ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ 2020 ಪರೀಕ್ಷೆ ಫಲಿತಾಂಶ ಯಾವಾಗ? ಎಲ್ಲಿ ನೋಡ್ಬಹುದು?

|
Google Oneindia Kannada News

ನವದೆಹಲಿ, ಅ.12: ಮೆಡಿಕಲ್ ಕೋರ್ಸ್ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಫಲಿತಾಂಶ ಪ್ರಕಟಿಸುವ ದಿನಾಂಕದ ಬಗ್ಗೆ ಮಾಹಿತಿ ಸಿಕ್ಕಿದೆ. ನೀಟ್ 2020 ಪರೀಕ್ಷೆ ಫಲಿತಾಂಶ ಯಾವಾಗ? ಎಂಬ ಪ್ರಶ್ನೆಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಟ್ವೀಟ್ ಮಾಡಿ ಉತ್ತರಿಸಿದ್ದಾರೆ. ಅಕ್ಟೋಬರ್ 16ರಂದು ನೀಟ್ 2020 ಫಲಿತಾಂಶ ಪ್ರಕಟವಾಗಲಿದೆ. ಎಲ್ಲಾ ಆಕಾಂಕ್ಷಿಗಳಿಗೂ ಅಭಿನಂದಿಸುತ್ತೇನೆ ಎಂದಿದ್ದಾರೆ.

ಕೊರೊನಾವೈರಸ್ ನಡುವೆಯೂ ಸೆಪ್ಟೆಂಬರ್ 13ರಂದು ನೀಟ್ 2020 ಆಯೋಜಿಸಲಾಗಿತ್ತು. ದೇಶದೆಲ್ಲೆಡೆ 3843ಕ್ಕೂ ಅಧಿಕ ಕೇಂದ್ರಗಳಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷೆ ಬರೆದಿದ್ದರು. ಕೊವಿಡ್ 19 ಕಾರಣದಿಂದ ಪರೀಕ್ಷೆ ತಪ್ಪಿಸಿಕೊಂಡವರಿಗೆ ಅಕ್ಟೋಬರ್ 14ರಂದು ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಅವರು ಈ ಕುರಿತಂತೆ ಆದೇಶ ನೀಡಿದ್ದಾರೆ. ಪರೀಕ್ಷೆ ಫಲಿತಾಂಶ ಅಕ್ಟೋಬರ್ 16ರಂದು ಅಧಿಕೃತ ವೆಬ್ ತಾಣದಲ್ಲಿ ಪ್ರಕಟವಾಗಲಿದೆ.

 ನೀಟ್ ವಿರೋಧಿಸಿ ಸೂರ್ಯ ಟ್ವೀಟ್ ವಿರುದ್ಧ ಮುಖ್ಯ ನ್ಯಾಯಾಧೀಶರಿಗೆ ಪತ್ರ ನೀಟ್ ವಿರೋಧಿಸಿ ಸೂರ್ಯ ಟ್ವೀಟ್ ವಿರುದ್ಧ ಮುಖ್ಯ ನ್ಯಾಯಾಧೀಶರಿಗೆ ಪತ್ರ

ವೈದ್ಯಕೀಯ ವೃತ್ತಿಪರ ಕೋರ್ಸ್ ಪ್ರವೇಶಕ್ಕಾಗಿ ನಡೆಸಲಾಗುವ National Eligibility-cum-Entrance Test(NEET)ವಿರುದ್ಧ ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ''ಬಡವರು, ಗ್ರಾಮೀಣ ಭಾಗದವರಿಗೆ ನೀಟ್ ಮಾರಕವಾಗಿ ಪರಿಣಮಿಸಿದೆ. ಶಾಲೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದವರು ನೀಟ್ ಪರೀಕ್ಷೆಯಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಖಾಸಗಿ ಕೋಚಿಂಗ್ ಸಿಗದ ಕಾರಣ, ಪರೀಕ್ಷೆಯಲ್ಲಿ ಫೇಲ್ ಆಗುವ ಭೀತಿಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ'' ಎಂದು ಡಿಎಂಕೆ ಸಂಸದರು ಕಿಡಿಕಾರಿದ್ದರು.

NEET 2020 result will be declared on October 16

Recommended Video

AB DE Villiers ಆಟಕ್ಕೆ ಭಾರತದ ಕೋಚ್ ಫುಲ್ ಫಿದಾ | Oneindia Kannada

ನೀಟ್ ಭಯದಿಂದ ಧರ್ಮಪುರಿಯ ಇಲಕ್ಕಿಯಂಪಟ್ಟಿ ಎಂಬ ಊರಿನ 20 ವರ್ಷದ ಯುವಕ ಎಂ ಆದಿತ್ಯ, ನಾಮಕ್ಕಲ್ ಜಿಲ್ಲೆ ತಿರುಚೆಂಗೊಡೆಯ 21ವರ್ಷದ ಮೋತಿಲಾಲ್ ಹಾಗೂ ಮದುರೈನ ಯುವತಿ ಜ್ಯೋತಿಶ್ರೀ ಎಲ್ಲರೂ ಪರೀಕ್ಷೆ ಭಯ ಹಾಗೂ ವೈಫಲ್ಯಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು.

English summary
The NEET 2020 results will be declared soon. The result once declared will be available on the official website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X