ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತಿರದ ದೃಷ್ಟಿ ನಷ್ಟ: ಭಾರತದಲ್ಲಿ ದ್ವಿಗುಣಗೊಂಡ ಪ್ರಕರಣಗಳು, ಕಾರಣ?

|
Google Oneindia Kannada News

ನವದೆಹಲಿ,ಅಕ್ಟೋಬರ್ 20: ದೃಷ್ಟಿ ಕಳೆದುಕೊಳ್ಳುತ್ತಿರುವವರು ಸಂಖ್ಯೆಯು ದ್ವಿಗುಣಗೊಂಡಿದೆ.

ಹೆಚ್ಚಿನ ಮಧುಮೇಹ ಪ್ರಕರಣಗಳಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕುರಿತು ಎರಡು ಅಂತಾರಾಷ್ಟ್ರೀಯ ಸಂಸ್ಥೆಗಳು ಮಾಹಿತಿಯನ್ನು ಒದಗಿಸಿದೆ.
1990ರಲ್ಲಿ 57.7 ಮಿಲಿಯನ್ ಇದ್ದ ಪ್ರಕರಣಗಳು ಇದೀಗ 2020ರ ಹೊತ್ತಿಗೆ 137.6 ಮಿಲಿಯನ್‌ಗೆ ಏರಿಕೆಯಾಗಿದೆ.

ಸಮೀಪದ ದೃಷ್ಟಿ ನಷ್ಟ ಎಂದರೆ ಹತ್ತಿರದಲ್ಲಿರುವ ವಸ್ತುಗಳನ್ನು ಕೂಡ ಗುರುತಿಸಲು ಸಾಧ್ಯವಾಗುವುದಿಲ್ಲ.ಇದನ್ನು ಫ್ರೆಸ್ ಬಯೋಪಿಯಾ ಎಂದು ಕೂಡ ಕರೆಯುತ್ತಾರೆ.
ಜಗತ್ತಿನಲ್ಲಿ 507 ಮಿಲಿಯನ್ ಪ್ರಕರಣಗಳು ದೃಷ್ಟಿ ನಷ್ಟದ ಪ್ರಕರಣಗಳಾಗಿವೆ.ಅವುಗಳಲ್ಲಿ 137.6 ಮಿಲಿಯನ್ ಮಂದಿ ಭಾರತದಲ್ಲಿದ್ದಾರೆ.

ಮಧ್ಯಮ ಮತ್ತು ತೀವ್ರ ದೃಷ್ಟಿ ಹೀನತೆ ಪ್ರಕರಣಗಳು 1990ರಲ್ಲಿ 40.6 ಮಿಲಿಯನ್‌ ಇತ್ತು ಇದೀಗ 79 ಮಿಲಿಯನ್‌ ಅಷ್ಟಾಗಿದೆ.

ರೋಗಿಯು 3/60ರಷ್ಟು ದೃಷ್ಟಿ ಹೊಂದಿದ್ದರೆ ಅವರು ಮೂರು ಅಡಿಗಳ ಅಂತರದಲ್ಲಿರುವ ವಸ್ತುವನ್ನು ವೀಕ್ಷಿಸಬಹುದು ಎಂದರ್ಥ, ದೃಷ್ಟಿ 3/0ಗಿಂತ ಕಡಿಮೆ ಇದ್ದರೆ ಕುರುಡುತನ ಉಂಟಾಗುತ್ತದೆ.

2016ರ ಮಾಹಿತಿ ಪ್ರಕಾರ ಭಾರತದಲ್ಲಿ 6 ಮಂದಿ ಮಧುಮೇಹ ರೋಗಿಗಳಲ್ಲಿ ಒಬ್ಬರಿಗೆ ದೃಷ್ಟಿದೋಷವಿದೆ.ರೆತಿನೋಪತಿ, ಕ್ಯಾಟರಾಕ್ಟ್ ಇನ್ನಿತರೆ ಸಂದರ್ಭಗಳಲ್ಲಿ ಕುರುಡುತನ ಉಂಟಾಗುತ್ತದೆ.

ಜೀವಿತಾವಧಿ ಹೆಚ್ಚಳ

ಜೀವಿತಾವಧಿ ಹೆಚ್ಚಳ

1990ರಲ್ಲಿ ಜೀವಿತಾವಧಿ 59 ವರ್ಷ ಇತ್ತು, 2020ರಲ್ಲಿ 70ವರ್ಷಕ್ಕೇರಿದೆ. ಸಮೀಕ್ಷೆಯಲ್ಲಿ ದೃಷ್ಟಿ ದೋಷವಿರುವವರಲ್ಲಿ ಶೇ.78ರಷ್ಟು ಮಂದಿ 50ವರ್ಷ ಮೇಲ್ಪಟ್ಟವರು ಎಂದು ತಿಳಿದುಬಂದಿದೆ.
ಮಧುಮೇಹ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ವಿಶ್ವದಲ್ಲಿ 425 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅದರಲ್ಲಿ 70 ಮಿಲಿಯನ್ ಭಾರತೀಯರಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ. ಈ ಸಂಖ್ಯೆ 2025 ಆಗುವಷ್ಟರಲ್ಲಿ ದುಪ್ಪಟ್ಟು ಆಗಲಿದೆ ಎಂದು ವರದಿ ಹೇಳಿದೆ.

ಮಧುಮೇಹ ಅಪಾಯಕಾರಿ

ಮಧುಮೇಹ ಅಪಾಯಕಾರಿ

ಮಧುಮೇಹ ಪುರುಷ ಹಾಗೂ ಮಹಿಳೆಯರಲ್ಲಿ ಅಪಾಯಕಾರಿಯಾಗಿದ್ದು ಅದರ ಪರಿಣಾಮ ಪುರುಷ ಹಾಗೂ ಮಹಿಳೆಯರಲ್ಲಿ ಭಿನ್ನವಾಗಿರುತ್ತದೆ ಎಂದು ಅಧ್ಯಯನ ಹೇಳಿದೆ. ಈ ಲೇಖನದಲ್ಲಿ ಮಧುಮೇಹ ಬಂದರೆ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ

ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು

ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು

ಮಧುಮೇಹ ಸಮಸ್ಯೆ ಇರುವವರಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಂಡು ಬರುವುದು. ಅದರಲ್ಲೂ ಪುರುಷರಿಗಿಂತ ಎರಡು ಪಟ್ಟು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು ಕಂಡು ಬರುವುದು. ಅಲ್ಲದೆ ಮಧುಮೇಹದಿಂದ ಕಿಡ್ನಿ ಸಮಸ್ಯೆ, ಕುರುಡುತನ, ಖಿನ್ನತೆ ಸಮಸ್ಯೆ ಕೂಡ ಕಾಡುವುದು.

ಮಧುಮೇಹ ರೆಟಿನೋಪತಿ

ಮಧುಮೇಹ ರೆಟಿನೋಪತಿ

ಮಧುಮೇಹದಿಂದ ಬಳಲುತ್ತಿರುವವರು ತಮ್ಮ ಆರೋಗ್ಯದ ಬಗ್ಗೆ ತುಂಬ ಕಾಳಜಿ ವಹಿಸಬೇಕಾಗುತ್ತದೆ. ಯಾವುದೇ ಸಣ್ಣ ಆರೋಗ್ಯ ಸಮಸ್ಯೆ ಕೂಡ ಮಧುಮೇಹಿಗಳ ಪಾಲಿಗೆ ದೊಡ್ಡದಾಗಿ ಕಾಡಬಹುದು. ಮಧುಮೇಹದ ಮೇಲೆ ನಿಯಂತ್ರಣವಿಲ್ಲದಿದ್ದರೆ ಅದು ಕಣ್ಣಿಗೂ ಆಪತ್ತನ್ನು ತರಬಹುದು. 'ಮಧುಮೇಹ ರೆಟಿನೋಪತಿ' ಹೆಸರೇ ಸೂಚಿಸುವಂತೆ ಮಧುಮೇಹಿಗಳ ಪಾಲಿಗೆ ತುಂಬ ಅಪಾಯಕಾರಿಯಾಗಿದೆ. ಹೆಚ್ಚಿನವರಿಗೆ ಇಂತಹುದೊಂದು ರೋಗವಿದೆ ಎನ್ನುವುದೂ ಗೊತ್ತಿಲ್ಲ.
ಅಂದ ಹಾಗೆ ಮಧುಮೇಹ ರೆಟಿನೋಪತಿ ದಿಢೀರ್ನೆ ಬರುವ ರೋಗವಲ್ಲ. ಕಾಲಕ್ರಮೇಣ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾದಾಗ ಅದು ಕಣ್ಣಿನ ರೆಟಿನಾ ಅಥವಾ ಅಕ್ಷಿಪಟಲ ಮತ್ತು ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ, ಪರಿಣಾಮವಾಗಿ ಅಂಧತ್ವವುಂಟಾಗುತ್ತದೆ. ಹೀಗಾಗಿ ನೀವು ಮಧುಮೇಹಿಗಳಾಗಿದ್ದಲ್ಲಿ ಇದರ ಬಗ್ಗೆ ಮಾಹಿತಿಗಳನ್ನು ಅಗತ್ಯವಾಗಿ ತಿಳಿದುಕೊಳ್ಳಲೇಬೇಕು.

ಟೈಪ್ 1, ಟೈಪ್ 2 ಡಯಾಬಿಟಿಸ್

ಟೈಪ್ 1, ಟೈಪ್ 2 ಡಯಾಬಿಟಿಸ್

ಮಧುಮೇಹ ರೆಟಿನೋಪತಿ ಟೈಪ್ 1 ಮತ್ತು ಟೈಪ್ 2 ಹೀಗೆ ಎರಡೂ ಹಂತಗಳ ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮಧುಮೇಹ ರೆಟಿನೋಪತಿಗೆ ಕಾರಣವಾಗುವ ಕೆಲವು ಅಪಾಯಕಾರಿ ಅಂಶಗಳು ಇಲ್ಲಿವೆ.
ಈಗ ತಾನೇ ಮಧುಮೇಹ ಪತ್ತೆಯಾಗಿರುವವರಿಗಿಂತ ಸುದೀರ್ಘ ಕಾಲದಿಂದ ಮಧುಮೇಹದಿಂದ ಬಳಲುತ್ತಿರುವವರು ಈ ರೋಗಕ್ಕೆ ಗುರಿಯಾಗುವ ಅಪಾಯ ಹೆಚ್ಚು.

English summary
Increased life expectancy and a high diabetes burden has increased the number of Indians with eyesight issues. Cases of near vision loss have more than doubled in the country from 57.7 million in 1990 to 137.6 million in 2020, according to new data provided by two international bodies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X