• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿ-ವೋಟರ್ ಸಮೀಕ್ಷೆ : ಎನ್‌ಡಿಎಗೆ ಬಹುಮತಕ್ಕೆ 8 ಸ್ಥಾನ ಕಡಿಮೆ!

|

ಬೆಂಗಳೂರು, ಮಾರ್ಚ್ 11 : ಎನ್‌ಡಿಎ ಮೈತ್ರಿಕೂಟ ಬಹುಮತಕ್ಕಿಂತ 8 ಸ್ಥಾನಗಳನ್ನು ಕಡಿಮೆ ಪಡೆಯಲಿದೆ ಎಂದು ಚುನಾವಣಾ ಸಮೀಕ್ಷೆ ಹೇಳಿದೆ. ಈಗಾಗಲೇ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು 7 ಹಂತದಲ್ಲಿ ಚುನಾವಣೆಗಳು ನಡೆಯಲಿವೆ.

ಸಿ-ವೋಟರ್ ಐಎಎನ್‌ಎಸ್‌ಗಾಗಿ ಚುನಾವಣಾ ಸಮೀಕ್ಷೆಯನ್ನು ನಡೆಸಿದೆ. ಮಾರ್ಚ್ ತಿಂಗಳಿನಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ. ನರೇಂದ್ರ ಮೋದಿ ಮೋದಿ ಸರ್ಕಾರ ಉಗ್ರರ ಶಿಬಿರಗಳ ಮೇಲೆ ಏರ್ ಸ್ಟ್ರೈಕ್ ನಡೆಸಿದ ಬಳಿಕ ನಡೆಸಲಾದ ಸಮೀಕ್ಷೆ ಇದಾಗಿದೆ.

ಇಂಡಿಯಾ TV-CNX ಸಮೀಕ್ಷೆ: ಬಿಜೆಪಿ 238, ಕಾಂಗ್ರೆಸ್ ಗೆ 82 ಸ್ಥಾನ

ಉಗ್ರರ ಶಿಬಿರಗಳ ಮೇಲೆ ಮಾಡಿದ ದಾಳಿಯು ಚುನಾವಣೆಯಲ್ಲಿ ಸಹಾಯಕವಾಗಲಿದೆ. ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಹಾಘಟ್‌ ಬಂಧನ್‌ಗೆ ಹಿನ್ನಡೆ ಆಗಲಿದೆ.

ಟೈಮ್ಸ್ ಆನ್‌ಲೈನ್ ಸಮೀಕ್ಷೆ: ಮುಂದೆಯೂ ಮೋದಿ ಸರ್ಕಾರ ಬರೋದು ಪಕ್ಕಾ

ಲೋಕಸಭೆಯಲ್ಲಿ ಬಹುಮತ ಪಡೆಯಲು 273 ಸೀಟುಗಳ ಅಗತ್ಯವಿದೆ. ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 264 ಸ್ಥಾನಗಳನ್ನು ಪಡೆಯಲಿದೆ. ಚುನಾವಣೋತ್ತರ ಮೈತ್ರಿಯಿಂದಾಗಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಸಮೀಕ್ಷೆ ಹೇಳಿದೆ.

Times Now-VMR ಸಮೀಕ್ಷೆ: ಎನ್ ಡಿಎ 252, ಯುಪಿಎ 147, ಇತರರು 144

ಯಾರಿಗೆ ಎಷ್ಟು ಸ್ಥಾನಗಳು?

ಯಾರಿಗೆ ಎಷ್ಟು ಸ್ಥಾನಗಳು?

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 264, ಯುಪಿಎ ಮೈತ್ರಿಕೂಟ 141 ಮತ್ತು ಇತರರು 138 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ. ಸಮೀಕ್ಷೆಯ ಪ್ರಕಾರ ಎನ್‌ಡಿಎ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ಸಂಖ್ಯೆಗಿಂತ 8 ಸ್ಥಾನಗಳನ್ನು ಕಡಿಮೆ ಪಡೆಯಲಿದೆ.

ಚುನಾವಣೋತ್ತರ ಮೈತ್ರಿ

ಚುನಾವಣೋತ್ತರ ಮೈತ್ರಿ

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 264 ಸೀಟುಗಳಲ್ಲಿ ಜಯಗಳಿಸಲಿದೆ. ಒಂದು ವೇಳೆ ವೈಎಸ್ಆರ್ ಕಾಂಗ್ರೆಸ್, ಎಂಎನ್‌ಎಫ್, ಬಿಜೆಡಿ, ಟಿಆರ್‌ಎಸ್ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡರೆ ಮೈತ್ರಿಕೂಟದ ಸಂಖ್ಯೆ 307ಕ್ಕೆ ಏರಿಕೆಯಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಉತ್ತರ ಪ್ರದೇಶದಲ್ಲಿ ಎನ್‌ಡಿಎಗೆ ಹೆಚ್ಚು ಸ್ಥಾನ

ಉತ್ತರ ಪ್ರದೇಶದಲ್ಲಿ ಎನ್‌ಡಿಎಗೆ ಹೆಚ್ಚು ಸ್ಥಾನ

80 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೊಡ್ಡ ರಾಜ್ಯ ಉತ್ತರ ಪ್ರದೇಶ. ಬಿಜೆಪಿಯನ್ನು ಇಲ್ಲಿ ಸೋಲಿಸಬೇಕು ಎಂದು ಬಿಎಸ್ಪಿ ಮತ್ತು ಎಸ್‌ಪಿ ಹೊಂದಾಣಿಕೆ ಮಾಡಿಕೊಂಡಿವೆ. ಎಸ್‌ಪಿ 37, ಬಿಎಸ್‌ಪಿ 38 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. ಆದರೆ, ಎನ್‌ಡಿಎ ಮೈತ್ರಿಕೂಟ ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಕಾಂಗ್ರೆಸ್‌ಗೆ 86 ಸೀಟು

ಕಾಂಗ್ರೆಸ್‌ಗೆ 86 ಸೀಟು

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 86 ಸೀಟುಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಯುಪಿಎ ಮೈತ್ರಿಕೂಟದಲ್ಲಿರುವ ಇತರ ಪಕ್ಷಗಳು 55 ಸ್ಥಾನಗಳಲ್ಲಿ ಜಯಗಳಿಸಲಿವೆ. ಯುಪಿಎ ಚುನಾವಣೋತ್ತರ ಮೈತ್ರಿಯನ್ನು ಎಐಯುಡಿಎಫ್, ಎಲ್‌ಡಿಎಫ್, ಎಂಜಿಬಿ, ಟಿಎಂಸಿ ಜೊತೆ ಮಾಡಿಕೊಂಡರೆ ಮೈತ್ರಿಕೂಟದ ಸಂಖ್ಯೆ 226ಕ್ಕೆ ಏರಿಕೆಯಾಗಲಿದೆ.

ಯಾವ ರಾಜ್ಯದಲ್ಲಿ ಎಷ್ಟು ಸ್ಥಾನ

ಯಾವ ರಾಜ್ಯದಲ್ಲಿ ಎಷ್ಟು ಸ್ಥಾನ

ಬಿಜೆಪಿ ಬಿಹಾರದಲ್ಲಿ 36 (2014ರಲ್ಲಿ 22), ಗುಜರಾತ್‌ನಲ್ಲಿ 24, ಕರ್ನಾಟಕದಲ್ಲಿ 16, ಮಧ್ಯಪ್ರದೇಶದಲ್ಲಿ 24, ಮಹಾರಾಷ್ಟ್ರದಲ್ಲಿ 36, ಓಡಿಸ್ಸಾದಲ್ಲಿ 12, ರಾಜಸ್ಥಾನದಲ್ಲಿ 20 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ.

ಕಾಂಗ್ರೆಸ್‌ಗೆ ಎಷ್ಟು ಸ್ಥಾನ?

ಕಾಂಗ್ರೆಸ್‌ಗೆ ಎಷ್ಟು ಸ್ಥಾನ?

ಕಾಂಗ್ರೆಸ್ ಪಕ್ಷ ಅಸ್ಸಾಂನಲ್ಲಿ 7, ಛತ್ತೀಸ್‌ಗಢ್‌ನಲ್ಲಿ 5, ಕೇರಳದಲ್ಲಿ 14, ಕರ್ನಾಟಕದಲ್ಲಿ 9, ಜಾರ್ಖಂಡ್‌ನಲ್ಲಿ 5, ಮಧ್ಯಪ್ರದೇಶದಲ್ಲಿ 5, ಮಹಾರಾಷ್ಟ್ರದಲ್ಲಿ 7, ಪಂಜಾಬ್‌ನಲ್ಲಿ 12, ರಾಜಸ್ಥಾನದಲ್ಲಿ 5, ತಮಿಳುನಾಡಿನಲ್ಲಿ 4, ಉತ್ತರ ಪ್ರದೇಶದಲ್ಲಿ 4 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to the latest poll survey conducted by CVoter for IANS BJP led National Democratic Alliance (NDA) will fall marginally short of a majority in the Lok Sabha elections 2019. The poll has projected that the NDA will get 264 seats and Congress led United Progressive Alliance (UPA) is expected to reach 141 number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more