ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 1ರಂದು 11 ಭಾಷೆಗಳಲ್ಲಿ ನೀಟ್ ಪರೀಕ್ಷೆ: ವೇಳಾಪಟ್ಟಿ ಪ್ರಕಟಿಸಿದ ಎನ್‌ಟಿಎ

|
Google Oneindia Kannada News

ನವದೆಹಲಿ, ಮಾರ್ಚ್ 13: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) 2021ರ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಆಗಸ್ಟ್ 1ರಂದು ನೀಟ್ 2021 ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ. ಒಟ್ಟು 11 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ.

ಕಳೆದ ವರ್ಷದಂತೆಯೇ ಪೆನ್ ಮತ್ತು ಪತ್ರಿಕೆ ಬಳಸಿಯೇ ಆಫ್‌ಲೈನ್ ಮಾದರಿಯಲ್ಲಿ ಪರೀಕ್ಷೆ ನಡೆಸುವ ಪ್ರಸ್ತಾಪದಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. 'ನೀಟ್ (ಯುಜಿ)ಅನ್ನು ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ 11 ಭಾಷೆಗಳಲ್ಲಿ ಪೆನ್ ಮತ್ತು ಪತ್ರಿಕೆ ಸ್ವರೂಪದಲ್ಲಿ ನಡೆಸಲಾಗುವುದು' ಎಂದು ಎನ್‌ಟಿಎ ಹೇಳಿಕೆ ತಿಳಿಸಿದೆ.

ಎಂಜಿನಿಯರಿಂಗ್ ಪದವಿ ಪ್ರವೇಶಕ್ಕೆ ಗಣಿತ, ಭೌತಶಾಸ್ತ್ರ ಕಡ್ಡಾಯವಲ್ಲ: ಎಐಸಿಟಿಇಎಂಜಿನಿಯರಿಂಗ್ ಪದವಿ ಪ್ರವೇಶಕ್ಕೆ ಗಣಿತ, ಭೌತಶಾಸ್ತ್ರ ಕಡ್ಡಾಯವಲ್ಲ: ಎಐಸಿಟಿಇ

ಪರೀಕ್ಷೆ ಸಂಬಂಧಿಸಿದಂತೆ ಸಿಲಬಸ್, ವಯೋಮಾನ ಅರ್ಹತೆ ವಿವರ, ಮೀಸಲಾತಿ, ಸೀಟುಗಳು, ಶುಲ್ಕ, ಪರೀಕ್ಷೆ ನಡೆಯುವ ನಗರಗಳು, ರಾಜ್ಯವಾರು ಕೋಡ್ ಮುಂತಾದ ವಿವರಗಳು ಪರೀಕ್ಷೆಯ ಅರ್ಜಿ ಫಾರ್ಮ್‌ಗಳ ಸಲ್ಲಿಕೆ ಆರಂಭವಾದ ಬಳಿಕ ನೀಟ್ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿವೆ ಎಂದು ಹೇಳಿದೆ. ಮುಂದೆ ಓದಿ.

ಯಾವ ಭಾಷೆಗಳಲ್ಲಿ ಪರೀಕ್ಷೆ?

ಯಾವ ಭಾಷೆಗಳಲ್ಲಿ ಪರೀಕ್ಷೆ?

ಇಂಗ್ಲಿಷ್, ಹಿಂದಿ, ಕನ್ನಡ, ತೆಲುಗು, ತಮಿಳು, ಮರಾಠಿ, ಬಂಗಾಳಿ, ಗುಜರಾತಿ, ಒಡಿಯಾ, ಉರ್ದು ಮತ್ತು ಅಸ್ಸಾಮಿ ಭಾಷೆಗಳಲ್ಲಿ ಈ ಬಾರಿಯ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ನಡೆಯಲಿದೆ. ಆಗಸ್ಟ್ 1ರಂದು ಒಂದೇ ಅವಧಿಯಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗುವುದು ಎಂದು ಎನ್‌ಟಿಎ ಮಾಹಿತಿ ನೀಡಿದೆ.

ಎರಡು ತಿಂಗಳು ವಿಳಂಬ

ಎರಡು ತಿಂಗಳು ವಿಳಂಬ

ಎನ್‌ಟಿಎದ ಪ್ರಕಟಣೆಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ. ಸಾಮಾನ್ಯವಾಗಿ ಜೂನ್‌ನಲ್ಲಿ ನೀಟ್ ಪರೀಕ್ಷೆಗಳು ನಡೆಯುತ್ತಿದ್ದವು. ಕೋವಿಡ್ ಕಾರಣದಿಂದಾಗಿ 2020ರಲ್ಲಿ ಒಂದು ತಿಂಗಳು ತಡವಾಗಿ, ಜುಲೈನಲ್ಲಿ ನಡೆದಿತ್ತು. ಆದರೆ ಈ ವರ್ಷ ಸನ್ನಿವೇಶಗಳು ಬದಲಾಗಿದ್ದರೂ ಮತ್ತಷ್ಟು ತಡವಾಗಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ನೀಟ್ ಪರೀಕ್ಷೆ: ಮಕ್ಕಳ ಭವಿಷ್ಯದ ಕುರಿತು ಪೋಷಕರಲ್ಲಿ ಆತಂಕನೀಟ್ ಪರೀಕ್ಷೆ: ಮಕ್ಕಳ ಭವಿಷ್ಯದ ಕುರಿತು ಪೋಷಕರಲ್ಲಿ ಆತಂಕ

ಕೋವಿಡ್ ನಡುವೆ ಸುರಕ್ಷತೆ ಭೀತಿ

ಕೋವಿಡ್ ನಡುವೆ ಸುರಕ್ಷತೆ ಭೀತಿ

ಆಗಸ್ಟ್ 1ರಂದು ಪರೀಕ್ಷೆ ನಡೆಸುತ್ತಿರುವುದು ವಿದ್ಯಾರ್ಥಿಗಳ ಅಮೂಲ್ಯ ಸಮಯವನ್ನು ಮತ್ತಷ್ಟು ಹಾಳು ಮಾಡಲಿದೆ ಎಂದು ಶಿಕ್ಷಣ ತಜ್ಞರು ಮತ್ತು ಶಿಕ್ಷಕರು ಹೇಳಿದ್ದಾರೆ. ಅಲ್ಲದೆ, ಈ ಬಾರಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಖುದ್ದು ಹಾಜರಾಗಿ ಮತ್ತು ಒಂದೇ ಬಾರಿಗೆ ಪರೀಕ್ಷೆ ಬರೆಯಬೇಕಿದ್ದು, ಅವರ ಸುರಕ್ಷತೆಯ ಕುರಿತು ಕಳವಳ ಮೂಡಿಸಿದೆ.

ಎಷ್ಟು ಸೀಟುಗಳಿಗೆ ಪೈಪೋಟಿ?

ಎಷ್ಟು ಸೀಟುಗಳಿಗೆ ಪೈಪೋಟಿ?

83,075 ಎಂಬಿಬಿಎಸ್, 26,949 ಬಿಡಿಎಸ್, 52,720 ಆಯುಷ್ ಮತ್ತು 525 ಬಿವಿಸಿ ಹಾಗೂ ಎಎಚ್ ಸೀಟುಗಳ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ನಡೆಯುತ್ತದೆ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ (ಏಮ್ಸ್) 1,899 ಸೀಟುಗಳು, ಜವಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಜೆಐಪಿಎಂಇಆರ್) 249 ಸೀಟುಗಳು ಪ್ರವೇಶವನ್ನು ನೀಟ್ 2021ರ ಅಂಕಗಳ ಮೂಲಕ ನಡೆಸಲಾಗುತ್ತದೆ.

ವಿದ್ಯಾರ್ಥಿಗಳ ಮನವಿಗೆ ಸಿಗದ ಮಾನ್ಯತೆ

ವಿದ್ಯಾರ್ಥಿಗಳ ಮನವಿಗೆ ಸಿಗದ ಮಾನ್ಯತೆ

ಇದಕ್ಕೂ ಮುನ್ನ ವೈದ್ಯಕೀಯ ಕೋರ್ಸ್ ಓದಲು ಬಯಸುವ ವಿದ್ಯಾರ್ಥಿಗಳು ನೀಟ್ 2021ಅನ್ನು ಹಲವು ಸುತ್ತುಗಳಲ್ಲಿ ನಡೆಸುವಂತೆ ಎನ್‌ಟಿಎ, ಶಿಕ್ಷಣ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯಗಳಿಗೆ ಮನವಿ ಮಾಡಿದ್ದರು. ಆದರೆ, ಪರೀಕ್ಷೆಯು ಒಂದೇ ಸುತ್ತಿನಲ್ಲಿ ನಡೆಯಲಿದೆ ಮತ್ತು ಬಹು ಪ್ರಯತ್ನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

English summary
NEET 2021: NTA has announced the date for medical entrance examination to be conducted on August 1 in 11 languages and in a single shift.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X