ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳ; ಕೇಂದ್ರದ ಆತಂಕ

|
Google Oneindia Kannada News

ನವದೆಹಲಿ, ಮೇ 11; ಕೋವಿಡ್ ಸೋಂಕಿನ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿದೆ. ವಿವಿಧ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿದೆ. 734 ಜಿಲ್ಲೆಗಳ ಪೈಕಿ 640 ಜಿಲ್ಲೆಗಳಲ್ಲಿ ಶೇ 90ರಷ್ಟು ಸೋಂಕಿನ ಪ್ರಕರಣಗಳಿವೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.

ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಗಳಲ್ಲಿ ಆಕ್ಸಿಜನ್, ಬೆಡ್ ಸಮಸ್ಯೆಯಿಂದ ಕೋವಿಡ್‌ ರೋಗಿಗಳಿಗೆ ಸಮಸ್ಯೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಕೋವಿಡ್‌ ವಿರುದ್ಧದ ಲಸಿಕೆ ನೀಡುವುದು ಸಹ ಸಮಸ್ಯೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಕರ್ನಾಟಕದ ಕೋವಿಡ್ ಪ್ರಕರಣ ಇಳಿಕೆ, ಪರೀಕ್ಷೆ ಸಂಖ್ಯೆಯೂ ಕಡಿಮೆ ಕರ್ನಾಟಕದ ಕೋವಿಡ್ ಪ್ರಕರಣ ಇಳಿಕೆ, ಪರೀಕ್ಷೆ ಸಂಖ್ಯೆಯೂ ಕಡಿಮೆ

ರಾಜ್ಯಗಳು ಕೋವಿಡ್ ಸೋಂಕು ಜಿಲ್ಲೆಗಳಲ್ಲಿ ಹರಡುವುದನ್ನು ತಪ್ಪಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಐಸಿಎಂಆರ್‌ ಕೋವಿಡ್‌ ಪರೀಕ್ಷೆಯ ವಿಧಾನದ ಬಗ್ಗೆಯೂ ಹೊಸ ಮಾರ್ಗಸೂಚಿ ಹೊರಡಿಸಿದೆ.

ಭಾರತದಲ್ಲಿ ಭೀತಿ: 1ನೇ ಅಲೆಯಲ್ಲಿ ಸೋಂಕು, 2ನೇ ಅಲೆಯಲ್ಲಿ ಸಾವು!?ಭಾರತದಲ್ಲಿ ಭೀತಿ: 1ನೇ ಅಲೆಯಲ್ಲಿ ಸೋಂಕು, 2ನೇ ಅಲೆಯಲ್ಲಿ ಸಾವು!?

Nearly 90% India Has High Positivity Rate Says Union Govt

ಆಂಟಿಜೆನ್ ಟೆಸ್ಟ್‌ಗಳನ್ನು ಕಡಿಮೆ ಮಾಡಿ ಹೆಚ್ಚಾಗಿ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಿ ಎಂದು ಐಸಿಎಂಆರ್‌ ಹೇಳಿದೆ. ರಾಜ್ಯಗಳ ಕೋವಿಡ್ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ಉನ್ನತ ಮಟ್ಟದ ಸಭೆಯನ್ನು ಮಂಗಳವಾರ ನಡೆಸಲಾಗಿದ್ದು, ಹಲವಾರು ಅಂಶಗಳ ಕುರಿತು ವಿವರವಾದ ಚರ್ಚೆಯನ್ನು ನಡೆಸಲಾಗಿದೆ.

ಕೊರೊನಾ ಸೋಂಕು ತಡೆಗೆ ಡಬಲ್ ಮಾಸ್ಕ್: ಎಂಥಾ ಮಾಸ್ಕ್ ಧರಿಸಬೇಕು, ಎಂಥದ್ದು ಧರಿಸಕೂಡದು? ಕೊರೊನಾ ಸೋಂಕು ತಡೆಗೆ ಡಬಲ್ ಮಾಸ್ಕ್: ಎಂಥಾ ಮಾಸ್ಕ್ ಧರಿಸಬೇಕು, ಎಂಥದ್ದು ಧರಿಸಕೂಡದು?

ರಾಜ್ಯಗಳು ಪರೀಕ್ಷೆ, ಕಂಟೈನ್ಮೆಂಟ್, ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಹೆಚ್ಚು ಗಮನ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ರಾಜ್ಯಗಳು ಜಿಲ್ಲೆಗಳ ಪರಿಸ್ಥಿತಿ ಅವಲೋಕನ ಮಾಡಿ, ಶೇ 10 ಮತ್ತು ಅದಕ್ಕಿಂತ ಹೆಚ್ಚು ಸೋಂಕಿತರು ಇರುವ ಜಿಲ್ಲೆಗಳಿಗೆ ನೋಡೆಲ್ ಆಫೀಸರ್ ನೇಮಕ ಮಾಡಬೇಕು ಎಂದು ಸೂಚಿಸಲಾಗಿದೆ.

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್‌ ಎಂದು ಘೋಷಣೆ ಮಾಡಬೇಕು ಎಂದು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದರು. ಇದರ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ರಾಜ್ಯಗಳಿಗೆ ಕೇಂದ್ರ ನಿರ್ದೇಶನ ನೀಡಿದೆ.

English summary
In India 640 districts out of the 734 are above the national threshold level of 5 per cent positivity rate. The States have been requested to take action to testing, containment and infrastructure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X