ಹಾಗೂ ಮಕ್ಕಳ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಿದ ಮೇಲೆ ಶಾಲೆ ಆಡಳಿತ ಮಂಡಳಿಯು ನಾಲ್ವರನ್ನು ಅಮಾನತು ಮಾಡಿದೆ. ಟಿಐಎಸ್ ಕೆ ಆಂಗ್ಲ ಮಾಧ್ಯಮ ಶಾಲೆಯ ಶೀಜಾ, ಶಫೀನಾ, ಬಿಂದು ಮತ್ತು ಶಾಹಿನಾ ಒಂದು ತಿಂಗಳ ಕಾಲ ಅಮಾನತಾಗಿದ್ದಾರೆ.[NEET ಶಾಕ್: ಯುವತಿಗೆ ಒಳಉಡುಪು ಕಳಚಲು ಹೇಳಿದ ಪರೀಕ್ಷಾಧಿಕಾರಿ]

NEET frisking horror: Four teachers suspended in Kannur

ಅಂಥ ಯಾವ ಘಟನೆಯೂ ನಡೆದಿಲ್ಲ ಎಂದು ಮೊದಲಿಗೆ ಶಾಲೆ ಆಡಳಿತ ಮಂಡಳಿಯು ಹೇಳಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಈ ಮಧ್ಯೆ ಕೇರಳದ ಮಕ್ಕಳ ಹಕ್ಕುಗಳ ಆಯೋಗವು ಸಿಬಿಎಸ್ ಇಗೆ ಘಟನೆ ಹಾಗೂ ನಿಯಮಗಳ ಬಗ್ಗೆ ಸಂಪೂರ್ಣ ವರದಿಯನ್ನು ಹತ್ತು ದಿನದೊಳಗೆ ನೀಡುವಂತೆ ಕೇಳಿದೆ.

ಇನ್ನು ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತ ಕ್ರಮಕ್ಕೆ ಮುಂದಾಗಿ, ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಒತ್ತಾಯಿಸಿದೆ. ಮೆಟಲ್ ಹುಕ್ ಇದೆ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯ ಒಳ ಉಡುಪನ್ನು ತೆಗೆಯುವಂತೆ ಸೂಚಿಸಲಾಗಿತ್ತು. ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದವರಿಗೆ ಒಂದೋ ಬಟನ್ ಬದಲಾಯಿಸಿ ಇಲ್ಲವೇ ಬಟ್ಟೆಯೇ ಬದಲಾಯಿಸಿ ಎಂದು ಹೇಳಲಾಗಿತ್ತು.[ಮುಗಿದ ನೀಟ್ ಪರೀಕ್ಷೆ, ಜೂನ್ 8ಕ್ಕೆ ಫಲಿತಾಂಶ]

ಉದ್ದ ತೋಳಿನ ಶರ್ಟ್ ಅಥವಾ ಟಾಪ್ ಧರಿಸಿದ್ದ ವಿದ್ಯಾರ್ಥಿನಿಯರಿಗೆ ಅದನ್ನು ಕತ್ತರಿಸುವಂತೆ ಸೂಚಿಸಿದ್ದರೆ, ಕೆಲವು ಕೇಂದ್ರಗಳಲ್ಲಿ ಚಪ್ಪಲಿಯಲ್ಲಿ ಲೋಹದ ಬಕಲ್ ಇದೆ ಎಂಬ ಕಾರಣಕ್ಕೆ ಕೇಂದ್ರದ ಒಳಗೆ ಪ್ರವೇಶ ನೀಡಿರಲಿಲ್ಲ.

English summary
Four teachers of a private school in Kannur have been suspended for asking a girl student to remove her innerware ahead of NEET in Kannur. The student alleged that she was subjected to humiliation on Monday when she had appeared for NEET.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X