ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿನಿಂದ ಮಣಿಶಂಕರ್ ಅಯ್ಯರ್ ಅಮಾನತು

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 07: ಗುಜರಾತ್ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನದಂದು ಕಾಂಗ್ರೆಸ್ ಹಾಗೂ ಬಿಜೆಪಿಯ ವಾಕ್ಸಮರ ತಾರಕಕ್ಕೇರಿದೆ. ಹಿರಿಯ ಕಾಂಗ್ರೆಸ್ಸಿಗ ಮಣಿಶಂಕರ್ ಅಯ್ಯರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿದ್ದಕ್ಕೆ ಭಾರಿ ಬೆಲೆ ತೆತ್ತಿದ್ದಾರೆ. ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಮಣಿಶಂಕರ್ ಅಯ್ಯರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನೀಚ' ಎಂದು ಕರೆದಿದ್ದಲ್ಲದೆ 'ಸಭ್ಯತೆ' ಇಲ್ಲದವನು ಎಂದು ಹೇಳಿದ್ದರು. ಈ ಬಗ್ಗೆ ಭಾರಿ ಟೀಕೆಗಳು ವ್ಯಕ್ತವಾಗಿತ್ತು.

Neech remark against Modi: Congress suspends Mani Shankar Aiyar

ಇದಾದ ಬಳಿಕ ಕ್ಷಮೆ ಕೋರಿದ್ದ ಮಣಿಶಂಕರ್, ನನಗೆ ಮೋದಿ ಅವರ ಜಾತಿ, ಧರ್ಮದ ಬಗ್ಗೆ ಗೊತ್ತಿಲ್ಲ, ನಾನು ಅವರು ನೀಚ ಜಾತಿಯವರು ಎಂದು ಹೇಳಿಲ್ಲ. ನನ್ನ ಮಾತನ್ನು ಬದಲಾಯಿಸಿ, ತಿರುಚಿದ್ದರೆ ನಾನು ಹೊಣೆಗಾರನಲ್ಲ. ಆದರೆ, ಆ ಪದ ಬಳಕೆಯಿಂದ ಯಾರಾಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದರು.

ಆದರೆ, ಕಾಂಗ್ರೆಸ್ ಕಠಿಣ ನಿರ್ಧಾರ ಕೈಗೊಂಡಿದ್ದು, ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಪ್ರಾಥಮಿಕ ಸದಸ್ಯತ್ವವನ್ನು ಅಯ್ಯರ್ ಕಳೆದುಕೊಂಡಿದ್ದಾರೆ. ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದ್ದು, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ.

ಡಾ. ಬಿ. ಆರ್ ಅಂಬೇಡ್ಕರ್ ಅವರು ಕಂಡ ಕನಸನ್ನು ನನಸಾಗಿಸಲು ಶ್ರಮಿಸಿದವರಲ್ಲಿ ಜವಹರಲಾಲ್ ನೆಹರೂ ಅಗ್ರಗಣ್ಯರು. ದೇಶಕ್ಕಾಗಿ ದುಡಿದ ಇಂಥ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುವ ಇಂಥ ವ್ಯಕ್ತಿ(ಮೋದಿ)ಯನ್ನು ನೀಚ ಎನ್ನದೇ ಇರಲಾಗದು, ಆತನಿಗೆ ಯಾವುದೇ ನಾಗರಿಕ ಸಭ್ಯತೆಗಳಿಲ್ಲ. ಸತ್ಯಂತ ಹೀನಾಯ ರೀತಿಯ ರಾಜಕೀಯವನ್ನು ಮಾಡುತ್ತಿದ್ದಾರೆ ಎಂದು ಎಎನ್ಐ ಜತೆ ಮಾತನಾಡುತ್ತಾ ಅಯ್ಯರ್ ಹೇಳಿದ್ದರು.

English summary
Neech remark against Modi: Congress suspends Mani Shankar Aiyar. Congress leader Mani Shankar Aiyar called Prime Minister Narendra Modi a “neech aadmi” (vile man) on Thursday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X