ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡ್ವಾಣಿ ಬುದ್ಧಿಮಾತು ರಾಜೇ, ಸುಷ್ಮಾಗೆ ಕೇಳಿಸುವುದೇ?

By Mahesh
|
Google Oneindia Kannada News

ನವದೆಹಲಿ, ಜೂ.28: ಹಗರಣದಲಿ ಸಿಲುಕಿರುವ ಸುಷ್ಮಾ ಸ್ವರಾಜ್ ಹಾಗೂ ವಸುಂಧರಾ ರಾಜೇ ಅವರಿಗೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಬುದ್ಧಿಮಾತು ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಜನಪ್ರತಿನಿಧಿಗಳು ಪ್ರಾಮಾಣಿಕರಾಗಿರಬೇಕು. ಹವಾಲಾ ಕೇಸಿನಲ್ಲಿ ನನ್ನ ಹೆಸರು ಕೇಳಿ ಬಂದಾಗ ನಾನು ತಕ್ಷಣ ರಾಜೀನಾಮೆ ನೀಡಿದ್ದೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ. [ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ನಾಲ್ಕು ಘಟವಾಣಿಯರು]

"ರಾಜಕಾರಣಿಗಳಿಗೆ ಜನರ ನಂಬಿಕೆ, ವಿಶ್ವಾಸ ಮುಖ್ಯವಾಗಿದೆ, ನಂಬಿಕೆ ಉಳಿಸಿಕೊಳ್ಳುವುದು ದೊಡ್ಡ ಜವಾಬ್ದಾರಿ. ನೈತಿಕತೆಯೇ ರಾಜಧರ್ಮ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಅತ್ಯವಶ್ಯ' ಎಂದು ಅವರು ಖ್ಯಾತ ಬಂಗಾಳಿ ದೈನಿಕ "ಆನಂದ ಬಜಾರ್‌ ಪತ್ರಿಕಾ' ಜೊತೆ ಮಾತನಾಡುತ್ತ ಹೇಳಿದ್ದಾರೆ.[ವಿವಾದಿತ ವಿದೇಶಾಂಗ ಖಾತೆ ಮಂತ್ರಿಗಳು]

1996ರಲ್ಲಿ ಬೆಳಕಿಗೆ ಬಂದ ಹವಾಲಾ ಹಗರಣದಲ್ಲಿ ಹವಾಲಾ ಬ್ರೋಕರ್‌ ಎಸ್‌.ಕೆ.ಜೈನ್‌ ಡೈರಿಯಲ್ಲಿ ಅಡ್ವಾಣಿ ಹೆಸರು ಪತ್ತೆಯಾಗಿತ್ತು. ಸಿಬಿಐ ಈ ಬಗ್ಗೆ ಕೋರ್ಟಿಗೆ ಮಾಹಿತಿ ನೀಡಿತ್ತು. ನಂತರ ಅಡ್ವಾಣಿ ರಾಜೀನಾಮೆ ನೀಡಿದ್ದರು. 1998ರಲ್ಲಿ ಆರೋಪ ಮುಕ್ತರಾದ ಮೇಲೆ ಮರು ಆಯ್ಕೆಯಾಗಿದ್ದರು.

LK Advani

ಹಗರಣದಲ್ಲಿ ಹೆಸರು ಕೇಳಿ ಬಂದ ಕ್ಷಣ, ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಕರೆ ಮಾಡಿ ನನ್ನ ನಿರ್ಧಾರ ತಿಳಿಸಿದೆ. ಕೂಡಲೇ ಆದರೆ ಅವರು ರಾಜೀನಾಮೆ ನೀಡದಿರಲು ಹೇಳಿದರು. ಆದರೆ ನನ್ನ ನಿರ್ಧಾರ ಅಚಲವಾಗಿತ್ತು' ಎಂದು ಅಡ್ವಾಣಿ ಹೇಳಿದ್ದಾರೆ.[ಲಲಿತ್ ಮೋದಿ-ಸುಷ್ಮಾ ವಿವಾದದ ಸಂಪೂರ್ಣ ಚಿತ್ರಣ]

ಲಲಿತ್ ಮೋದಿಗೆ ನೆರವಾದ ಆರೋಪ ಹೊತ್ತಿರುವ ಸುಷ್ಮಾ ಹಾಗೂ ರಾಜೇ ಅವರ ರಾಜೀನಾಮೆ ಅಗತ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಡ್ವಾಣಿ, ನಾನು ನನ್ನ ವಿಚಾರವನ್ನು ಹೇಳಿದ್ದೇನಷ್ಟೆ. ಬೇರೆಯವರು ಏನು ಮಾಡುತ್ತಾರೆ, ಅವರ ವಿಚಾರ, ತೊಂದರೆಗಳೇನೆಂದು ನನಗೆ ಗೊತ್ತಿಲ್ಲ, ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ' ಎಂದಿದ್ದಾರೆ.[ಲಮೋ ಕಂಡರೆ ರಾಜಕಾರಣಿಗಳು ಏಕೆ ಹೆದರುತ್ತಾರೆ?]

ಈ ಹಿಂದೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದನ್ನು ಸ್ಮರಿಸಿದ ಅಡ್ವಾಣಿ ಆರೆಸ್ಸೆಸ್ ಶಾಖೆಗಳಲ್ಲಿ ನಿಷ್ಠೆ, ಪ್ರಮಾಣಿಕತೆ ಬಗ್ಗೆ ಪಾಠ ಕಲಿತವರು ಭ್ರಷ್ಟಾಚಾರದ ಜೊತೆ ಬಾಳುವುದಿಲ್ಲ ಎಂದರು. (ಪಿಟಿಐ)

English summary
In a veiled message to the Modi government in the wake of the controversy over Sushma Swaraj and Vasundhara Raje, BJP patriarch LK Advani on Saturday said there is a need to maintain probity in public life and recalled how he resigned soon after his name cropped up in the Hawala scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X