ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪರೀಕ್ಷೆ ಬರೆದ 1.33 ಮಿಲಿಯನ್ ವಿದ್ಯಾರ್ಥಿಗಳು

|
Google Oneindia Kannada News

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್‌ಇಇಟಿ) ಭಾನುವಾರ ದೇಶದಾದ್ಯಂತ ನಡೆಯಿತು.

ದೇಶದಾದ್ಯಂತ 136 ನಗರಗಳಲ್ಲಿ 13 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಸುಮಾರು 2,000 ಕೇಂದ್ರಗಳಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ರವರೆಗೆ ಪರೀಕ್ಷೆ ನಡೆಯಿತು. ಎನ್‌ಇಇಟಿ ಪರೀಕ್ಷೆ ಉತ್ತರಗಳನ್ನು ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) ಇದೇ ತಿಂಗಳು ಬಿಡುಗಡೆ ಮಾಡಲಿದೆ. ಜೂನ್ 5ರಂದು ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಎಸ್‍ಎಸ್‍ಎಲ್‍ ಸಿ ಫಲಿತಾಂಶದ ಎಸ್‍ಎಂಎಸ್ ಮೊಬೈಲ್ ಗೆ ಬರಲಿದೆ!ಎಸ್‍ಎಸ್‍ಎಲ್‍ ಸಿ ಫಲಿತಾಂಶದ ಎಸ್‍ಎಂಎಸ್ ಮೊಬೈಲ್ ಗೆ ಬರಲಿದೆ!

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ 66,000 ಸೀಟುಗಳಿಗೆ 11 ಭಾಷೆಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷಾ ಕೇಂದ್ರದೊಳಗೆ ಕಾಗದದ ಚೂರು, ಇರೇಸರ್, ಮೊಬೈಲ್ ಫೋನ್, ಪೆನ್ಸಿಲ್ ಬಾಕ್ಸ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಒಯ್ಯಲು ಅವಕಾಶ ಇರಲಿಲ್ಲ. ಅದೇ ರೀತಿ, ಪರ್ಸ್, ಕೈಚೀಲ ಕೊಂಡೊಯ್ಯಲು, ಕನ್ನಡಕ, ಬೆಲ್ಟ್, ಟೋಪಿ, ಆಭರಣ, ಶೂ, ಎತ್ತರ ಚಪ್ಪಲಿಗಳನ್ನು ಧರಿಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು.

neet 2018 exam was held across the nati on

ಪರೀಕ್ಷೆ ತುಂಬಾ ಕಷ್ಟವಾಗಿರಲಿಲ್ಲ. ಹಾಗೆಯೇ ಸರಳವಾಗಿಯೂ ಇರಲಿಲ್ಲ ಎಂದು ವಿದ್ಯಾರ್ಥಿಗಳು ಅನುಭವ ಹಂಚಿಕೊಂಡಿದ್ದಾರೆ.

ಎನ್‌ಇಇಟಿ ಪರೀಕ್ಷೆಯು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಂದ 180 ಆಯ್ಕೆ ಆಧಾರಿತ ಪ್ರಶ್ನೆಗಳನ್ನು ಒಳಗೊಂಡ ಒಂದು ಪತ್ರಿಕೆಯನ್ನು ಹೊಂದಿರುತ್ತದೆ. ಪರೀಕ್ಷಾ ಕೇಂದ್ರದಲ್ಲಿ ನೀಡಲಾಗುವ ನಿರ್ದಿಷ್ಟ ಬಾಲ್ ಪಾಯಿಂಟ್ ಪೆನ್ ಬಳಸಿ ವಿಶೇಷವಾಗಿ ವಿನ್ಯಾಸಪಡಿಸಿರುವ ಶೀಟ್‌ನಲ್ಲಿ ಉತ್ತರ ನಮೂದಿಸಬೇಕಾಗಿರುತ್ತದೆ.

English summary
National Eligibility Entrance Test (NEET) was held across India for admission to the medical and affiliated courses on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X