ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ 2020: ಸಾಮಾನ್ಯ ವರ್ಗಗಳ ಕಟ್ ಆಫ್ ಅಂಕಗಳಲ್ಲಿ ಏರಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 17: ಈ ಬಾರಿಯ ನೀಟ್ ಪರೀಕ್ಷೆಗಳ ಕಟ್ ಆಫ್ ಅಂಕಗಳಲ್ಲಿ ಬದಲಾವಣೆ ಮಾಡಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳ ನೀಟ್ ಕಟ್ ಆಫ್ ಅಂಕಗಳನ್ನು 720-147ಕ್ಕೆ ಹೆಚ್ಚಿಸಲಾಗಿದೆ. 2019ರ ನೀಟ್‌ನಲ್ಲಿ ಇದು 701-134 ಇತ್ತು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ ನೀಟ್ 2020 ಕಟ್ ಆಫ್ ಅಂಕಗಳನ್ನು ಸಹ ಏರಿಸಲಾಗಿದೆ. 2019ರ ನೀಟ್‌ನಲ್ಲಿ 133-107 ಇದ್ದಿದ್ದ ಕಟ್ ಆಫ್, ಪ್ರಸಕ್ತ ವರ್ಷ 146-113ಕ್ಕೆ ಏರಿಕೆಯಾಗಿದೆ. ಪಿಡಬ್ಲ್ಯೂಡಿ ವರ್ಗದ ಕಟ್ ಆಫ್ ಸಹ ಹೆಚ್ಚಳವಾಗಿದೆ. ಮೀಸಲಾತಿ ರಹಿತ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 133-120 ರಿಂದ 146-129 ಕಟ್ ಆಫ್ ಅಂಕ ಏರಿಕೆಯಾಗಿದೆ.

ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಒಡಿಶಾದ ಟಾಪರ್‌ಗೆ 720 ಅಂಕನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಒಡಿಶಾದ ಟಾಪರ್‌ಗೆ 720 ಅಂಕ

ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಯಲ್ಲಿನ ಅಂಗವಿಕಲ ಅಭ್ಯರ್ಥಿಗಳಿಗೆ ನೀಟ್ 2020 ಕಟ್ ಆಫ್ 128-113ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಇದು 119-107 ಇತ್ತು.

NEET Cut-Off 2020 Increases For General Category

2020ರ ಸೆಪ್ಟೆಂಬರ್ 13 ಮತ್ತು ಅಕ್ಟೋಬರ್ 14ರಂದು ಎರಡು ಹಂತಗಳಲ್ಲಿ ಈ ಬಾರಿ ನೀಟ್ ಪರೀಕ್ಷೆಗಳನ್ನು ನಡೆಸಲಾಗಿತ್ತು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ನೀಟ್ ಕಟ್ ಆಫ್ ಅಂಕಗಳನ್ನು ಪ್ರಕಟಿಸಿದೆ.

ನೀಟ್ ಎಂಬಿಬಿಎಸ್/ಬಿಡಿಎಸ್ 2020 ಕಟ್ ಆಫ್ ಶೇಕಡಾವಾರು ಸಾಮಾನ್ಯ ವರ್ಗದವರಿಗೆ 50 ಇರಿಸಿದ್ದರೆ, ಸಾಮಾನ್ಯ ವರ್ಗದ ಅಂಗವಿಕಲರಿಗೆ 45 ನಿಗದಿಗೊಳಿಸಲಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಈ ವರ್ಗಗಳ ಅಂಕವಿಕಲ ಅಭ್ಯರ್ಥಿಗಳಿಗೆ ಕಟ್ ಆಫ್ ಶೇಕಡಾವಾರನ್ನು 40ಕ್ಕೆ ನಿಗದಿಗೊಳಿಸಲಾಗಿದೆ.

ನೀಟ್ ಪರೀಕ್ಷೆ ಫಲಿತಾಂಶ: ಶೇಕಡಾವಾರು, ಶ್ರೇಯಾಂಕ ಮತ್ತು ಅಂಕದ ಲೆಕ್ಕಾಚಾರ ಹೇಗೆ?ನೀಟ್ ಪರೀಕ್ಷೆ ಫಲಿತಾಂಶ: ಶೇಕಡಾವಾರು, ಶ್ರೇಯಾಂಕ ಮತ್ತು ಅಂಕದ ಲೆಕ್ಕಾಚಾರ ಹೇಗೆ?

ನೀಟ್ ಪರೀಕ್ಷೆಗಳ ಫಲಿತಾಂಶವನ್ನು ಎನ್‌ಟಿಎ ಶುಕ್ರವಾರ ಬಿಡುಗಡೆ ಮಾಡಿತ್ತು. ಶೇ 15ರಷ್ಟು ಅಖಿಲ ಭಾರತ ಸೀಟುಗಳ ಕೋಟಾಕ್ಕೆ ಆನ್‌ಲೈನ್ ಮಾದರಿಯಲ್ಲಿ ಕೌನ್ಸೆಲಿಂಗ್ ನಡೆಯಲಿದೆ. ನೀಟ್ 2020 ಕೌನ್ಸೆಲಿಂಗ್‌ನ ವಿಸ್ತೃತ ವೇಳಾಪಟ್ಟಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು.

English summary
NTA has increased NEET cut-off scores for unreserved and EWS from 701-134 to 720-147.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X